iQOO Neo 7: ಭಾರತದಲ್ಲಿ ಭರ್ಜರಿ ಯಶಸ್ಸು ಕಂಡ ಐಕ್ಯೂ ನಿಯೋ 6: ಇದೀಗ ನಿಯೋ 7 ಬಿಡುಗಡೆಗೆ ತಯಾರಿ

| Updated By: Vinay Bhat

Updated on: Aug 29, 2022 | 7:09 AM

ಈ ವರ್ಷದ ಮೇ ತಿಂಗಳಲ್ಲಿ ಕಂಪನಿ ಭಾರತದಲ್ಲಿ ಐಕ್ಯೂ ನಿಯೋ 6 ಎಂಬ ಫೋನನ್ನು ಬಿಡುಗಡೆ ಮಾಡಿತ್ತು. ಈ ಫೋನ್ ದೇಶದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದೀಗ ಐಕ್ಯೂ ಕಂಪನಿ ಇದರ ಮುಂದುವರೆದ ಸರಣಿ ಐಕ್ಯೂ ನಿಯೋ 7 ಸ್ಮಾರ್ಟ್​ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ.

iQOO Neo 7: ಭಾರತದಲ್ಲಿ ಭರ್ಜರಿ ಯಶಸ್ಸು ಕಂಡ ಐಕ್ಯೂ ನಿಯೋ 6: ಇದೀಗ ನಿಯೋ 7 ಬಿಡುಗಡೆಗೆ ತಯಾರಿ
iQOO Neo 7
Follow us on

ವಿದೇಶಿ ಮೂಲದ ಪ್ರಸಿದ್ಧ ಸ್ಮಾರ್ಟ್​​ಫೋನ್ (Smartphone) ಬ್ರ್ಯಾಂಡ್ ಐಕ್ಯೂ ಭಾರತದಲ್ಲಿ ನಿಧಾನವಾಗಿ ನೆಲೆಯೂರುತ್ತಿದೆ. ಈ ವರ್ಷದ ಮೇ ತಿಂಗಳಲ್ಲಿ ಕಂಪನಿ ಭಾರತದಲ್ಲಿ ಐಕ್ಯೂ ನಿಯೋ 6 (iQOO Neo 6) ಎಂಬ ಫೋನನ್ನು ಬಿಡುಗಡೆ ಮಾಡಿತ್ತು. ಬಲಿಷ್ಠವಾದ ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌, ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌, ಆಕರ್ಷಕವಾದ ಬ್ಯಾಟರಿ, ಫಾಸ್ಟ್ ಚಾರ್ಜರ್ ಸೇರಿದಂತೆ ಅತ್ಯುತ್ತಮ ಫೀಚರ್​ಗಳಿಂದ ಆವೃತ್ತವಾಗಿದ್ದ ಈ ಫೋನ್ ದೇಶದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದೀಗ ಐಕ್ಯೂ ಕಂಪನಿ ಇದರ ಮುಂದುವರೆದ ಸರಣಿ ಐಕ್ಯೂ ನಿಯೋ 7 (iQOO Neo 7) ಸ್ಮಾರ್ಟ್​ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ.

ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ ಎಂಬ ವಿಚಾರವನ್ನು ಕಂಪನಿ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಅಕ್ಟೋಬರ್​ನಲ್ಲಿ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಬಲಿಷ್ಠವಾದ ಮೀಡಿಯಾಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್‌ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್ 12 ನಲ್ಲಿ OriginOS ಓಷನ್ ಕಸ್ಟಮ್ ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX 766V ಪ್ರೈಮರಿ ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿರಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಹೊಂದಿರುಬಹುದು. 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರಲಿದೆ.

ಇದನ್ನೂ ಓದಿ
IND vs PAK: ಭಾರತ-ಪಾಕ್ ಪಂದ್ಯ ಉಚಿತವಾಗಿ ವೀಕ್ಷಿಸಿ: ಜಿಯೋದಲ್ಲಿದೆ ಧಮಾಕ ಆಫರ್
ವಾಟ್ಸ್​ಆ್ಯಪ್​ನಲ್ಲಿ ಸುಲಭವಾಗಿ ಕರೆ ರೆಕಾರ್ಡ್ ಮಾಡಬಹುದು: ಇಲ್ಲಿದೆ ನೋಡಿ ಟ್ರಿಕ್ಸ್
Infinix Note 12 Pro 4G: ಕ್ಯಾಮೆರಾ ಪ್ರಿಯರು ಫುಲ್ ಫಿದಾ: ಕೇವಲ 16,999 ರೂ. ಗೆ 108MP ಕ್ಯಾಮೆರಾ ಫೋನ್ ರಿಲೀಸ್
Redmi Note 11 SE: ಮಾರುಕಟ್ಟೆಗೆ ಧೂಳೆಬ್ಬಿಸಲು ಬಂತು ರೆಡ್ಮಿಯ ಹೊಸ ಸ್ಮಾರ್ಟ್​​ಫೋನ್: ಯಾವುದು?, ಬೆಲೆ ಎಷ್ಟು?

ದೀರ್ಘ ಸಮಯ ಬಾಳಿಕೆ ಬರುವ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಫ್ಲ್ಯಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಐಕ್ಯೂ ನಿಯೋ 6 80W ಫಾಸ್ಟ್ ಚಾರ್ಜರ್ ಬೆಂಬಲ ಪಡೆದುಕೊಂಡಿತ್ತು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಅಳವಡಿಸಲಾಗುತ್ತದೆ.

Published On - 6:45 am, Mon, 29 August 22