International Animation Day 2024: ಅಕ್ಟೋಬರ್ 28 ರಂದು ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 28, 2024 | 9:16 AM

ಪ್ರತಿ ವರ್ಷ ಅಕ್ಟೋಬರ್ 28 ರಂದು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನಾಗಿ ಆಚರಿಸಲಾಗುತ್ತದೆ. ಕಮರ್ಷಿಯಲ್ ಥಿಯೇಟರ್‌ನಿಂದ ಆರಂಭವಾದ ಅನಿಮೇಷನ್ ಇಂದು 3ಡಿ ಮತ್ತು ಸ್ಪೆಷಲ್ ಎಫೆಕ್ಟ್‌ಗಳೊಂದಿಗೆ ದೊಡ್ಡ ಪರದೆಯನ್ನು ತಲುಪಿದೆ. ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಅನಿಮೇಷನ್ ಬಗ್ಗೆ ಅರಿವು ಮೂಡಿಸಲು ಹಾಗೂ ಅನಿಮೇಷನ್ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಉತ್ತೇಜಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

International Animation Day 2024: ಅಕ್ಟೋಬರ್ 28 ರಂದು ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಅನಿಮೇಷನ್ ಜಗತ್ತಿನಲ್ಲಿ ಪ್ರತಿದಿನ ನಾವು ಹೊಸ ಅದ್ಭುತವನ್ನು ನೋಡುತ್ತೇವೆ. ಕಮರ್ಷಿಯಲ್ ಥಿಯೇಟರ್‌ನಿಂದ ಆರಂಭವಾದ ಅನಿಮೇಷನ್ ಇಂದು 3ಡಿ ಮತ್ತು ಸ್ಪೆಷಲ್ ಎಫೆಕ್ಟ್‌ಗಳೊಂದಿಗೆ ದೊಡ್ಡ ಪರದೆಯವರೆಗೂ ತಲುಪಿದೆ. ಇತ್ತೀಚೆಗಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ಕ್ಷೇತ್ರವನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅನಿಮೇಷನ್‌ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಅಕ್ಟೋಬರ್ 28 ರಂದು ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಅನಿಮೇಷನ್ ದಿನದ ಇತಿಹಾಸ ಹಾಗೂ ಮಹತ್ವ

2002 ರಲ್ಲಿ, ಇಂಟರ್ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಅಸೋಸಿಯೇಷನ್ ​​(ಅಸೋಸಿಯೇಷನ್ ​​ಇಂಟರ್ನ್ಯಾಷನಲ್ ಡು ಫಿಲ್ಮ್ ಡಿ’ ಅನಿಮೇಷನ್) ವಿಶ್ವ ಅನಿಮೇಷನ್ ದಿನವನ್ನು ಘೋಷಿಸಿತು. ಅಂದಿನಿಂದ, ಪ್ರತಿ ವರ್ಷ ಅಕ್ಟೋಬರ್ 28 ರಂದು ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸಲಾಗುತ್ತದೆ. ಅನಿಮೇಶನ್ ಅನ್ನು ಮೊದಲ ಬಾರಿಗೆ ಅಕ್ಟೋಬರ್ 28 ರಂದು ಬಳಸಲಾಯಿತು. ಅಕ್ಟೋಬರ್ 28, 1892 ರಂದು ಚಾರ್ಲ್ಸ್-ಎಮಿಲ್ ರೆನಾಡ್ ಅವರು ಥಿಯೇಟರ್ ಆಪ್ಟಿಕ್ ಪ್ಯಾರಿಸ್‌ನ ಗ್ರೆವಿನ್ ಮ್ಯೂಸಿಯಂನಲ್ಲಿ ತಮ್ಮ ಮೊದಲ ನಿರ್ಮಾಣವಾದ “ಪಾಂಟೊಮಿಮ್ಸ್ ಲುಮಿನಸ್” ಅನ್ನು ಪ್ರಸ್ತುತಪಡಿಸಿದರು. ಅದು ಪೌವ್ರೆ ಪಿಯರೋಟ್, ಅನ್ ಬಾಕ್’ ಹಾಗೂ ‘ಲೆ ಕ್ಲೌನ್ ಎಟ್ ಸೆಸ್ ಚಿಯೆನ್ಸ್ ಈ ಮೂರು ವ್ಯಂಗ್ಯಚಿತ್ರಗಳ ಸಂಗ್ರಹವಾಗಿತ್ತು, ‘1895 ರಲ್ಲಿ, ಲುಮಿಯರ್ ಸಹೋದರರ ಸಿನಿಮಾಟೋಗ್ರಾಫ್ ರೆನಾಡ್ನ ಅವರ ಆವಿಷ್ಕಾರವನ್ನು ಮೀರಿಸಿದರು.

ಲುಮಿನ್ಸ್ ತನ್ನ ಕ್ಯಾಮರಾದಿಂದ ಮಾಡಿದ ಅನಿಮೇಟೆಡ್ ಚಲನಚಿತ್ರ ಮನರಂಜನೆಯ ಜಗತ್ತಿನಲ್ಲಿ ಐತಿಹಾಸಿಕ ಹೆಜ್ಜೆಯಾಯಿತು. ಹೀಗೆ ಪ್ರಾರಂಭವಾದ ಅನಿಮೇಷನ್ ಇಂದು ಜಗತ್ತನ್ನೇ ವ್ಯಾಪಿಸಿದೆ. ಅಂತಾರಾಷ್ಟ್ರೀಯ ಅನಿಮೇಷನ್ ದಿನವು ಅನಿಮೇಷನ್‌ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪ್ರಪಂಚದಾದ್ಯಂತದ ಅನೇಕ ಅನಿಮೇಷನ್ ಕಲಾವಿದರು ಮಾಡಿದ ಶ್ರಮವನ್ನು ಗುರುತಿಸುವ ಸಲುವಾಗಿ ಮಹತ್ವದ್ದಾಗಿದೆ.

