ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ (Vivo) ಒಡೆತನದ ಐಕ್ಯೂ ಕಂಪನಿ ವಿಭಿನ್ನ ಮಾದರಿಯ ಫೋನ್ಗಳನ್ನು ಪರಿಚಯಿಸುವುದರಲ್ಲಿ ಎತ್ತದ ಕೈ. ಹೆಚ್ಚಾಗಿ ಬಜೆಟ್ ಬೆಲೆಗೆ ಆಕರ್ಷಕ ಬ್ಯಾಟರಿ, ಫಾಸ್ಟ್ ಚಾರ್ಜರ್ಗಳ ಫೋನನ್ನು ಅನಾವರಣ ಮಾಡುವ ಐಕ್ಯೂ ಇದೀಗ ಭರ್ಜರಿ ಫೀಚರ್ಗಳ ಐಕ್ಯೂ ಝಡ್ 7 5ಜಿ (iQoo Z7 5G) ಸ್ಮಾರ್ಟ್ಫೋನ್ನೊಂದಿಗೆ ಬಂದಿದೆ. ಕಳೆದ ಕೆಲವು ವಾರಗಳಿಂದ ಭಾರೀ ಸದ್ದು ಮಾಡಿದ್ದ ಈ ಫೋನ್ ಕೊನೆಗೂ ಇಂದು ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದೆ. ಅಂದುಕೊಂಡಂತೆ ಇದರಲ್ಲಿ ಬಲಿಷ್ಠವಾದ ಪ್ರೊಸೆಸರ್, ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಎಲ್ಲವನ್ನೂ ನೀಡಲಾಗಿದೆ. ಹಾಗಾದರೆ ಈ ಫೋನಿನ ಸಂಪೂರ್ಣ ಫೀಚರ್ಸ್ ಹಾಗೂ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಐಕ್ಯೂ Z7 5G ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ 6GB RAM + 12GB ಸ್ಟೋರೇಜ್ ಸಾಮರ್ಥ್ಯಕ್ಕೆ 18,999 ರೂ. ಇದದೆ. ಅಂತೆಯೆ 8GB RAM + 12GB ಸ್ಟೋರೇಜ್ ಆಯ್ಕೆಗೆ 19,999 ರೂ. ನಿಗದಿ ಮಾಡಲಾಗಿದೆ. ವಿಶೇಷ ಎಂದರೆ ಈ ಫೋನನ್ನು ನೀವು ಪರಿಚಯಾತ್ಮಕ ಬೆಲೆಯಾಗಿ ಕೇವಲ 17,499ರೂ. ಗಳಿಗೆ ಖರೀದಿ ಮಾಡಬಹುದು.
Cyber Crime: ಎಸ್ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಕೆದಾರರಿಗೆ ಬರುತ್ತಿದೆ ಫೇಕ್ ಮೆಸೇಜ್: ತಪ್ಪಿಯೂ ಹೀಗೆ ಮಾಡಬೇಡಿ
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಐಕ್ಯೂನ ಅಧಿಕೃತ ವೆಬ್‌ಸೈಟ್ ಮೂಲಕ ಈ ಫೋನನ್ನು ಇಂದಿನಿಂದಲೇ ಖರೀದಿ ಮಾಡಬಹುದು. ಜೊತೆಗೆ ಹೆಚ್‌ಡಿಎಫ್‌ಸಿ ಮತ್ತು ಎಸ್ಬಿಐ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 1,500 ರೂ. ಗಳ ತ್ವರಿತ ರಿಯಾಯಿತಿ ಸಹ ಸಿಗಲಿದೆ. ಪೆಸಿಫಿಕ್ ನೈಟ್ ಮತ್ತು ನಾರ್ವೆ ಬ್ಲೂ ಬಣ್ಣದಲ್ಲಿ ಮಾರಾಟ ಕಾಣಲಿದೆ.
#iQOOZ7 5G is #FullyLoaded with the power-efficient MediaTek Dimensity 920 with TSMC with 6nm process technology. It is an octa-core processor with a 2.5GHz Cortex-A78 CPU that is exceptionally light on power, extending the battery life for the #FullyLoadedYou.#iQOOZ7onAmazon pic.twitter.com/pKUHlANSx4
— iQOO India (@IqooInd) March 21, 2023
ಏನಿದೆ ಫೀಚರ್ಸ್:
ಐಕ್ಯೂ Z7 5G ಸ್ಮಾರ್ಟ್‌ಫೋನ್ 6.28 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 90hz ಸ್ಕ್ರೀನ್ ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಕೂಡ ನೀಡಲಾಗಿದೆ. ಬಲಿಷ್ಠವಾದ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ನಲ್ಲಿ ಕಾರ್ಯನಿರ್ವಿಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್13 ನಲ್ಲಿ ರನ್ ಆಗಲಿದೆ. ಕಡಿಮೆ ಬೆಲೆಗೆ ಇಷ್ಟೊಂದು ಬಲಿಷ್ಠವಾದ ಪ್ರೊಸೆಸರ್ ಹೊಂದಿರುವ ಕೆಲವೇ ಫೋನುