Instagram, Facebook messenger down: ಸ್ಥಗಿತಗೊಂಡ ಇನ್​ಸ್ಟಾಗ್ರಾಮ್-ಫೇಸ್​ಬುಕ್ ಮೆಸೇಜಿಂಗ್​ ಆ್ಯಪ್

| Updated By: ಝಾಹಿರ್ ಯೂಸುಫ್

Updated on: Jul 06, 2022 | 2:48 PM

Instagram, Facebook messenger down: ಈ ಹಿಂದೆ ಕೂಡ ಫೇಸ್​ಬುಕ್​ನಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆದರೆ ಕಂಪನಿಯು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳ ಹಿಂದಿನ ಕಾರಣಗಳನ್ನು ರಹಸ್ಯವಾಗಿಡಲಾಗುತ್ತದೆ.

Instagram, Facebook messenger down: ಸ್ಥಗಿತಗೊಂಡ ಇನ್​ಸ್ಟಾಗ್ರಾಮ್-ಫೇಸ್​ಬುಕ್ ಮೆಸೇಜಿಂಗ್​ ಆ್ಯಪ್
Instagram, Facebook messenger down
Follow us on

Instagram, Facebook messenger down: ವಿಶ್ವದ ಜನಪ್ರಿಯ ಸೋಷಿಯಲ್ ಮೀಡಿಯಾದ ಅಪ್ಲಿಕೇಶನ್​ಗಳಾದ ಇನ್​ಸ್ಟಾಗ್ರಾಮ್ (Instagram) ಮತ್ತು ಫೇಸ್​ಬುಕ್ ಮೆಸೆಂಜರ್​ (Facebook Messenger) ಸ್ಥಗಿತಗೊಂಡಿದೆ. ಮೇಟಾ-ಮಾಲೀಕತ್ವದ ಈ ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ವೀಸ್ ಸ್ಟೇಟಸ್​ ಟ್ರ್ಯಾಕರ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ, Instagram ಜುಲೈ 5 ರಂದು ಸುಮಾರು 8 ಗಂಟೆಯಿಂದ ಬುಧವಾರ ಬೆಳಗಿನವರೆಗೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿನ ತಮ್ಮ ಸಂಪರ್ಕಗಳಿಗೆ DM ಗಳನ್ನು (ನೇರ ಸಂದೇಶಗಳು) ಕಳುಹಿಸಲು ತೊಂದರೆಯಾಗುತ್ತಿದೆ ಎಂದು ಹಲವಾರು ಬಳಕೆದಾರರು Twitter ಮೂಲಕ ತಿಳಿಸಿದ್ದಾರೆ. ಆದಾಗ್ಯೂ, ಸ್ಥಗಿತದ ಬಗ್ಗೆ ಮೆಟಾದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಜುಲೈ 5 ರ ರಾತ್ರಿ 11:17 ಗಂಟೆಗೆ ಸುಮಾರು 1,280 ಕ್ಕೂ ಹೆಚ್ಚು ಬಳಕೆದಾರರು ಫೋಟೋ ಮತ್ತು ವೀಡಿಯೊ ಹಂಚಿಕೆ ಸೇವೆಯೊಂದಿಗೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇನ್ನು ಜುಲೈ 6 ರಂದು ಬೆಳಿಗ್ಗೆ 10:18 ಕ್ಕೆ ಮತ್ತದೇ ಸಮಸ್ಯೆ ಕಂಡುಬಂದಿದೆ. ಈ ಸಮಸ್ಯೆಯ ಕುರಿತು ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಬಳಕೆದಾರರು ಟ್ವಿಟರ್​ನಲ್ಲಿ ಮೆಟಾದ ಗಮನ ಸೆಳೆದಿದ್ದಾರೆ. ಇದಾಗ್ಯೂ ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಇನ್ನೂ ಕೂಡ ಮೇಟಾ ಕಂಪೆನಿ ತಿಳಿಸಿಲ್ಲ.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಈ ಹಿಂದೆ ಕೂಡ ಫೇಸ್​ಬುಕ್​ನಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆದರೆ ಕಂಪನಿಯು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳ ಹಿಂದಿನ ಕಾರಣಗಳನ್ನು ರಹಸ್ಯವಾಗಿಡುತ್ತದೆ. ಅಲ್ಲಿ ಸಮಸ್ಯೆಯನ್ನು ಸರಿಪಡಿಸಿದ ನಂತರವೂ ವಿವರಿಸಲು ಒಲವು ತೋರುವುದಿಲ್ಲ. ಆದರೆ ವರದಿ ಪ್ರಕಾರ, ಡಿಎನ್​ ಸಮಸ್ಯೆಯಿಂದಾಗಿ ಮೇಟಾ​ ಒಡೆತನದ ಇನ್​ಸ್ಟಾಗ್ರಾಮ್​​, ಫೇಸ್​ಬುಕ್​ ಜಾಗತಿಕ ಬಳಕೆದಾರರಿಗೆ ತಾತ್ಕಲಿಕ ಸಮಸ್ಯೆಯನ್ನುಂಟು ಮಾಡಿದೆ.

ಈ ಸಮಸ್ಯೆಯ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಾನಾ ಮೀಮ್ಸ್​ಗಳು ಹರಿದಾಡುತ್ತಿದೆ. ಅವುಗಳ ಒಂದು ಝಲಕ್ ಇಲ್ಲಿದೆ.

 

 

ವಿಶ್ವದ ಅನೇಕ ಬಳಕೆದಾರರಿಗೆ ಈ ಸಮಸ್ಯೆ ಎದುರಾಗಿದ್ದು, ಕೆಲ ಬಳಕೆದಾರರು ಮಂಗಳವಾರದಿಂದ ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಇನ್ನು ಕೆಲ ಇನ್​ಸ್ಟಾಗ್ರಾಮ್ ಬಳಕೆದಾರರು ಆಗಾಗ್ಗೆ ಸಮಸ್ಯೆ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

Published On - 2:37 pm, Wed, 6 July 22