iPhone 14: ಶಾಕಿಂಗ್: ಪ್ರೈಮ್ ಡೇ ಸೇಲ್​ನಲ್ಲಿ ಐಫೋನ್ 14 ಕೇವಲ 66,499 ರೂ. ಗೆ ಮಾರಾಟ

|

Updated on: Jul 11, 2023 | 3:06 PM

ಐಫೋನ್ 14 128GB ಆವೃತ್ತಿಯು ಭಾರತದಲ್ಲಿ 79,900 ರೂ. ಗೆ ಬಿಡುಗಡೆ ಆಗಿತ್ತು. ಇದು ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಡಿಸ್ಕೌಂಟ್ ಪಡೆದುಕೊಂಡು ಕೇವಲ 66,499 ರೂ. ಗೆ ನಿಮ್ಮದಾಗಿಸಬಹುದು ಎಂದು ಅಮೆಜಾನ್ ಹೇಳಿದೆ.

iPhone 14: ಶಾಕಿಂಗ್: ಪ್ರೈಮ್ ಡೇ ಸೇಲ್​ನಲ್ಲಿ ಐಫೋನ್ 14 ಕೇವಲ 66,499 ರೂ. ಗೆ ಮಾರಾಟ
iPhone 14
Follow us on

ಆ್ಯಪಲ್ (Apple) ಕಂಪನಿ ಕಳೆದ ವರ್ಷ ಬಿಡುಗಡೆ ಮಾಡಿದ ಐಫೋನ್ 14 (iPhone 14) ಮೊಬೈಲ್ ಕೆಲವೇ ದಿನಗಳಲ್ಲಿ ಬಂಪರ್ ಡಿಸ್ಕೌಂಟ್ ಮೂಲಕ ಖರೀದಿಗೆ ಸಿಗಲಿದೆ. ಜುಲೈ 15 ಮತ್ತು 16 ರಂದು ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ ಇಂಡಿಯಾ ಪ್ರೈಮ್ ಡೇ ಸೇಲ್ (Amazon Prime Day Sale) ಹಮ್ಮಿಕೊಂಡಿದೆ. ಇದರಲ್ಲಿ ಐಫೋನ್ 14 ಇದುವರೆಗೆ ಕಾಣದ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಅಮೆಜಾನ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದರ ಜೊತೆಗೆ ಎಕ್ಸ್​ಚೇಂಜ್ ಆಫರ್, ಬ್ಯಾಂಕ್ ಆಫರ್ ಕೂಡ ಲಭ್ಯವಾಗಲಿದೆ.

ಐಫೋನ್ 14 128GB ಆವೃತ್ತಿಯು ಭಾರತದಲ್ಲಿ 79,900 ರೂ. ಗೆ ಬಿಡುಗಡೆ ಆಗಿತ್ತು. ಇದು ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಡಿಸ್ಕೌಂಟ್ ಪಡೆದುಕೊಂಡು ಕೇವಲ 66,499 ರೂ. ಗೆ ನಿಮ್ಮದಾಗಿಸಬಹುದು ಎಂದು ಅಮೆಜಾನ್ ಹೇಳಿದೆ. ಇದಿಷ್ಟೆ ಅಲ್ಲದೆ ಆಯ್ದ ಎಸ್​ಬಿಐ ಬ್ಯಾಂಕ್ ಕಾರ್ಡ್ ಮತ್ತು ಐಸಿಐಸಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ
Galaxy S21 FE 5G 2023: ಸ್ಯಾಮ್​ಸಂಗ್ ಪ್ರಿಯರಿಗೆ ಬಿಗ್ ಸರ್ಪ್ರೈಸ್: ಸದ್ದಿಲ್ಲದೆ ಗ್ಯಾಲಕ್ಸಿ S21 FE 5G ಫ್ಯಾನ್ ಎಡಿಷನ್ ಬಿಡುಗಡೆ
Memory Full: ಮೊಬೈಲ್​ನಲ್ಲಿ ಸ್ಟೊರೇಜ್ ಫುಲ್ ಆದ್ರೆ ಈ ಟ್ರಿಕ್ ಫಾಲೋ ಮಾಡಿ
Realme Narzo 60 Pro 5G: ಗ್ರೇಟ್ ಕ್ಯಾಮೆರಾ ಫೀಚರ್ಸ್ ಜತೆಗೆ ಬರುತ್ತಿದೆ ಹೊಸ ರಿಯಲ್​ಮಿ ಫೋನ್
Nothing Phone 2: ಇಂದು ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ನಥಿಂಗ್ ಫೋನ್ 2 ಬಿಡುಗಡೆ: ಬೆಲೆ ಎಷ್ಟು?

