ಭಾರತದಲ್ಲಿ 108MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

|

Updated on: Sep 24, 2023 | 2:14 PM

Infinix Zero 30 5G Launched in India: ಭಾರತದಲ್ಲಿ ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್​ಫೋನ್ ಅನಾವರಣಗೊಂಡಿದೆ. ಈ ಫೋನ್ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಇದರ ಬೇಸ್ ಮಾಡೆಲ್ 8GB RAM + 128GB ಸ್ಟೋರೇಜ್ ಮಾದರಿಗೆ 23,999 ರೂ. ಇದೆ. ಸೆಪ್ಟೆಂಬರ್ 8 ರಂದು ಖರೀದಿಗೆ ಸಿಗಲಿದೆ.

ಭಾರತದಲ್ಲಿ 108MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Infinix Zero 30 5G
Follow us on

ಚೀನಾದ ಟ್ರಾನ್ಸ್‌ಷನ್ ಹೋಲ್ಡಿಂಗ್ಸ್ ಒಡೆತನದ ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಇಂದು ಭಾರತದಲ್ಲಿ ಇನ್ಫಿನಿಕ್ಸ್ ಜಿರೋ 30 5G (Infinix Zero 30 5G) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಇನ್ಫಿನಿಕ್ಸ್ ಜಿರೋ 20 ಫೋನಿನ ಉತ್ತರಾಧಿಕಾರಿ ಆಗಿದೆ. ಜಿರೋ 30 5G ಸ್ಮಾರ್ಟ್​ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ನಲ್ಲಿ ರನ್ ಆಗುತ್ತದೆ. 108-ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಜೊತೆಗೆ ಬಲಿಷ್ಠ ಬ್ಯಾಟರಿ, ಆಕರ್ಷಕ ಡಿಸ್ ಪ್ಲೇ ಕೂಡ ಇದೆ. ಹಾಗಾದರೆ, ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ಇನ್ಫಿನಿಕ್ಸ್ ಜಿರೋ 30 5G ಬೆಲೆ, ಲಭ್ಯತೆ:

ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್​ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯನ್ನು ರಿಲೀಸ್ ಆಗಿದೆ. ಇದರ ಬೇಸ್ ಮಾಡೆಲ್ 8GB RAM + 128GB ಸ್ಟೋರೇಜ್ ಮಾದರಿಗೆ 23,999 ರೂ. ಇದೆ. ಅಂತೆಯೆ 12GB RAM + 256GB ಸಂಗ್ರಹಣೆಯ ಟಾಪ್-ಎಂಡ್ ರೂಪಾಂತರಕ್ಕೆ 24,999 ರೂ. ನಿಗದಿ ಮಾಡಲಾಗಿದೆ. ಈ 5G ಹ್ಯಾಂಡ್‌ಸೆಟ್ ಅನ್ನು ಗೋಲ್ಡನ್ ಅವರ್ ಮತ್ತು ರೋಮ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗಿದೆ.

ಭಾರತದಲ್ಲಿ 200MP ಕ್ಯಾಮೆರಾದ ಹಾನರ್ 90 ಫೋನ್ ಬಿಡುಗಡೆ ಖಚಿತ: ಸ್ವಾಗತಿಸಲು ಸಿದ್ದವಾಗಿದೆ ಅಮೆಜಾನ್

ಇದನ್ನೂ ಓದಿ
ಬಿಡುಗಡೆಯಾದ ಒಂದೇ ತಿಂಗಳಲ್ಲಿ ಇನ್ಫಿನಿಕ್ಸ್ ಜಿಟಿ 10 ಪ್ರೊ ಬೆಲೆ ಹೆಚ್ಚಳ
ಫ್ಲಿಪ್‌ಕಾರ್ಟ್​ನಲ್ಲಿ ಶುರುವಾಗಿದೆ ಬಿಗ್ ಬಚತ್ ಧಮಾಲ್ ಸೇಲ್
ಸ್ಯಾಮ್​ಸಂಗ್​ನಿಂದ ಬರುತ್ತಿದೆ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಫೋನ್
ಮೊಬೈಲ್ ನಂಬರ್ ಹಾಕದೆ ವಾಟ್ಸ್​ಆ್ಯಪ್ ಉಪಯೋಗಿಸುವ ಟ್ರಿಕ್ ನಿಮಗೆ ಗೊತ್ತೇ?

