AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Big Billion Days Sale: ಫ್ಲಿಪ್‌ಕಾರ್ಟ್​ ಬಿಗ್ ಬಿಲಿಯನ್ ಡೇಸ್​ಗೆ ದಿನಗಣನೆ: ಹೊಸದಾಗಿ ಲಾಂಚ್ ಆಗಲಿದೆ ಈ ಪ್ರಾಡಕ್ಟ್​ಗಳು

ಭಾರತದಲ್ಲಿ ಇದೇ ಮೊದಲ ಬಾರಿಗೆ ರಿಯಲ್ ಮಿಯ 4ಕೆ ಗೂಗಲ್ ಟಿವಿ ಸ್ಟಿಕ್ ಬಿಗ್ ಬಿಲಿಯನ್ ಡೇಸ್​ನಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ ಅನೇಕ ಹೊಸ ಪ್ರೋಡಕ್ಟ್​ಗಳು ಲಾಂಚ್ ಆಗಲಿವೆ ಎಂದು ಹೇಳಲಾಗಿದೆ.

Flipkart Big Billion Days Sale: ಫ್ಲಿಪ್‌ಕಾರ್ಟ್​ ಬಿಗ್ ಬಿಲಿಯನ್ ಡೇಸ್​ಗೆ ದಿನಗಣನೆ: ಹೊಸದಾಗಿ ಲಾಂಚ್ ಆಗಲಿದೆ ಈ ಪ್ರಾಡಕ್ಟ್​ಗಳು
flipkart big billion days
TV9 Web
| Updated By: Vinay Bhat|

Updated on: Sep 23, 2021 | 12:30 PM

Share

ಆನ್‌ಲೈನ್ ಖರೀದಿದಾರರು ನಿರೀಕ್ಷೆಯಿಂದ ಕಾದುಕುಳಿತಿರುವ ಫ್ಲಿಪ್‌ಕಾರ್ಟ್ (Flipkart) ‘ಬಿಗ್ ಬಿಲಿಯನ್ ಡೇಸ್ ಸೇಲ್’ (Flipkart Big Billion Days Sale 2021) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಸಂಸ್ಥೆ ದಿನಾಂಕವನ್ನೂ ಪ್ರಕಟ ಮಾಡಿದ್ದು ಮುಂದಿನ ತಿಂಗಳು ಅಕ್ಟೋಬರ್ 7 ರಿಂದ 12 ರ ವರೆಗೆ ಏರ್ಪಡಿಸಲಾಗಿದೆ. ಈ ಬಾರಿಯ ಈ ಮೇಳ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ. ಸಾಕಷ್ಟು ಹೊಸ ಹೊಸ ಪ್ರಾಡಕ್ಟ್​ಗಳು ಲಾಂಚ್ ಆಗಲಿವೆ ಎಂದು ಹೇಳಲಾಗಿದೆ. ನೀವು ಯಾವುದೇ ಹೊಸ ಗ್ಯಾಜೆಟ್ ಪಡೆಯಲು ಬಯಸಿದರೆ, ಮುಂಬರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಶಾಪಿಂಗ್ ಮಾಡಲು ಉತ್ತಮ ಸ್ಥಳವಾಗಿದೆ. ಸೌಂಡ್‌ಬಾರ್‌ಗಳು, ಹೆಡ್‌ಫೋನ್‌ಗಳು, ಸ್ಮಾರ್ಟ್‌ಫೋನ್‌ಗಳು (Smartphone), ಸ್ಮಾರ್ಟ್‌ವಾಚ್‌ಗಳು (Smart Watch), ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನವುಗಳ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು.

ಭಾರತದಲ್ಲಿ ಇದೇ ಮೊದಲ ಬಾರಿಗೆ ರಿಯಲ್ ಮಿಯ 4ಕೆ ಗೂಗಲ್ ಟಿವಿ ಸ್ಟಿಕ್ ಬಿಗ್ ಬಿಲಿಯನ್ ಡೇಸ್​ನಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ ಮೋಟೋರೊಲಾ ಟ್ಯಾಬ್ 8, ಒಪ್ಪೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್ ಒಪ್ಪೋ A55, ಮೋಟೋ ಎಡ್ಜ್ 20 ಪ್ರೋ ಸೇರಿದಂತೆ ಅನೇಕ ಹೊಸ ಪ್ರೋಡಕ್ಟ್​ಗಳು ಲಾಂಚ್ ಆಗಲಿವೆ ಎಂದು ಹೇಳಲಾಗಿದೆ. ಐಫೋನ್ 12 ಸರಣಿ, ಐಫೋನ್ ಎಕ್ಸ್‌ಆರ್, ಕೈಗೆಟುಕುವ ಐಫೋನ್ ಎಸ್‌ಇ 2020 ಸೇರಿದಂತೆ ಹಲವಾರು ಡಿವೈಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುವ ನಿರೀಕ್ಷೆಯಿದೆ.

