Tech Tips: ಒಂದು ವಾಟ್ಸ್​ಆ್ಯಪ್ ಖಾತೆಯನ್ನು ಒಮ್ಮೆಲೆ ಎಷ್ಟು ಕಡೆಯಲ್ಲಿ ತೆರೆದಿಟ್ಟುಕೊಳ್ಳಬಹುದು?

WhatsApp Tips: ನಾಲ್ಕಕ್ಕಿಂತ ಅಧಿಕ ಸಾಧನಗಳಲ್ಲಿ ಒಂದೇ ಖಾತೆಯ ವಾಟ್ಸ್​ಆ್ಯಪ್ ತೆರೆದಿಡಲು ಸಾಧ್ಯವಿಲ್ಲ. ಈ ಆಯ್ಕೆಯನ್ನು ವಾಟ್ಸ್​ಆ್ಯಪ್ ಇನ್ನೂ ನೀಡಿಲ್ಲ. ಬಳಕೆದಾರ ಪ್ರಯತ್ನಿಸಲು ಮುಂದಾದರೂ ಖಾತೆ ಓಪನ್ ಆಗುವುದಿಲ್ಲ.

Vinay Bhat
|

Updated on: Jul 10, 2023 | 12:35 PM

ಕಳೆದ ಕೆಲವು ತಿಂಗಳ ಹಿಂದಿನ ವರೆಗೆ ವಾಟ್ಸ್​​ಆ್ಯಪ್​ ಖಾತೆಯನ್ನು ಮೊಬೈಲ್, ಲ್ಯಾಪ್​ಟಾಪ್​, ಡೆಸ್ಕ್​ಟಾಪ್​​ಗಳಲ್ಲಿ ಮಾತ್ರ ಬಳಸಲು ಅವಕಾಶವಿತ್ತು. ಒಂದಕ್ಕಿಂತ ಹೆಚ್ಚು ಸ್ಮಾರ್ಟ್​ಫೋನ್​ಗಳಲ್ಲಿ ಬಳಸುವ ಆಯ್ಕೆ ಇರಲಿಲ್ಲ. ಆದರೆ, ಇತ್ತೀಚೆಗಷ್ಟೆ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ನೂತನ ಫೀಚರ್ ಬಿಡುಗಡೆ ಮಾಡಿತ್ತು.

1 / 8
ವಾಟ್ಸ್​ಆ್ಯಪ್​ನ ಈ ನೂತನ ಆಯ್ಕೆಯ ಮೂಲಕ ಬಳಕೆದಾರರು ಒಂದೇ ಬಾರಿಗೆ ನಾಲ್ಕು ಫೋನ್​ಗಳಲ್ಲಿ ಒಂದೇ ವಾಟ್ಸ್​​ಆ್ಯಪ್ ಖಾತೆಯನ್ನು ಬಳಸಬಹುದಾಗಿದೆ. ಅಂದರೆ ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್​​ಆ್ಯಪ್ ಖಾತೆಯನ್ನು ತೆರೆದಿಟ್ಟುಕೊಳ್ಳಬಹುದು.

2 / 8
ನಾಲ್ಕಕ್ಕಿಂತ ಅಧಿಕ ಸಾಧನಗಳಲ್ಲಿ ಒಂದೇ ಖಾತೆಯ ವಾಟ್ಸ್​ಆ್ಯಪ್ ತೆರೆದಿಡಲು ಸಾಧ್ಯವಿಲ್ಲ. ಈ ಆಯ್ಕೆಯನ್ನು ವಾಟ್ಸ್​ಆ್ಯಪ್ ಇನ್ನೂ ನೀಡಿಲ್ಲ. ಬಳಕೆದಾರ ಪ್ರಯತ್ನಿಸಲು ಮುಂದಾದರೂ ಖಾತೆ ಓಪನ್ ಆಗುವುದಿಲ್ಲ.

