Facebook: ಎರಡು ಹೊಸ ವಿಡಿಯೋ-ಕಾಲಿಂಗ್ ಡಿವೈಸ್ ಬಿಡುಗಡೆ ಮಾಡಿದ ಫೇಸ್‌ಬುಕ್: ಬೆಲೆ, ವಿಶೇಷತೆ ಏನು?
10 ಇಂಚಿನ ಡಿಸ್‌ಪ್ಲೇ ಹೊಂದಿರುವ ಪೋರ್ಟಲ್ ಗೋ ಡಿವೈಸ್ ಇದು ವಿಡಿಯೋ ಕಾಲಿಂಗ್ ನಲ್ಲಿ ಹೊಸ ಅನುಭವವನ್ನು ನೀಡಲಿದೆಯಂತೆ. 12-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸ್ಮಾರ್ಟ್ ಕ್ಯಾಮೆರಾ ಹೊಂದಿದೆ.
ಇತ್ತೀಚಿಗಷ್ಟೇ ರೇ-ಬ್ಯಾನ್ ಸ್ಟೋರೀಸ್ ಸ್ಮಾರ್ಟ್ ಗ್ಲಾಸ್ ಬಿಡುಗಡೆ ಮಾಡಿ ಟೆಕ್ ಲೋಕಕ್ಕೆ ಶಾಕ್ ನೀಡಿದ್ದ ಪ್ರಸಿದ್ಧ ಫೇಸ್‌ಬುಕ್ (Facebook) ಸಂಸ್ಥೆ ಇದೀಗ ಎರಡು ಹೊಸ ವಿಡಿಯೋ-ಕಾಲಿಂಗ್ ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಿಗೆ ಫೇಸ್‌ಬುಕ್ ಪೋರ್ಟಲ್ ಗೋ ಮತ್ತು ಪೋರ್ಟಲ್+ (facebook portal) ಎಂದು ಹೆಸರಿಡಲಾಗಿದೆ. ಈ ಪೋರ್ಟಲ್ ಡಿವೈಸ್‌ಗಳು 10 ಇಂಚಿನ ಮತ್ತು 14 ಇಂಚಿನ ಡಿಸ್‌ಪ್ಲೇ ಗಾತ್ರದಲ್ಲಿ ಪರಿಚಯಿಸಲಾಗಿದೆ. ಈ ಡಿವೈಸ್‌ಗಳನ್ನು ಪೋರ್ಟಲ್ ಸ್ಪೀಕರ್‌ಗಳಾಗಿ ಕೂಡ ಬಳಸಬಹುದಾಗಿದೆ ಎಂದು ಕಂಪೆನಿ ಹೇಳಿದೆ.
ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲಿ ವಿಡಿಯೋ ಕರೆ ಮಾಡುವ ಡಿವೈಸ್‌ಗಳ ಪೋರ್ಟಲ್ ಕುಟುಂಬಕ್ಕೆ ನಾವು ಎರಡು ಹೊಸ ಸೇರ್ಪಡೆಗಳನ್ನು ಸ್ವಾಗತಿಸುತ್ತಿದ್ದೇವೆ ಎಂದು ತಿಳಿಸಿದ್ದು, ಪ್ರಸ್ತುತ ಟೆಕ್ ಜಗತ್ತಿನಲ್ಲಿ ಟ್ರೆಂಡ್ ಹೆಚ್ಚಿಸಿರುವ ವಿಡಿಯೋ ಕಾಲಿಂಗ್ ಕ್ಷೇತ್ರದಲ್ಲಿ ತನ್ನ ಅಸ್ತಿತ್ವನ್ನು ತೋರಿಸಲು ತಯಾರಾಗಿದೆ.
ಪೋರ್ಟಲ್ ಗೋ ಡಿವೈಸ್ ಫೀಚರ್ಸ್ ನೋಡುವುದಾದರೆ, 10 ಇಂಚಿನ ಡಿಸ್‌ಪ್ಲೇ ಹೊಂದಿರುವ ಪೋರ್ಟಲ್ ಗೋ ಡಿವೈಸ್ ಇದು ವಿಡಿಯೋ ಕಾಲಿಂಗ್ ನಲ್ಲಿ ಹೊಸ ಅನುಭವವನ್ನು ನೀಡಲಿದೆಯಂತೆ. 12-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸ್ಮಾರ್ಟ್ ಕ್ಯಾಮೆರಾ ಹೊಂದಿದೆ. ಇದು ವಿಡಿಯೋ ಕಾಲಿಂಗ್ ನಲ್ಲಿ ಹೊಸ ಅನುಭವವನ್ನು ನೀಡಲಿದೆ. ಇದಲ್ಲದೆ ಈ ಪೋರ್ಟಲ್ ಡಿವೈಸ್‌ಗಳು ಪೋರ್ಟಬಿಲಿಟಿಯನ್ನು ಸುಲಭಗೊಳಿಸಲು ದೀರ್ಘಾವಧಿಯ ಬ್ಯಾಟರಿಯನ್ನು ಒಳಗೊಂಡಿದೆ.
