Jio Data Booster Plans: ನಿಮ್ಮಲ್ಲಿ ಜಿಯೋ ಸಿಮ್ ಇದೆಯಾ?: ಎರಡು ಧಮಾಕ ಪ್ಲಾನ್ ಪರಿಚಯಿಸಿದೆ ರಿಲಯನ್ಸ್

ರಿಲಯನ್ಸ್ ಜಿಯೋ ಬಳಕೆದಾರರು ಈಗ 7 ಡೇಟಾ ಬೂಸ್ಟರ್ ಯೋಜನೆಗಳನ್ನು ಹೊಂದಿದ್ದಾರೆ. ಹಾಗಾದರೆ ನೂತನವಾದ 19 ರೂ. ಮತ್ತು 29 ರೂ. ವಿನ ಪ್ಲಾನ್​ನಲ್ಲಿ ಎಷ್ಟು ಜಿಬಿ ಡೇಟಾ ಸೌಲಭ್ಯವಿದೆ?, ಇಲ್ಲಿದೆ ನೋಡಿ ಎಲ್ಲ ಮಾಹಿತಿ.

Jio Data Booster Plans: ನಿಮ್ಮಲ್ಲಿ ಜಿಯೋ ಸಿಮ್ ಇದೆಯಾ?: ಎರಡು ಧಮಾಕ ಪ್ಲಾನ್ ಪರಿಚಯಿಸಿದೆ ರಿಲಯನ್ಸ್
Reliance Jio
Follow us
|

Updated on: Jul 10, 2023 | 11:47 AM

ಟೆಲಿಕಾಂ (Telecom) ಕಂಪನಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಎರಡು ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ ಹೊಸದಾಗಿ 19 ರೂ. ಮತ್ತು 29 ರೂಪಾಯಿಯ ಡೇಟಾ ಬೂಸ್ಟರ್ (Data Booster) ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ರಿಲಯನ್ಸ್ ಜಿಯೋ ಬಳಕೆದಾರರು ಈಗ 7 ಡೇಟಾ ಬೂಸ್ಟರ್ ಯೋಜನೆಗಳನ್ನು ಹೊಂದಿದ್ದಾರೆ. ಹಾಗಾದರೆ ನೂತನವಾದ 19 ರೂ. ಮತ್ತು 29 ರೂ. ವಿನ ಪ್ಲಾನ್​ನಲ್ಲಿ ಎಷ್ಟು ಜಿಬಿ ಡೇಟಾ ಸೌಲಭ್ಯವಿದೆ?, ಇಲ್ಲಿದೆ ನೋಡಿ ಎಲ್ಲ ಮಾಹಿತಿ.

19 ರೂ. ಡೇಟಾ ಬೂಸ್ಟರ್ ಯೋಜನೆ ಅಡಿಯಲ್ಲಿ, ರಿಲಯನ್ಸ್ ಜಿಯೋ ಬಳಕೆದಾರರು ಹೈ-ಸ್ಪೀಡ್ 1.5GB ಡೇಟಾವನ್ನು ಪಡೆಯುತ್ತಾರೆ. ಅಂತೆಯೆ 29 ರೂ. ವಿನ ಡೇಟಾ ಬೂಸ್ಟರ್ ಯೋಜನೆಯು 2.5GB ಡೇಟಾ ಆಯ್ಕೆಯನ್ನು ಹೊಂದಿದೆ.

ಈ ಎರಡೂ ಯೋಜನೆಗಳು ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತವೆ. ಆದರೆ ಒಮ್ಮೆ ನಿಗದಿಪಡಿಸಿದ ಡೇಟಾ ಮಿತಿಯನ್ನು ಮೀರಿದರೆ ಈ ಡೇಟಾ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಅಲ್ಲದೆ, ಇವು ಡೇಟಾ ಬೂಸ್ಟರ್ ಯೋಜನೆಗಳಾಗಿರುವ ಕಾರಣ ಬಳಕೆದಾರರು ಡೇಟಾ ಪ್ರಯೋಜನಗಳನ್ನು ಮಾತ್ರ ಪಡೆಯುತ್ತಾರೆ ಯಾವುದೇ ಎಸ್​ಎಮ್​ಎಸ್ ಅಥವಾ ಅನಿಯಮಿತ ಕರೆ ಸೌಲಭ್ಯವಿಲ್ಲ.