 

Realme Buds Wireless 3: ಹೊಸ ವೈರ್​ಲೆಸ್ ಬಡ್ಸ್ ನೆಕ್​ಬ್ಯಾಂಡ್ ಪರಿಚಯಿಸಿದೆ ರಿಯಲ್​ಮಿ

ಕಳೆದ ಸೆಪ್ಟೆಂಬರ್‌ನಲ್ಲಿ ಆಪಲ್‌ನ ‘ಫಾರ್ ಔಟ್’ ಈವೆಂಟ್‌ನಲ್ಲಿ ಐಫೋನ್ 14 ರಿಲೀಸ್ ಆಗಿತ್ತು. ಇದು ಕಂಪನಿಯ A15 ಬಯೋನಿಕ್ ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ ಪ್ಲೇಯನ್ನು ಹೊಂದಿದೆ. 1200 ನಿಟ್ಸ್ ಗರಿಷ್ಠ ಬ್ರೈಟ್​ನೆಸ್, ಡಾಲ್ಬಿ ವಿಷನ್ ಬೆಂಬಲ ಮತ್ತು ಸೆರಾಮಿಕ್ ಶೀಲ್ಡ್ ರಕ್ಷಣೆ ನೀಡಲಾಗಿದೆ.

ವಿಡಿಯೊಗಳು ಮತ್ತು ಫೋಟೋಗಳನ್ನು ಸೆರೆಹಿಡಿಯಲು, ಐಫೋನ್ 14 ನಲ್ಲಿ 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ ವಿಡಿಯೊ ಕರೆಗಳನ್ನು ಮಾಡಲು ಮತ್ತು ಸೆಲ್ಫಿಗಳನ್ನು ಕ್ಲಿಕ್ಕಿಸಲು 12-ಮೆಗಾಪಿಕ್ಸೆಲ್ TrueDepth ಕ್ಯಾಮೆರಾ ನೀಡಲಾಗಿದೆ. ಐಫೋನ್ 14 ನಲ್ಲಿ ಆಕ್ಷನ್ ಮೋಡ್ ವಿಶೇಷ ಆಯ್ಕೆ ಇದೆ. ಜೊತೆಗೆ ಫೋಟೋನಿಕ್ ಎಂಜಿನ್‌ನೊಂದಿಗೆ ಕತ್ತಲಿನಲ್ಲೂ ಅದ್ಭುತ ಫೋಟೋ ಸೆರೆಹಿಡಿಯುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ, ಆ್ಯಪಲ್ ತನ್ನ ಫೇಸ್ ಐಡಿ ತಂತ್ರಜ್ಞಾನವನ್ನು ಐಫೋನ್ 14 ನಲ್ಲಿ ನೀಡಿದೆ.

ಅಮೆಜಾನ್ ಹೇಳಿರುವ ಪ್ರಕಾರ ಈ ಸೇಲ್​ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಾದ ಲ್ಯಾಪ್​ಟಾಪ್, ಇಯರ್​ಫೋನ್ಸ್, ವಾಚ್​ಗಳು ಸೇರಿದಂತೆ ಅನೇಕ ಪ್ರಾಡಕ್ಟ್ ಮೇಲೆ ಶೇ. 75 ರಷ್ಟು ರಿಯಾಯಿತಿ ಇರಲಿದೆಯಂತೆ. ಅಂತೆಯೆ ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40 ರಷ್ಟು ಮತ್ತು ಸ್ಮಾರ್ಟ್ ಟಿವಿ ಹಾಗೂ ಗೃಹುಪಯೋಗಿ ವಸ್ತುಗಳ ಮೇಲೆ ಶೇ. 60 ರಷ್ಟು ಡಿಸ್ಕೌಂಟ್ ಇರುತ್ತದಂತೆ. ರಿಯಲ್ ಮಿ ನಾರ್ಜೊ N53, ಒನ್​ಪ್ಲಸ್ ನಾರ್ಡ್ CE 3 Lite 5G, ಒನ್​ಪ್ಲಸ್ 11R 5G, ರೆಡ್ಮಿ 12C, ಐಕ್ಯೂ Z6 Lite ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ ಎಂದು ಅಮೆಜಾನ್ ಹೇಳಿದೆ. ಆದರೆ, ಈ ಫೋನ್​ಗಳ ನಿಖರವಾದ ಬೆಲೆಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್ನೂ ಬಹಿರಂಗಪಡಿಸಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