ಇದನ್ನೂ ಓದಿ: ನವೆಂಬರ್ 1 ರಿಂದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ: ನಿಮಗೆ ಇನ್ಮುಂದೆ ಈ ಟೆನ್ಶನ್ ಇರುವುದಿಲ್ಲ

ಅನಿಮೇಷನ್‌ ಕ್ಷೇತ್ರದಲ್ಲಿ ವಿವಿಧ ಕೋರ್ಸ್ ಗಳು ಹಾಗೂ ವೃತ್ತಿ ಆಯ್ಕೆಗಳು

ಕಳೆದ ಕೆಲವು ವರ್ಷಗಳಿಂದ ಅನಿಮೇಷನ್ ವ್ಯಾಪಕವಾಗಿ ವಿಕಸನಗೊಂಡಿದೆ. ಮನರಂಜನೆ ಮತ್ತು ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಈ ತಂತ್ರಜ್ಞಾನದ ಅಳವಡಿಕೆಯು ವೇಗಗೊಂಡಿದೆ. ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರಗಳಿಂದಾಗಿ ಅನಿಮೇಷನ್ ಬಳಕೆಯು ಸಾಕಷ್ಟು ಹೈಟೆಕ್ ಮತ್ತು ಜನಪ್ರಿಯಗೊಳಿಸಿದೆ. ವಿದ್ಯಾರ್ಥಿಗಳು ಈ ಕ್ಷೇತ್ರದತ್ತ ಹೆಚ್ಚು ಒಲವು ಹೊಂದಿದ್ದಾರೆ. ಹಲವು ಸಂಸ್ಥೆಗಳು ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳಿಂದ ಮೂರು ವರ್ಷಗಳ ಪದವಿ ಕೋರ್ಸ್‌ಗಳನ್ನು ನೀಡುತ್ತಿವೆ. ಪಿಯುಸಿ ಬಳಿಕ ಈ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

3ಡಿ ಅನಿಮೇಷನ್ ಸರ್ಟಿಫಿಕೇಟ್ ಕೋರ್ಸ್, ಸಿಜಿ ಆರ್ಟ್ಸ್‌ನಲ್ಲಿ ಸರ್ಟಿಫಿಕೇಟ್, 2ಡಿ ಸರ್ಟಿಫಿಕೇಟ್ ಕೋರ್ಸ್, ‘ಎಡಿಟಿಂಗ್, ಮಿಕ್ಸಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ವರ್ಕ್ಸ್’ ಕೋರ್ಸ್, ವಿಎಫ್‌ಎಕ್ಸ್ ಸರ್ಟಿಫಿಕೇಟ್ ಕೋರ್ಸ್ ಅನ್ನು 3 ರಿಂದ 6 ತಿಂಗಳಲ್ಲಿ ಮಾಡಬಹುದು. ಅನಿಮೇಷನ್ ಮತ್ತು ಮಲ್ಟಿಮೀಡಿಯಾ ಮತ್ತು ಅನಿಮೇಷನ್ ಮತ್ತು ಸಿಜಿ ಆರ್ಟ್ಸ್‌ನಲ್ಲಿ ಬಿಎ, ಅನಿಮೇಷನ್ ಮತ್ತು ಗ್ರಾಫಿಕ್ ಡಿಸೈನ್‌ನಲ್ಲಿ ಬಿಎ, ಅನಿಮೇಷನ್‌ನಲ್ಲಿ ಬಿ.ಡೆಸ್, ಡಿಜಿಟಲ್ ಫಿಲ್ಮ್‌ಮೇಕಿಂಗ್ ಮತ್ತು ಆನಿಮೇಷನ್‌ನಲ್ಲಿ ಪದವಿ ಸೇರಿದಂತೆ ಮೂರು ವರ್ಷಗಳು ಕೋರ್ಸ್ ಗಳು ಇದಾಗಿದೆ.

ಈ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡರೆ ಆನಿಮೇಟರ್, ಟೆಕ್ಸ್ಚರ್ ಆರ್ಟಿಸ್ಟ್, ಗೇಮ್ ಡಿಸೈನರ್, 3D/2D ಆನಿಮೇಟರ್, ಇಮೇಜ್ ಎಡಿಟರ್, ಲೈಟಿಂಗ್ ಆರ್ಟಿಸ್ಟ್, ಕೀ ಫ್ರೇಮ್ ಆನಿಮೇಟರ್, ಸ್ಪೆಷಲ್ ಎಫೆಕ್ಟ್ ಆರ್ಟಿಸ್ಟ್ ಗಳಾಗಿ ಕೆಲಸ ಮಾಡಬಹುದು. ಈಗಾಗಲೇ ದೊಡ್ಡ ಮಾಧ್ಯಮ ಸಂಸ್ಥೆಗಳು ಮತ್ತು ದೊಡ್ಡ ಕಂಪನಿಗಳು ಫ್ರೀಲ್ಯಾನ್ಸ್ ಅಥವಾ ಪೂರ್ಣ ಸಮಯಕ್ಕಾಗಿ ಉನ್ನತ ಪ್ರೊಫೈಲ್ ಆನಿಮೇಟರ್‌ಗಳನ್ನು ನೇಮಿಸಿಕೊಳ್ಳುತ್ತವೆ. ಈ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರೆ ತಿಂಗಳಿಗೆ 40,000 ರಿಂದ 55,000 ರೂವರೆಗೆ ಸಂಬಳವನ್ನು ಪಡೆಯಬಹುದು.