ಇದನ್ನೂ ಓದಿ
Image
WhatsApp Web: ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಭರ್ಜರಿ ಸುದ್ದಿ: ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ
Image
Realme GT Neo 5 Pro: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬಲಿಷ್ಠವಾದ ರಿಯಲ್‌ ಮಿ GT ನಿಯೋ 5 ಪ್ರೊ ಸ್ಮಾರ್ಟ್​ಫೋನ್
Image
Samsung Event: ಜುಲೈ 26ಕ್ಕೆ ಸ್ಯಾಮ್​ಸಂಗ್​ನಿಂದ ಅತಿ ದೊಡ್ಡ ಈವೆಂಟ್: ಗ್ಯಾಲಕ್ಸಿ Z ಫೋಲ್ಡ್ ಸರಣಿ ಬಿಡುಗಡೆ
Image
Amazon Prime Day: ಅಮೆಜಾನ್ ಪ್ರೈಮೆ ಡೇ ಸೇಲ್​ನಲ್ಲಿ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ

Amazon Prime Day: ಅಮೆಜಾನ್ ಪ್ರೈಮೆ ಡೇ ಸೇಲ್​ನಲ್ಲಿ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ

ವೊಡಾಫೋನ್ ಐಡಿಯಾದಿಂದಲೂ ಹೊಸ ಪ್ಲಾನ್:

ಇತ್ತೀಚೆಗಷ್ಟೆ ರಿಲಯನ್ಸ್ ಜಿಯೋದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾ ಕೂಡ ಎರಡು ಹೊಸ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ವಿ ತನ್ನ ಬಳಕೆದಾರರಿಗಾಗಿ ಸೂಪರ್ ಡೇ ಮತ್ತು ಸೂಪರ್ ಅವರ್ ಡೇಟಾ ಪ್ಯಾಕ್‌ಗಳನ್ನು ಹೊರತಂದಿದೆ. ಸೂಪರ್ ಅವರ್ ಪ್ಯಾಕ್‌ನ ಬೆಲೆ 24 ರೂ ಆಗಿದೆ. ಇದರ ಮೂಲಕ ಬಳಕೆದಾರರು ಒಂದು ಗಂಟೆಯವರೆಗೆ ಅನಿಯಮಿತ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಇನ್ನು ಸೂಪರ್ ಡೇ ಪ್ಯಾಕ್‌ನ ಬೆಲೆ 49 ರೂ, ಆಗಿದ್ದು ಇದು 24 ಗಂಟೆಗಳ ಮಾನ್ಯತೆಯೊಂದಿಗೆ 6GB ಯ ಡೇಟಾ ಪ್ರಯೋಜನವನ್ನು ನೀಡುತ್ತದೆ.

ಕಳೆದ ವಾರ ರಿಲಯನ್ಸ್ ಜಿಯೋ ಭಾರತದಲ್ಲಿ 4G ಇಂಟರ್ನೆಟ್ ಸಾಮರ್ಥ್ಯಗಳೊಂದಿಗೆ ಕೈಗೆಟುಕುವ ಬೆಲೆಗೆ JioBharat ಫೋನನ್ನು ಅನ್ನು ಪರಿಚಯಿಸಿದೆ. ಕೇವಲ 999 ಬೆಲೆಯ ಈ ಫೋನ್ ಅನ್ನು 2G ಫೋನ್ ಬಳಕೆದಾರರನ್ನು 4G ನೆಟ್‌ವರ್ಕ್‌ಗೆ ಪರಿವರ್ತಿಸಲು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಫೋನ್ ರಿಲಯನ್ಸ್ ಡಿಜಿಟಲ್ ಸ್ಟೋರ್ ಸೇರಿದಂತೆ ರಿಟೇಲ್ ಸ್ಟೋರ್​ಗಳನ್ನು ಖರೀದಿಗೆ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