iPhone 13: ಇಂದು ಐಫೋನ್ 13 ಮೊದಲ ಸೇಲ್: ಖರೀದಿಸುವ ಮುನ್ನ ಈ ಡಿಸ್ಕೌಂಟ್​ ಆಫರ್ ಬಗ್ಗೆ ತಿಳಿದುಕೊಳ್ಳಿ

| Updated By: Vinay Bhat

Updated on: Sep 24, 2021 | 12:40 PM

ಭಾರತದ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಐಫೋನ್ 13 ಸರಣಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದ. ಇದರ ಜೊತೆಗೆ ಬಂಪರ್ ಆಫರ್ ಕೂಡ ಘೋಷಣೆ ಮಾಡಿದ್ದು, ಸಾಕಷ್ಟು ರಿಯಾಯಿತು ದರದಲ್ಲಿ ಐಫೋನ್ 13 ಅನ್ನು ನೀವು ಕೊಂಡುಕೊಳ್ಳಬಹುದಾಗಿದೆ.

iPhone 13: ಇಂದು ಐಫೋನ್ 13 ಮೊದಲ ಸೇಲ್: ಖರೀದಿಸುವ ಮುನ್ನ ಈ ಡಿಸ್ಕೌಂಟ್​ ಆಫರ್ ಬಗ್ಗೆ ತಿಳಿದುಕೊಳ್ಳಿ
Apple iPhone 13
Follow us on

ಬಹುನಿರೀಕ್ಷಿತ ಆ್ಯಪಲ್ ಐಫೋನ್ 13 (iPhone 13) ಸರಣಿಯ ಫೋನುಗಳು ಸೆಪ್ಟೆಂಬರ್ 14 ರಂದು ಅನಾವರಣಗೊಂಡಿದ್ದು, ಇಂದು ಮೊದಲ ಸೇಲ್​ ಕಾಣುತ್ತಿದೆ. ಐಫೋನ್ 13 ಸರಣಿಯು ಒಟ್ಟು ನಾಲ್ಕು ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಐಫೋನ್ 13, ಐಫೋನ್ 13 ಪ್ರೊ (iPhone 13 Pro), ಐಫೋನ್ 13 ಪ್ರೊ ಮ್ಯಾಕ್ಸ್‌ (iPhone 13 Pro Max) ಮತ್ತು ಐಫೋನ್ 13 ಮಿನಿ (iPhone 13 Mini). ಹೊಸ ಐಫೋನ್‌ 13 ಸರಣಿಯು ಸಾಕಷ್ಟು ಅಪಗ್ರೇಡ್‌ ಫೀಚರ್​ಗಳೊಂದಿಗೆ ಲಗ್ಗೆ ಹಾಕಿದ್ದು, ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆಗಳು ಆಕರ್ಷಕ ಆಗಿ ಕಾಣಿಸಿಕೊಂಡಿವೆ. ಆ್ಯಪಲ್ ಕಂಪನಿಯ ಆ್ಯಪಲ್ ಸ್ಟೋರ್ ಆನ್‌ಲೈನ್ ಮತ್ತು ಭಾರತದ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಐಫೋನ್ 13 ಸರಣಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದ. ಇದರ ಜೊತೆಗೆ ಬಂಪರ್ ಆಫರ್ ಕೂಡ ಘೋಷಣೆ ಮಾಡಿದ್ದು, ಸಾಕಷ್ಟು ರಿಯಾಯಿತು ದರದಲ್ಲಿ ಐಫೋನ್ 13 ಅನ್ನು ನೀವು ಕೊಂಡುಕೊಳ್ಳಬಹುದಾಗಿದೆ.

