Kannada News Technology iQoo 9T is here iQoo has launched its latest flagship smartphone in India Check Price
iQoo 9T: 20 ನಿಮಿಷದಲ್ಲಿ ಫುಲ್ ಚಾರ್ಜ್, ಬೊಂಬಾಟ್ ಕ್ಯಾಮೆರಾ: ಭಾರತದಲ್ಲಿ ಐಕ್ಯೂ 9T ಫೋನ್ ಬಿಡುಗಡೆ
iQoo 9T Launched: ಐಕ್ಯೂ ಇಂದು ದೇಶದಲ್ಲಿ ಹೊಸ ಐಕ್ಯೂ 9ಟಿ (iQoo 9T) ಸ್ಮಾರ್ಟ್ಫೋನನ್ನು ಅನಾವರಣ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಮೊಬೈಲ್ ಆಗಿದ್ದು, 50MP ಪ್ರಾಥಮಿಕ ಕ್ಯಾಮೆರಾ, 120W ಫಾಸ್ಟ್ ಚಾರ್ಜರ್ ಫೀಚರ್ಗಳಿಂದ ಆವೃತ್ತವಾಗಿದೆ.
iQoo 9T
Follow us on
ಪ್ರಸಿದ್ಧ ಐಕ್ಯೂ (iQoo) ಕಂಪನಿಯ ಸ್ಮಾರ್ಟ್ಫೋನ್ಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕಾಗಿಯೆ ತಿಂಗಳಿಗೆ ಒಂದರಂತೆ ಆಕರ್ಷಕ ಮೊಬೈಲ್ಗಳನ್ನು ಐಕ್ಯೂಬಿಡುಗಡೆ ಮಾಡುತ್ತಿದೆ. ಹೆಚ್ಚಾಗಿ ವೇಗದ ಚಾರ್ಜಿಂಗ್, ಬಲಿಷ್ಠ ಪ್ರೊಸೆಸರ್ ಮೂಲಕವೇ ಸುದ್ದಿಯಲ್ಲಿರುವ ಐಕ್ಯೂ ಇಂದು ದೇಶದಲ್ಲಿ ಹೊಸ ಐಕ್ಯೂ 9ಟಿ (iQoo 9T) ಸ್ಮಾರ್ಟ್ಫೋನನ್ನು ಅನಾವರಣ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಮೊಬೈಲ್ ಆಗಿದ್ದು, ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್, 50 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 120W ಫಾಸ್ಟ್ ಚಾರ್ಜರ್ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಹಾಗಾದರೆ ಐಕ್ಯೂ 9T ಸ್ಮಾರ್ಟ್ಫೋನ್ನ (Smartphone) ಬೆಲೆ ಎಷ್ಟು?, ಏನು ವಿಶೇಷತೆ?, ಯಾವಾಗಿನಿಂದ ಖರೀದಿಸಬಹುದು ಎಂಬ ಬಗೆಗಿನ ಮಾಹಿತಿ ನೋಡೋಣ.
ಐಕ್ಯೂ 9T ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಭಾರತದಲ್ಲಿ ಅನಾವರಣಗೊಂಡಿದೆ. ಇದರ 8GB + 128GB ಸ್ಟೋರೇಜ್ ಮಾದರಿಗೆ 49,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 12GB + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 54,999ರೂ. ಇದೆ.
ಆಲ್ಫಾ ಮತ್ತು ಲೆಜೆಂಡ್ ಕಲರ್ ಆಯ್ಕೆಯನ್ನು ಈ ಫೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆಗಸ್ಟ್ 4 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಐಕ್ಯೂ.ಕಾಮ್ ಮೂಲಕ ಸೇಲ್ ಕಾಣಲಿದೆ.
ಲಾಂಚ್ ಆಫರ್ ದಿನ ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 4,000 ರೂ. ಗಳ ಡಿಸ್ಕೌಂಟ್ ಸಿಗಲಿದೆ. ಅಂತೆಯೆ ಹಳೆಯ ಐಕ್ಯೂ ಸ್ಮಾರ್ಟ್ಫೋನ್ಗೆ 7000 ರೂ. ಐಕ್ಯೂ ಅಲ್ಲದ ಸ್ಮಾರ್ಟ್ಫೋನ್ಗೆ 4000 ರೂ. ಗಳ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗಿದೆ.
ಐಕ್ಯೂ 9T ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಹೊಂದಿದ್ದು, ಅಂಡರ್–ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.
ಇದನ್ನೂ ಓದಿ
ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಗೇಮರ್ಗಳಿಗೆ ಈ ಫೋಣ್ ಹೇಳಿ ಮಾಡಿಸಿದಂತಿದೆ.
ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ವೈಡ್–ಆಂಗಲ್ ಕ್ಯಾಮೆರಾ ನೀಡಲಾಗಿದೆ.
ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಐಕ್ಯೂ 9T ಸ್ಮಾರ್ಟ್‌ಫೋನ್ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕಂಪನಿ ಹೇಳಿರುವ ಪ್ರಕಾರ ಇದು 0-100% ಚಾರ್ಜ್ ಆಗಲು ಕೇವಲ 20 ನಿಮಿಷ ಸಾಕಂತೆ.