iQOO Z7 5G: ರೋಚಕತೆ ಸೃಷ್ಟಿಸಿರುವ ಐಕ್ಯೂ Z7 5G ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗ: ಎಷ್ಟು ಗೊತ್ತೇ?

ಐಕ್ಯೂ ರಿಲೀಸ್ ಮಾಡಲಿರುವ ಹೊಸ ಫೋನಿನ ಹೆಸರು ಐಕ್ಯೂ Z7 (iQOO Z7) ಆಗಿದೆ. ಈ ಸ್ಮಾರ್ಟ್​ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಏನೂ ಬಹಿರಂಗವಾಗಿಲ್ಲ. ಆದರೀಗ ಈ ಫೋನಿನ ಬೆಲೆ ಸೋರಿಕೆ ಆಗಿದೆ.

iQOO Z7 5G: ರೋಚಕತೆ ಸೃಷ್ಟಿಸಿರುವ ಐಕ್ಯೂ Z7 5G ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗ: ಎಷ್ಟು ಗೊತ್ತೇ?
iQOO Z7

Updated on: Mar 18, 2023 | 6:55 AM

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ವಿಭಿನ್ನ ಮಾದರಿಯ ಫೋನ್​ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಮತ್ತೊಂದು ಸ್ಮಾರ್ಟ್​ಫೋನ್​ನ ಫೋಟೋವನ್ನು ರಿವೀಲ್ ಮಾಡಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಐಕ್ಯೂ ರಿಲೀಸ್ ಮಾಡಲಿರುವ ಹೊಸ ಫೋನಿನ ಹೆಸರು ಐಕ್ಯೂ Z7 (iQOO Z7) ಆಗಿದೆ. ಈ ಫೋನ್ ಇದೇ ಮಾರ್ಚ್ 21 ರಂದು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಇದು ಐಕ್ಯೂ Z6 ನ ಉತ್ತರಾಧಿಕಾರಿಯಾಗಿದೆ ಎಂದು ಹೇಳಲಾಗಿದೆ. ಐಕ್ಯೂ Z6 ಜೊತೆಗೆ ಐಕ್ಯೂ Z6x ಫೋನ್ ಕೂಡ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಐಕ್ಯೂ Z6 ಸ್ಮಾರ್ಟ್​ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಏನೂ ಬಹಿರಂಗವಾಗಿಲ್ಲ. ಆದರೀಗ ಈ ಫೋನಿನ ಬೆಲೆ ಸೋರಿಕೆ ಆಗಿದೆ.

ಐಕ್ಯೂ Z7 5G ಸ್ಮಾರ್ಟ್‌ಫೋನ್‌ ಫೀಚರ್ಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಮೂಲಗಳ ಪ್ರಕಾರ ಇದು 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಿಂದ ಕೂಡಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಬಹುದು.

ಇದನ್ನೂ ಓದಿ
WhatsApp New Feature: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್
Galaxy A54 5G: ಒಂದೇ ದಿನ ಎರಡು ಬೊಂಬಾಟ್ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್: ಯಾವುವು?, ಏನು ವಿಶೇಷತೆ?
Airtel 5G: 265ಕ್ಕೂ ಅಧಿಕ ನಗರಗಳಲ್ಲಿ ಏರ್ಟೆಲ್ 5G ಲಾಂಚ್: ಪ್ಲಾನ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
iPhone 11: ವಿಶೇಷ ಆಫರ್​ನಲ್ಲಿ ₹17,999ಕ್ಕೆ ಆ್ಯಪಲ್ iPhone 11 64 GB ಲಭ್ಯ

Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G

ಐಕ್ಯೂ Z7 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 44W ವೇಗದ ಚಾರ್ಜಿಂಗ್ ಬೆಂಬಲಿಸಬಹುದು. ಈ ಸ್ಮಾರ್ಟ್‌ಫೋನ್‌ ಬೆಲೆ 17,499ರೂ. ಇದೆ ಎಂದು ವರದಿ ಆಗಿದೆ. ಈ ಬೆಲೆ ಬ್ಯಾಂಕ್ ಆಫರ್​ಗಳಿಂದ ಕೂಡಿದೆಯೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಐಕ್ಯೂ ನಿಯೋ 7 ಹೇಗಿದೆ?:

ಭಾರತದಲ್ಲಿ ಮೊನ್ನೆಯಷ್ಟೆ ಅನಾವರಣಗೊಂಡ ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8200+ SoC ನಲ್ಲಿ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್​ನ OIS ಕ್ಯಾಮೆರಾ ನೀಡಲಾಗಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೊ ಲೆನ್ಸ್ ಇದೆ. 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ಈ ಫೋನಿನ ಮತ್ತೊಂದು ಪ್ರಮುಖ ಫೀಚರ್ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್. ಇದರಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 120W ಫ್ಲ್ಯಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕೇವಲ 10 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಫುಲ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಇದರ ಆರಂಭಿಕ ಬೆಲೆ 29,999 ರೂ. ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