ಬಹುನಿರೀಕ್ಷಿತ ಆ್ಯಪಲ್ ಐಫೋನ್ 15 ಸರಣಿಯ (iPhone 15 Series) ಸ್ಮಾರ್ಟ್ಫೋನ್ಗಳು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಪ್ರಾರಂಭಿಸಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಫೋನುಗಳು ಭರ್ಜರಿ ಸೇಲ್ ಆಗುತ್ತಿದೆ. ಇದರ ನಡುವೆ ರಿಲಯನ್ಸ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಬಂಪರ್ ಆಫರ್ ಘೋಷಿಸಿದೆ. ರಿಲಯನ್ಸ್ ಡಿಜಿಟಲ್, ಜಿಯೋಮಾರ್ಟ್ ಅಥವಾ ರಿಲಯನ್ಸ್ ರಿಟೇಲ್ ಸ್ಟೋರ್‌ಗಳಿಂದ ಐಫೋನ್ 15 ಅನ್ನು ಖರೀದಿಸಿದಿರೆ ಬಳಕೆದಾರರು ವಿಶೇಷ ಕೊಡುಗೆಯನ್ನು ಪಡೆಯಬಹುದು.
ಅರ್ಹ ಐಫೋನ್ 15 ಬಳಕೆದಾರರಿಗೆ ತಿಂಗಳಿಗೆ 399 ರೂ. ಹೊಸ ಪೂರಕ ಯೋಜನೆ ನೀಡಲಾಗುತ್ತಿದ್ದು, ಚಂದಾದಾರರು ಪ್ರತಿದಿನ 3GB ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ. ಈ ಯೋಜನೆಯು ಮೊದಲ ಆರು ತಿಂಗಳ ಬಳಕೆಗೆ ಮಾತ್ರ ಲಭ್ಯವಿರುತ್ತದೆ, ಇದರ ಒಟ್ಟು ಲಾಭ 2,394 ರೂ.. ಇದಲ್ಲದೆ, ಕನಿಷ್ಠ 149 ರೂ. ಗಳ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿರುವ ಅಥವಾ ಹೊಸ ಬಳಕೆದಾರರಿಗೆ ಕೂಡ ಈ ಆಫರ್ ಅನ್ವಯಿಸುತ್ತದೆ. ರಿಲಯನ್ಸ್ ಡಿಜಿಟಲ್, ಜಿಯೋಮಾರ್ಟ್ ಅಥವಾ ರಿಲಯನ್ಸ್ ರಿಟೇಲ್ ಸ್ಟೋರ್‌ಗಳಿಂದ ಖರೀದಿಸಿದ ಐಫೋನ್ 15 ಫೋನುಗಳಿಗೆ ಮಾತ್ರ ಈ ಆಫರ್ ಲಭ್ಯವಿದೆ.
ಭಾರತದಲ್ಲಿ ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ: ಫೀಚರ್ಸ್ ಏನಿದೆ ನೋಡಿ
ಹೊಸ ಐಫೋನ್ 15 ಗೆ ಜಿಯೋ ಸಿಮ್ ಹಾಕಿದ 72 ಗಂಟೆಗಳ ಒಳಗೆ ಈ ಆಫರ್ ಸಿಗಲಿದ್ದು, ಅರ್ಹ ಗ್ರಾಹಕರಿಗೆ SMS/ಇ-ಮೇಲ್ ಮೂಲಕ ಸೂಚಿಸಲಾಗುತ್ತದೆ. ಜಿಯೋ ತನ್ನ ಈ ಕೊಡುಗೆಯನ್ನು ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ನಂತಹ ಇತರ ಮಾದರಿಗಳಿಗೆ ನೀಡಿಲ್ಲ.
ಐಫೋನ್ 15- 128GB- 79,900 ರೂ., ಐಫೋನ್ 15- 256GB- 89,900 ರೂ., ಐಫೋನ್ 15- 512GB- 1,09,900 ರೂ., ಐಫೋನ್ 15 ಪ್ಲಸ್- 128GB – 89,900 ರೂ., ಐಫೋನ್ 15 ಪ್ಲಸ್- 256GB – 99,900 ರೂ. ನಿಗದಿ ಮಾಡಲಾಗಿದೆ.
ಇನ್ನು ಐಫೋನ್ 15 ಪ್ರೊ 128GB ಸ್ಟೋರೇಜ್ ಮಾಡೆಲ್‌ಗೆ 1,34,900 ರೂ., 256GB ಗೆ 1,44,900 ರೂ., 512GB ಗೆ 164,900 ರೂ. ಮತ್ತು 1TB ಮಾದರಿಗೆ 1,84,900 ರೂ. ಇದೆ. ಐಫೋನ್ 15 ಪ್ರೊ ಮ್ಯಾಕ್ಸ್ ಬೇಸ್ 256GB ಸ್ಟೋರೇಜ್ ಮಾಡೆಲ್‌ಗೆ 1,59,900 ರೂ., 512GB ಗೆ 1,79,900 ರೂ. ಮತ್ತು 1TB ಆವೃತ್ತಿಗೆ 1,99,900 ರೂ. ನಿಗದಿ ಮಾಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