ಭಾರತದಲ್ಲಿ ಐಫೋನ್ 13 ಮಿನಿ 128GB ವೇರಿಯಂಟ್ ಬೆಲೆ 69,900 ರೂ. ಗಳಾದರೆ, 256GB ವೇರಿಯಂಟ್ ಬೆಲೆ 79.900 ರೂ. ಮತ್ತು 512GB ವೇರಿಯಂಟ್ ಬೆಲೆ 99,900 ರೂ.ಗಳಾಗಿವೆ. ಹಾಗೆಯೇ ಐಫೋನ್ 13 ಫೋನಿನ ಬೆಲೆಗಳು ಕ್ರಮವಾಗಿ 79,900 ರೂ. 89,900 ರೂ. ಮತ್ತು 99,900 ರೂ. ಗಳಾಗಿವೆ. ಇನ್ನು ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎರಡೂ 1TB ವರೆಗೆ ಸ್ಟೋರೇಜ್ ಆಯ್ಕೆ ಪಡೆದಿವೆ. ಐಫೋನ್ 13 ಪ್ರೊ ಬೆಲೆ 128GB ಗೆ 1,19,900 ರೂ. 256GB ಗೆ 1,29,900 ರೂ. 512GB ಗೆ 1,49,900 ರೂ. 1TB ಗೆ 1,69,900 ರೂ. ಗಳಾಗಿವೆ. ಅಗ್ರ ಶ್ರೇಣಿಯ ಐಫೋನ್ 13 ಪ್ರೊ ಮ್ಯಾಕ್ಸ್ ಬೆಲೆ 1,29,900 ರೂ. 1,39,900 ರೂ. 1,59,900 ರೂ. ಮತ್ತು 1,79,900 ರೂ. ನಿಗದಿ ಮಾಡಲಾಗಿದೆ.

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಈ ಫೋನ್ ಬ್ಯಾಟರಿ ಹಿಂದಿನ ಐಫೋನ್ 12 ಗಿಂತ ಉತ್ತಮವಾಗಿದೆ.

ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. . 800nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಐಫೋನ್ 13 ಪ್ರೊ ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್‌ ಮಾಡಬಹುದಾಗಿದೆ. ಇನ್ನು ಈ ನಾಲ್ಕು ಬಣ್ಣಗಳ ಆಯ್ಕೆ ಪಡೆದಿದೆ.

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್‌ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ನೈಟ್‌ ಮೋಡ್‌ ಆಯ್ಕೆ ಇದ್ದು, ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್‌ ಬೆಂಬಲಿಸಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ನಾಲ್ಕು ಬಣ್ಣಗಳ ಆಯ್ಕೆ ಪಡೆದಿದೆ.

ಎಕ್ಸ್​ಚೇಂಜ್ ಆಫರ್ ಮೂಲಕ ನೀವು ಐಫೋನ್ 13 ಅನ್ನು ಖರೀದಿ ಮಾಡಬಹುದಾಗಿದೆ. ಯಾವ ಐಫೋನ್ ಮೇಲೆ ಎಷ್ಟರ ವರೆಗೆ ಎಕ್ಸ್​ಚೇಂಜ್ ಆಫರ್ ಇದೆ ಎಂಬ ಬಗೆಗೆಗಿನ ಮಾಹಿತಿ ಇಲ್ಲಿದೆ ನೋಡಿ.

iPhone 12 – Up to Rs.31,120

iPhone 12 mini – Up to Rs.25,565

iPhone SE (2nd Generation) – Up to Rs.12,155

iPhone 11 – Up to Rs.23,585

iPhone XS Max – Up to Rs.22,020

iPhone XS – Up to Rs.21,680

iPhone XR – Up to Rs.15,685

iPhone X – Up to Rs.16,810

iPhone 8 Plus – Up to Rs.12,790

iPhone 8 – Up to Rs.10,245

iPhone 7 Plus – Up to Rs.10,550

iPhone 7 – Up to Rs.7,865

iPhone 6s Plus – Up to Rs.5,390

iPhone 6s – Up to Rs.4,920

iPhone 6 Plus – Up to Rs.4,805

iPhone 6 – Up to Rs.3,805

iPhone SE (1st Generation) – Up to Rs.2,810

Itel A26: ದೇಶದಲ್ಲಿ ಐಟೆಲ್ ಎ26 ಸ್ಮಾರ್ಟ್​ಫೋನ್ ಬಿಡುಗಡೆ: ಇದರ ಬೆಲೆ ಕೇವಲ 5,999 ರೂ.

Facebook: ಎರಡು ಹೊಸ ವಿಡಿಯೋ-ಕಾಲಿಂಗ್ ಡಿವೈಸ್‌ ಬಿಡುಗಡೆ ಮಾಡಿದ ಫೇಸ್‌ಬುಕ್: ಬೆಲೆ, ವಿಶೇಷತೆ ಏನು?

(iPhone 13 Sales started Customers can get big discount on the new iPhone 13 by opting for Apples trade-in offer)