ಪ್ರಸ್ತುತ ಇನ್ಫಿನಿಕ್ಸ್ ಜಿರೋ 30 5G ಫ್ಲಿಪ್‌ಕಾರ್ಟ್‌ನಲ್ಲಿ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದ್ದು, ಸೆಪ್ಟೆಂಬರ್ 8 ರಂದು ಖರೀದಿಗೆ ಸಿಗಲಿದೆ. ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ಫೋನನ್ನು ಗ್ರಾಹಕರು 2,000 ರೂ. ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

ಇನ್ಫಿನಿಕ್ಸ್ ಜಿರೋ 30 5G ಫೀಚರ್ಸ್:

ಡ್ಯುಯಲ್ ಸಿಮ್ (ನ್ಯಾನೋ) ಇನ್ಫಿನಿಕ್ಸ್ ಜಿರೋ 30 5G ಆಂಡ್ರಾಯ್ಡ್ 13 -ಆಧಾರಿತ XOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.78-ಇಂಚಿನ ಪೂರ್ಣ-HD+ (2,400×1,080 ಪಿಕ್ಸೆಲ್‌ಗಳು) 60-ಡಿಗ್ರಿ ಕರ್ವ್ಡ್ AMOLED ಡಿಸ್ ಪ್ಲೇ ಜೊತೆಗೆ 144Hz ರಿಫ್ರೆಶ್ ದರ ಹೊಂದಿದೆ. ಈ ಹ್ಯಾಂಡ್‌ಸೆಟ್ ಎರಡೂ ಬದಿಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ನೀಡಲಾಗಿದ್ದು, 12GB RAM ವರೆಗೆ ಇರುತ್ತದೆ. ಆನ್‌ಬೋರ್ಡ್ ಮೆಮೊರಿಯನ್ನು 21GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಫೋನ್​ನಲ್ಲಿ ಕ್ವಾಡ್ LED ಫ್ಲ್ಯಾಶ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ. OIS ಬೆಂಬಲದೊಂದಿಗೆ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. 50-ಮೆಗಾಪಿಕ್ಸೆಲ್​ನ ಸೆಲ್ಫಿ ಕ್ಯಾಮೆರಾ ಇದರಲ್ಲಿದ್ದು, ಡ್ಯುಯಲ್ LED ಫ್ಲ್ಯಾಷ್‌ನೊಂದಿಗೆ ಇದು ಬರುತ್ತದೆ. ಮುಂಭಾಗದ ಕ್ಯಾಮೆರಾ ಪ್ರತಿ ಸೆಕೆಂಡಿಗೆ 60 ಫ್ರೇಮ್‌ಗಳಲ್ಲಿ 4K ವಿಡಿಯೋ ರೆಕಾರ್ಡ್ ಮಾಡುತ್ತಂತೆ.

ಇನ್ಫಿನಿಕ್ಸ್ ಜಿರೋ 30 5G 68W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 80 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳು 5G, NFC, GPS, USB ಟೈಪ್-C ಪೋರ್ಟ್, ಬ್ಲೂಟೂತ್ 5.3, ಮತ್ತು Wi-Fi 6 ಅನ್ನು ಒಳಗೊಂಡಿವೆ. ದೃಢೀಕರಣಕ್ಕಾಗಿ ಇನ್-ಡಿಸ್ ಪ್ಲೇ ಫಿಂಗರ್​ಪ್ರಿಂಟ್ ಆಯ್ಕೆ ಇದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP53-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Sat, 2 September 23