ವಿಡಿಯೋ ಕರೆಗಳಿಗಾಗಿ ‘ಅಲ್ಟ್ರಾ ವೈಡ್ ಫೀಲ್ಡ್ ಆಫ್ ವ್ಯೂ’ ಫೀಚರ್ ಅನ್ನು ಹೊಂದಿದೆ. ಈ ಪೋರ್ಟಬಲ್ ಡಿವೈಸ್ ಅನ್ನು ಪೋರ್ಟಬಲ್ ಸ್ಪೀಕರ್ ಆಗಿ ಕೂಡ ಬಳಸಬಹುದಾಗಿದ್ದು, ವಿಡಿಯೊ ಕಾಲಿಂಗ್ ಸೇವೆಯಲ್ಲಿ ಉತ್ತಮವಾದ ಅನುಭವವನ್ನು ಪಡದುಕೊಳ್ಳಬಹುದು.
ಪೋರ್ಟಲ್ ಗೋ+ ಡಿವೈಸ್ 14 ಇಂಚಿನ ಡಿಸ್‌ಪ್ಲೇ ಯನ್ನು ಹೊಂದಿದೆ. 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ಈ ಡಿವೈಸ್ ಕ್ಯಾಮೆರಾ ಮೂಲಕ ಅಲ್ಟ್ರಾ-ವೈಡ್ ಫೀಲ್ಡ್ ಆಫ್ ವ್ಯೂ ಸೇವೆಯನ್ನು ಪಡೆಯಬಹುದು. ಸ್ಟೀರಿಯೋ ಸ್ಪೀಕರ್‌ಗಳು ಸ್ಫಟಿಕ-ಸ್ಪಷ್ಟವಾದ ಆಡಿಯೋಗೆ ಉತ್ತಮ ಸೌಂಡ್ ಸಿಸ್ಟಂ ನೀಡಲಿದೆ. ಇದು ರಿಮೋಟ್ ಮತ್ತು ಹೈಬ್ರಿಡ್ ವರ್ಕ್ ಮಾಡೆಲ್‌ಗಳ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಪೋರ್ಟಲ್ ಕೆಲಸಕ್ಕೆ ಸಂಬಂಧಿಸದ ಕರೆಗಳಿಗಾಗಿ ಪರಿಪೂರ್ಣ ಮೀಸಲಾದ ಸ್ಕ್ರೀನ್ ನೀಡಲಿದೆ.
ಫೇಸ್‌ಬುಕ್ ಪರಿಚಯಿಸಿರುವ ಪೋರ್ಟಲ್ ಗೋ ಅಮೆರಿಕಾದಲ್ಲಿ $ 199, ಭಾರತದಲ್ಲಿ ಇದರ ಬೆಲೆ ಅಂದಾಜು 14,737 ರೂ. ಎನ್ನಬಹುದು. ಪೋರ್ಟಲ್+ ಬೆಲೆ $ 349 (ಭಾರತದಲ್ಲಿ ಅಂದಾಜು 25,000 ರೂ. ಇನ್ನು ಇದೇ ಅಕ್ಟೋಬರ್ 19 ರಂದು ಮಾರಾಟಕ್ಕೆ ಬರಲಿರುವ ಈ ಡಿವೈಸ್ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಲಾಂಚ್ ಆಗಲಿದೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಪೋರ್ಟಲ್.ಫೇಸ್‌ಬುಕ್.ಕಾಮ್‌ನಲ್ಲಿ ಪೂರ್ವ-ಆರ್ಡರ್‌ಗಳನ್ನು ಈಗಾಗಲೇ ತೆರೆಯಲಾಗಿದೆ.
(Facebook announces Portal Go Portal Plus to refresh video calling devices lineup Price availability and specs)