ಫ್ಲಿಪ್‌ಕಾರ್ಟ್ ಜೊತೆ ಬಹುತೇಕ ಎಲ್ಲಾ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿದ್ದು, ಈ ಮಾರಾಟದ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳ ಜೊತೆಯಲ್ಲಿ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 10 ಪರ್ಸೆಂಟ್​ಗಿಂತ ಹೆಚ್ಚು ಡಿಸ್ಕೌಂಟ್ಸ್ ಸಿಗಲಿದೆ ಎಂದು ಹೇಳಲಾಗಿದೆ. ಬೋಟ್ ಸೌಂಡ್‌ಬಾರ್‌ಗಳು ಮತ್ತು ಹೆಡ್‌ಫೋನ್‌ಗಳ ಮೇಲೆ 80% ರಿಯಾಯಿತಿ ನೀಡುತ್ತದೆ. ಬೊಟ್ ನಿಂದ ಹೊಸ ಹೆಡ್‌ಫೋನ್ ಅಥವಾ ಆಡಿಯೋ ಆಕ್ಸಸರಿಸಗಳನ್ನ ಪಡೆಯಲು ಇದು ಅತ್ಯುತ್ತಮ ಸಮಯವಾಗಿದೆ.

ಇನ್ನೂ ಇಂಟೆಲ್-ಚಾಲಿತ ಲ್ಯಾಪ್‌ಟಾಪ್‌ಗಳು ಶೇಕಡಾ 40 ರಷ್ಟು ರಿಯಾಯಿತಿ, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ವೇರಬಲ್ ಮತ್ತು ಹೆಚ್ಚಿನವುಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡಬಹುದು. ಡಿಜೊ ಭಾರತದಲ್ಲಿ ಹೊಸ ಬ್ರಾಂಡ್ ಆಗಿದ್ದು ಅದು ಆಕ್ಸಸರಿಸ್ ಮಾರ್ಕೆಟನಲ್ಲಿ ಮುನ್ನಡೆಯುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಡಿಜೊ ಹೆಡ್‌ಸೆಟ್‌ಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿ ನೀಡುತ್ತದೆ.

ಇದರ ಜೊತೆಗೆ ಹಲವು ಬ್ರಾಂಡ್‌ಗಳು, ಕಿಚನ್‌ ಪ್ರಾಡಕ್ಟ್‌ಗಳು, ಗೃಹೋಪಯೋಗಿ ವಸ್ತುಗಳು, ರೆಫ್ರಿಜರೇಟರ್‌ಗಳು ಮತ್ತು ಹೆಚ್ಚಿನವುಗಳಿಂದ ಸ್ಮಾರ್ಟ್ ಟಿವಿಗಳ ಮೇಲೆ 80% ರಿಯಾಯಿತಿಯನ್ನು ನೀಡೋದು ಕನ್ಫರ್ಮ್‌ ಆಗಿದೆ.

Oppo F19: ಭಾರತದಲ್ಲಿ ಭರ್ಜರಿ ಮಾರಾಟ: ಒಪ್ಪೋ ಕಂಪೆನಿಯ ಎರಡು ಸ್ಮಾರ್ಟ್​ಫೋನ್ ಬೆಲೆಯಲ್ಲಿ ಏರಿಕೆ

Telegram Update: ವಾಟ್ಸ್​ಆ್ಯಪ್​ಗೆ ಸೆಡ್ಡು ಹೊಡೆದ ಟೆಲಿಗ್ರಾಂ: ಹೊಸ ಅಪ್ಡೇಟ್​ನಲ್ಲಿ ಸೂಪರ್ ಫೀಚರ್ಸ್

(Flipkart Big Billion Days sale 2021 tab smartphones and other Products Expected to Launch at Sale Event)

ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್