Instagram: iOS ಬಳಕೆದಾರರಿಗೆ ಇನ್​ಸ್ಟಾಗ್ರಾಮ್​ನಿಂದ ಹೊಸ ಅಪ್ಡೇಟ್: ಆಡಿಯೋ ತೊಂದರೆ ನಿವಾರಣೆ

| Updated By: Vinay Bhat

Updated on: Sep 25, 2021 | 3:26 PM

ಇತ್ತೀಚೆಗಷ್ಟೆ ಐಫೋನ್ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ದೂರು ನಿಡಿದ್ದರು. ಇದರಲ್ಲಿ ನಾವು ಇನ್​ಸ್ಟಾ ದಲ್ಲಿ ಸ್ಟೋರಿಗಳನ್ನು ಆಡಿಯೋ ಹಾಕಿ ಹಂಚಿಕೊಂಡರೆ ಸೌಂಡು ಕೇಳುವುದಿಲ್ಲ ಎಂದು ದೂರಿದ್ದರು.

Instagram: iOS ಬಳಕೆದಾರರಿಗೆ ಇನ್​ಸ್ಟಾಗ್ರಾಮ್​ನಿಂದ ಹೊಸ ಅಪ್ಡೇಟ್: ಆಡಿಯೋ ತೊಂದರೆ ನಿವಾರಣೆ
Instagram
Follow us on

ಐಒಎಸ್ (iOS) ಬಳಕೆದಾರರು ಇತ್ತೀಚೆಗಷ್ಟೆ ಇನ್​ಸ್ಟಾಗ್ರಾಮ್​ನಲ್ಲಿ (Instagram) ಎದುರಿಸುತ್ತಿದ್ದ ಆಡಿಯೋ ಸಮಸ್ಯೆ ಬಗೆ ಹರದಿದೆ. ಇನ್​​ಸ್ಟಾ ತನ್ನ ಐಒಎಸ್ 15 (iOS 15) ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದ್ದು, ಇದರಲ್ಲಿ ತನ್ನ ದೋಷಗಳನ್ನು ಸರಿಪಡಿಸಿಕೊಂಡಿದೆ.

ಇತ್ತೀಚೆಗಷ್ಟೆ ಐಫೋನ್ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ದೂರು ನಿಡಿದ್ದರು. ಇದರಲ್ಲಿ ನಾವು ಇನ್​ಸ್ಟಾ ದಲ್ಲಿ ಸ್ಟೋರಿಗಳನ್ನು ಆಡಿಯೋ ಹಾಕಿ ಹಂಚಿಕೊಂಡರೆ ಸೌಂಡು ಕೇಳುವುದಿಲ್ಲ ಎಂದು ದೂರಿದ್ದರು.

ಸದ್ಯ ಹೊಸ ಐಫೋನ್ 13 ಸರಣಿ ಬಿಡುಗಡೆ ಆಗಿದೆ. ಇದರ ಬೆನ್ನಲ್ಲೇ ಇನ್​ಸ್ಟಾಗ್ರಾಮ್ ತನ್ನಲ್ಲಿದ್ದ ಸಮಸ್ಯೆಯನ್ನು ಬಗೆಹರಿಸಿದೆ. ಐಒಎಸ್ 15 ಬೇಟಾ ವರ್ಷನ್​ನಲ್ಲೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿತ್ತು. ಆಡಿಯೋ ಜೊತೆಗೆ ವಿಡಿಯೋಗಳು ಪ್ಲೇ ಆಗುತ್ತಿರಲಿಲ್ಲ. ಸದ್ಯ ಇನ್​ಸ್ಟಗ್ರಾಮ್ ಈ ಎಲ್ಲ ತೊಂದರೆಗಳನ್ನು 206.1 ಅಪ್ಡೇಟ್ ಪರಿಚಯಿಸುವ ಮೂಲಕ ಸರಿಪಡಿಸಿದೆ. ಈ ಹೊಸ ಅಪ್ಡೇಟ್ ಆಕರ್ಷಕವಾಗಿ ಇದೆಯಂತೆ.

ಬಹುನಿರೀಕ್ಷಿತ ಆ್ಯಪಲ್ ಐಫೋನ್ 13 ಸರಣಿಯ ಫೋನುಗಳು ಸೆಪ್ಟೆಂಬರ್ 14 ರಂದು ಅನಾವರಣಗೊಂಡಿದ್ದು, ಈಗಾಗಲೇ ಮೊದಲ ಸೇಲ್​ ಕಾಣುತ್ತಿದೆ. ಐಫೋನ್ 13 ಸರಣಿಯು ಒಟ್ಟು ನಾಲ್ಕು ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌  ಮತ್ತು ಐಫೋನ್ 13 ಮಿನಿ.

ಹೊಸ ಐಫೋನ್‌ 13 ಸರಣಿಯು ಸಾಕಷ್ಟು ಅಪಗ್ರೇಡ್‌ ಫೀಚರ್​ಗಳೊಂದಿಗೆ ಲಗ್ಗೆ ಹಾಕಿದ್ದು, ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆಗಳು ಆಕರ್ಷಕ ಆಗಿ ಕಾಣಿಸಿಕೊಂಡಿವೆ. ಆ್ಯಪಲ್ ಕಂಪನಿಯ ಆ್ಯಪಲ್ ಸ್ಟೋರ್ ಆನ್‌ಲೈನ್ ಮತ್ತು ಭಾರತದ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಐಫೋನ್ 13 ಸರಣಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.

Realme Narzo 50i: ರಿಯಲ್ ಮಿಯಿಂದ ಕೇವಲ 7,499 ರೂ. ಗೆ ಬಲಿಷ್ಠ ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ

WhatsApp: ಹಣ ಪಾವತಿ ಮಾಡಿ ಹಣ ಗಳಿಸಿ: ಬಂಪರ್ ಆಫರ್ ಪರಿಚಯಿಸಲಿದೆ ವಾಟ್ಸ್​ಆ್ಯಪ್: ಹೇಗೆ ಗೊತ್ತಾ?

(iPhone 13 iPhone 13 Pro hit by bug Instagram rushes to fix)