ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ಮತ್ತು ಫೇಸ್‌ಬುಕ್ ಮೆಸೇಂಜರ್ (Facebook Messenger) ಬಳಕೆದಾರರು ಮತ್ತೊಮ್ಮೆ ಪರದಾಡಿದ ಸ್ಥಿತಿ ವರದಿಯಾಗಿದೆ. ಒಂದೇ ವಾರದಲ್ಲಿ ಎರಡನೇ ಬಾರಿಗೆ ಎರಡು ಗಂಟೆಗಳ ಕಾಲ ಫೇಸ್ಬುಕ್, ಇನ್ಸ್ಟಾ, ವಾಟ್ಸ್‌ಆ್ಯಪ್ ಸೇವೆಯು ಸ್ಥಗಿತಗೊಂಡಿದ್ದು, ತನ್ನ ಬಳಕೆಗಾರರಲ್ಲಿ ಫೇಸ್‌ಬುಕ್ ಇನ್‌ಕಾರ್ಪೊರೇಷನ್ ಕ್ಷಮೆಯನ್ನು ಯಾಚಿಸಿದೆ. ಎರಡು ಗಂಟೆಗಳ ಕಾಲ ಮತ್ತೆ ಫೇಸ್‌ಬುಕ್ ಸ್ಥಗಿತಗೊಂಡಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ, ನಾವು ಸಮಸ್ಯೆಯನ್ನು ಪರಿಹರಿಸಿದ್ದೇವೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಕಾಣಿಸಿಕೊಂಡಿದ್ದು, ನಿನ್ನೆ ರಾತ್ರಿ ಈ ಸಮಸ್ಯೆ ಉಂಟಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಈ ಸಮಸ್ಯೆ ಕಂಡುಬಂದಿದೆ. ಕಳೆದ ಸೋಮವಾರ ಕೂಡ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 6 ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳ ಬಳಕೆ ಅಲಭ್ಯವಾಗಿತ್ತು.
“We’re so sorry and are working as quickly as possible to fix.,” Instagram issues a statement after it goes down for some users, second time this week. pic.twitter.com/8Cv6LqG5K2
— ANI (@ANI) October 8, 2021
ಸ್ಥಗಿತ ಆರಂಭವಾದ ಸ್ವಲ್ಪ ಸಮಯದ ನಂತರ ಫೇಸ್‌ಬುಕ್, ತನ್ನ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಬಳಕೆದಾರರಿಗೆ ತೊಂದರೆ ಆಗುತ್ತಿದೆ ಎಂದು ಒಪ್ಪಿಕೊಂಡಿದೆ. ಆದರೆ ಸಮಸ್ಯೆಯ ಸ್ವರೂಪದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಲಿಲ್ಲ. ಬಳಕೆದಾರರು ತಮಗೆ ಬೇಕಾದದ್ದನ್ನು ಪಡೆಯಲು ಅಗತ್ಯವಿರುವ ಡೊಮೈನ್ ನೇಮ್ ಸಿಸ್ಟಮ್‌ನಲ್ಲಿ ಉಂಟಾದ ಅಡಚಣೆಯೇ ಈ ಸ್ಥಗಿತಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳ ಸ್ಥಗಿತದಿಂದ ಕೇವಲ ನಷ್ಟಕ್ಕೆ ಒಳಗಾಗುವುದು ಮಾತ್ರವಲ್ಲದೇ, ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಮಾರ್ಕ್ ಜುಕರ್ಬರ್ಗ್ ಅವರು ಕೆಳಗಿಳಿದಿದ್ದಾರೆ ಎಂದು ಹೇಳಲಾಗಿದೆ. ಕಳೆದ ವಾರ ಫೇಸ್‍ಬುಕ್ ಸೇವೆ ಸ್ಥಗಿತಗೊಂಡಿದ್ದರಿಂದ ಫೇಸ್‍ಬುಕ್‍ನ ಷೇರು ಮೌಲ್ಯ ಕೆಲವೇ ಗಂಟೆಗಳಲ್ಲಿ ಶೇಕಡಾ 4.9 ರಷ್ಟು ಕುಸಿದಿತ್ತು. ಪರಿಣಾಮ ಮಾಲೀಕ ಮಾರ್ಕ್ ಝುಕೆರ್ಬರ್ಗ್ಗೆ ಕೆಲವೇ ಗಂಟೆಗಳಲ್ಲಿ 44,743 ಕೋಟಿ ರೂಪಾಯಿ ನಷ್ಟ ಆಗಿತ್ತು.
ಭಾರತದಲ್ಲಿ 410 ಮಿಲಿಯನ್ಗಿಂತಲೂ ಹೆಚ್ಚಿನ ಬಳಕೆದಾರರು ಫೇಸ್ಬುಕ್ ಬಳಕೆ ಮಾಡುತ್ತಿದ್ದು, ವಾಟ್ಸ್‌ಆ್ಯಪ್ 530 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನ ಹೊಂದಿದೆ. ಇನ್ಸ್ಟಾಗ್ರಾಂನಲ್ಲಿ 210 ಮಿಲಿಯನ್ ಬಳಕೆದಾರರು ಇದ್ದಾರೆ.
ಕಳೆದ ಸೋಮವಾರ ರಾತ್ರಿ ಕೂಡ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರು ತಮ್ಮ ವಾಲ್‌ನಲ್ಲಿ ಹೊಸ ಪೋಸ್ಟ್ ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ವಾಟ್ಸ್‌ಆ್ಯಪ್ ಬಳಕೆದಾರರಿಗೆ ಯಾವುದೇ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿರಲ್ಲ. ಈ ಕುರಿತು ಫೇಸ್ಬುಕ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಪ್ರತಿಕ್ರಿಯಿಸಿತ್ತು. ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಶೀಘ್ರವೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿತ್ತು.
Airtel: ಜಿಯೋಗೆ ಭಾರೀ ಹೊಡೆತ: ಏರ್ಟೆಲ್ನಿಂದ ಕೇವಲ 48 ರೂ. ಗೆ ಬರೋಬ್ಬರಿ 3GB ಡೇಟಾ
Moto G Pure: ಒಂದೇ ದಿನ ಬಜೆಟ್ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್ಫೋನ್ ರಿಲೀಸ್ ಮಾಡಿದ ಮೋಟೋ
(Instagram went down for a lot of users on Friday evening Facebook Messenger was affected too)