3 / 8
ಬೇರೆ ಫೋನ್​ನಲ್ಲಿ ವಾಟ್ಸ್​ಆ್ಯಪ್ ಖಾತೆ ಬಳಸಬೇಕಿದ್ದರೆ ಹೊಸದಾಗಿ ಇನ್​​ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಖಾತೆ ಸೆಟಪ್ ಮಾಡುವಾಗ ಫೋನ್ ನಂಬರ್ ನಮೂದಿಸುವ ಬದಲು ‘ಅಸ್ತಿತ್ವದಲ್ಲಿರುವ ಖಾತೆ (Existing Account)’ ಆಯ್ಕೆಯನ್ನು ಆಯ್ದುಕೊಳ್ಳಬೇಕು.

4 / 8
ನಂತರ ಕ್ಯುಆರ್ ಕೋಡ್ ಕಾಣಿಸುತ್ತದೆ. ಆಗ ನೀವು ಈಗಾಗಲೇ ವಾಟ್ಸ್​ಆ್ಯಪ್ ಖಾತೆ ಹೊಂದಿರುವ ಫೋನ್​ನಿಂದ ಸ್ಕ್ಯಾನ್ ಮಾಡುವ ಮೂಲಕ ಲಾಗಿನ್ ಆಗಬಹುದು. ಈ ವಿಶೇಷ ಫೀಚರ್ iOS ಮತ್ತು Android ಸ್ಮಾರ್ಟ್​​ಫೋನ್​ಗಳಲ್ಲಿ ಲಭ್ಯವಿದೆ.

5 / 8
ಎಲ್ಲಾದರು ವಾಟ್ಸ್​ಆ್ಯಪ್​ ಲಾಗಿನ್ ಆಗಿರುವ ಮೊಬೈಲ್​ಫೋನ್ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಆ ನಂತರ ವಾಟ್ಸ್​ಆ್ಯಪ್ ಲಾಗಿನ್ ಆಗಿರುವ ಎಲ್ಲ ಫೋನ್​ಗಳಿಂದ ಸ್ವಯಂಚಾಲಿತವಾಗಿ ಲಾಗೌಟ್ ಆಗುತ್ತದೆ.

6 / 8
ಏಕ ಕಾಲಕ್ಕೆ ನಾಲ್ಕು ಫೋನ್​ಗಳಲ್ಲಿ ವಾಟ್ಸ್​​ಆ್ಯಪ್​ನ ಒಂದೇ ಖಾತೆ ಬಳಸುವ ಈ ಆಯ್ಕೆಯಿಂದ ಸಂದೇಶ ಕಳುಹಿಸುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗುತ್ತದೆ. ಜೊತೆಗೆ ಸೈನ್ ಔಟ್ ಮಾಡದೆಯೇ ಬೇರೆ ಫೋನ್​ನಿಂದ ಮೆಸೇಜ್ ಕಳುಹಿಸುವುದು, ಅರ್ಧಕ್ಕೆ ನಿಲ್ಲಿಸಿದ್ದ ಚಾಟ್​ಗಳನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.

7 / 8
ಈ ಆಯ್ಕೆಯಿಂದ ಉದ್ಯಮ ಸಂಸ್ಥೆಗಳಿಗೆ, ವ್ಯಾಪಾರಿಗಳಿಗೆ ಪ್ರಯೋಜನ ಪಡೆಯುತ್ತಿದ್ದಾರೆ. ಉದ್ಯಮ ಸಂಸ್ಥೆಗಳ ಉದ್ಯೋಗಿಗಳು ಒಂದೇ ಖಾತೆಯನ್ನು ನಾಲ್ಕು ಮೊಬೈಲ್​ಗಳಲ್ಲಿ ಬಳಸುವ ಮೂಲಕ ಗ್ರಾಹಕರ ಜತೆ ಸಂವಹನ ನಡೆಸಲು ಅನುಕೂಲವಾಗಲಿದೆ.

8 / 8
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