IQoo Z7i: ಸದ್ದಿಲ್ಲದೆ ಮಾರುಕಟ್ಟೆಗೆ ದಿಢೀರ್ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ಐಕ್ಯೂ: ಪ್ರೊಸೆಸರ್ ಕಂಡು ದಂಗಾದ ಟೆಕ್ ಪ್ರಿಯರು

ಐಕ್ಯೂ ಹೊಸ ಐಕ್ಯೂ ಝಡ್ 7ಐ (IQoo Z7i) ಸ್ಮಾರ್ಟ್​ಫೋನನ್ನು (Smartphone) ಬಿಡುಗಡೆ ಮಾಡಿದೆ. ಯಾವುದೇ ಸೂಚನೆ ನೀಡದೆ ದಿಢೀರ್ ಆಗಿ ಈ ಫೋನನ್ನು ಕಂಪನಿ ರಿಲೀಸ್ ಮಾಡಿದೆ.

IQoo Z7i: ಸದ್ದಿಲ್ಲದೆ ಮಾರುಕಟ್ಟೆಗೆ ದಿಢೀರ್ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ಐಕ್ಯೂ: ಪ್ರೊಸೆಸರ್ ಕಂಡು ದಂಗಾದ ಟೆಕ್ ಪ್ರಿಯರು
iQOO Z7i

Updated on: Mar 13, 2023 | 1:08 PM

ವಿವೋ (Vivo) ಒಡೆತನದ ಪ್ರಸಿದ್ಧ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಐಕ್ಯೂ ಈಗೀಗ ಆಕರ್ಷಕವಾದ ಹೊಸ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಭಾರತದಲ್ಲಿ ಇದೇ ಮಾರ್ಚ್ 21 ರಂದು ಐಕ್ಯೂ Z7 ಫೋನನ್ನು ಅನಾವರಣ ಮಾಡುವುದಾಗಿ ಘೋಷಣೆ ಮಾಡಿತ್ತು. ಇದರ ನಡುವೆ ಐಕ್ಯೂ ಹೊಸ ಐಕ್ಯೂ ಝಡ್ 7ಐ (IQoo Z7i) ಸ್ಮಾರ್ಟ್​ಫೋನನ್ನು (Smartphone) ಬಿಡುಗಡೆ ಮಾಡಿದೆ. ಯಾವುದೇ ಸೂಚನೆ ನೀಡದೆ ದಿಢೀರ್ ಆಗಿ ಈ ಫೋನನ್ನು ಕಂಪನಿ ರಿಲೀಸ್ ಮಾಡಿದೆ. ಅಚ್ಚರಿ ಎಂದರೆ ಇದು ವಿಶ್ವದ ಮೊದಲ ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್​ನಿಂದ ಆವೃತ್ತವಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್​ಗಳಿವೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಐಕ್ಯೂ Z7i ಸ್ಮಾರ್ಟ್‌ಫೋನ್‌ ಒಟ್ಟು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ವಿದೇಶದಲ್ಲಿ ರಿಲೀಸ್ ಆಗಿದೆ. ಇದರ 4GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ CNY 899, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 10,700 ರೂ. ಇರಬಹುದು. 6GB RAM+ 128GB ಕಾನ್ಫಿಗರೇಶನ್‌ ಆಯ್ಕೆಗೆ CNY 1,099, ಭಾರತದಲ್ಲಿ ಸುಮಾರು 13,000 ರೂ., 8GB RAM+ 128GB CNY 1,199, ಭಾರತದಲ್ಲಿ ಸುಮಾರು 14,300 ರೂ. ಇರಬಹುದು. ಈ ಸ್ಮಾರ್ಟ್‌ಫೋನ್‌ ಐಸ್ ಲೇಕ್ ಬ್ಲೂ ಮತ್ತು ಮೂನ್ ಶ್ಯಾಡೋ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ
WhatsApp New Feature: ವಾಟ್ಸ್​ಆ್ಯಪ್ ಪ್ರಿಯರಿಗೆ ಬಂಪರ್ ಸುದ್ದಿ: 21 ಹೊಸ ಎಮೋಜಿ ಸೇರ್ಪಡೆ
Moto G72: ನೀವು ಫೋಟೋಗ್ರಫಿ ಮಾಡ್ತೀರಾ?: 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ
Tech Tips: ಆನ್​ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಇಲ್ಲಿದೆ ಟಿಪ್ಸ್
Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಯಿತು ಬಿಗ್ ಸೇವಿಂಗ್ ಡೇಸ್: ಈ ಬಾರಿಯ ಆಫರ್ ಕೇಳಿದ್ರೆ ದಂಗಾಗ್ತೀರ

Oppo Reno 7 Pro 5G: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ ರೆನೋ 7 ಪ್ರೊ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಅತಿ ಕಡಿಮೆ ಬೆಲೆಗೆ ಲಭ್ಯ

ಏನಿದೆ ಫೀಚರ್ಸ್?:

ಐಕ್ಯೂ Z7i ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 88.99 ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಬಲಿಷ್ಠವಾದ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು ಆಂಡ್ರಾಯ್ಡ್‌ 13 ನಲ್ಲಿ OriginOS ಓಷನ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಹೊಂದಿದೆ. ಇದರ ಜೊತೆಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಐಕ್ಯೂ Z7i ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 15W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು 29 ದಿನಗಳವರೆಗೆ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ ಎಂದು ಕಂಪನಿ ಭರವಸೆ ನೀಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಹಾಟ್‌ಸ್ಪಾಟ್‌, ವೈ-ಫೈ, ಬ್ಲೂಟೂತ್ 5.1, ಜಿಪಿಎಸ್, ಎನ್‌ಎಫ್‌ಸಿ, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Mon, 13 March 23