Oppo Reno7 Pro: ರೆನೋ 10 ಸರಣಿ ಬಿಡುಗಡೆ ಬೆನ್ನಲ್ಲೇ ರೆನೋ 7 ಪ್ರೊ ಮೇಲೆ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ

ಒಪ್ಪೋ ರೆನೋ 10 ಸರಣಿ ಬಿಡುಗಡೆ ಬೆನ್ನಲ್ಲೇ ಇದೀಗ ಕಳೆದ ವರ್ಷ ಒಪ್ಪೋ ರೆನೋ 7 ಸರಣಿ ಅಡಿಯಲ್ಲಿ ಅನಾವರಣಗೊಂಡ ರೆನೋ 7 ಪ್ರೊ (Oppo Reno7 Pro) ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ.

Oppo Reno7 Pro: ರೆನೋ 10 ಸರಣಿ ಬಿಡುಗಡೆ ಬೆನ್ನಲ್ಲೇ ರೆನೋ 7 ಪ್ರೊ ಮೇಲೆ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
Oppo Reno 7 Pro

Updated on: Jul 10, 2023 | 3:56 PM

ಒಪ್ಪೋ (Oppo) ಕಂಪನಿ ಭಾರತದಲ್ಲಿಂದು ತನ್ನ ರೆನೋ 10 ಸರಣಿ ಅಡಿಯಲ್ಲಿ ಒಪ್ಪೋ ರೆನೋ 10 5ಜಿ, ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಿಂದ ಅಧಿಕ ಬೆಲೆಯ ಈ ಮೊಬೈಲ್​ಗಳು ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಸ್ಪೀಡ್ ಚಾರ್ಜರ್​ನಿಂದ ಆವೃತ್ತವಾಗಿದೆ. ಈ ಫೋನ್ ಬಿಡುಗಡೆ ಆದ ಬೆನ್ನಲ್ಲೇ ಇದೀಗ ಕಳೆದ ವರ್ಷ ಒಪ್ಪೋ ರೆನೋ 7 ಸರಣಿ ಅಡಿಯಲ್ಲಿ ಅನಾವರಣಗೊಂಡ ರೆನೋ 7 ಪ್ರೊ (Oppo Reno7 Pro) ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಅತಿ ಕಡಿಮೆ ಬೆಲೆಗೆ ಈ ಸ್ಮಾರ್ಟ್​ಫೋನನ್ನು (Smartphone) ನೀವು ಖರೀದಿಸಬಹುದು.

ಆಫರ್ ಏನಿದೆ?:

ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್‌ 12 GB RAM + 256 GB ಸ್ಟೋರೇಜ್‌ ವೇರಿಯಂಟ್​ನ ಮೂಲಬೆಲೆ 37,999 ರೂ. ಆಗಿದೆ. ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೇಜ್​ನಲ್ಲಿ ಈ ಫೋನಿಗೆ ಶೇ. 26 ರಷ್ಟು ರಿಯಾಯಿತಿ ಘೋಷಿಸಲಾಗಿದೆ. 10,200 ರೂ. ಗಳ ಡಿಸ್ಕೌಂಟ್ ಪಡೆದುಕೊಂಡು ಈ ಸ್ಮಾರ್ಟ್​ಫೋನ್ ಈಗ ಕೇವಲ 27,799 ರೂ. ಗೆ ಖರೀದಿಸಬಹುದು. ಇದರೊಂದಿಗೆ ಬ್ಯಾಂಕ್‌ಗಳಿಂದ ಕೆಲವು ಆಫರ್‌, ಎಕ್ಸ್‌ಚೇಂಜ್ ಕೊಡುಗೆ ಸಹ ನೀಡಲಾಗಿದೆ.

ಇದನ್ನೂ ಓದಿ
Oppo Reno 10 5G Series: ಒಂದೇ ದಿನ ಮೂರು ಭರ್ಜರಿ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದ ಒಪ್ಪೋ: ಕ್ಯಾಮೆರಾ ಮಾತ್ರ ಬೆಂಕಿ
Tech Tips: ಒಂದು ವಾಟ್ಸ್​ಆ್ಯಪ್ ಖಾತೆಯನ್ನು ಒಮ್ಮೆಲೆ ಎಷ್ಟು ಕಡೆಯಲ್ಲಿ ತೆರೆದಿಟ್ಟುಕೊಳ್ಳಬಹುದು?
Jio Data Booster Plans: ನಿಮ್ಮಲ್ಲಿ ಜಿಯೋ ಸಿಮ್ ಇದೆಯಾ?: ಎರಡು ಧಮಾಕ ಪ್ಲಾನ್ ಪರಿಚಯಿಸಿದೆ ರಿಲಯನ್ಸ್
WhatsApp Web: ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಭರ್ಜರಿ ಸುದ್ದಿ: ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ

WhatsApp Web: ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಭರ್ಜರಿ ಸುದ್ದಿ: ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ

ಫೀಚರ್ಸ್ ಏನಿದೆ?:

ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್‌ ಮತ್ತು 180Hz ಟಚ್ ರೆಸ್ಪಾನ್ಸ್‌ ರೇಟ್‌ ಅನ್ನು ಪಡೆದುಕೊಂಡಿದ್ದು ಗೋರಿಲ್ಲಾ ಗ್ಲಾಸ್ 5ಪ್ರೊಟೆಕ್ಷನ್‌ ನೀಡಲಾಗಿದೆ. ಬಲಿಷ್ಠವಾದ ಮೀಡಿಯಾಟೆಕ್‌ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಕಲರ್‌ ಒಎಸ್‌ 12 ನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ imx766 ಸೆನ್ಸಾರ್ ಅಳವಡಿಸಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ imx709 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ಕೂಡ ಬಲಿಷ್ಠವಾಗಿದ್ದು 4500 mAh ಸಾಮರ್ಥ್ಯದ ಹೊಂದಿದೆ. ಇದು 65W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

ಇನ್ನು ಇಂದು ಬಿಡುಗಡೆ ಆದ ಒಪ್ಪೋ ರೆನೋ 10 ಪ್ರೊ 5G ಮತ್ತು ಒಪ್ಪೋ ರೆನೋ 10 ಪ್ರೊ+ 5G ಸ್ಮಾರ್ಟ್​ಫೋನ್​ಗಳು ಇದೇ ಜುಲೈ 13 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, Oppo ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗಲಿದೆ. ಒಪ್ಪೋ ರೆನೋ 10 5G ಮಾರಾಟ ಹಾಗೂ ಬೆಲೆಯ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ. ಜುಲೈ 20 ರಂದು ಮಧ್ಯಾಹ್ನ 12 ಗಂಟೆಗೆ ರೆನೋ 10 5G ಕುರಿತಿ ಮಾಹಿತಿ ಪ್ರಕಟಿಸಲಾಗುವುದು ಎಂದು ಕಂಪನಿ ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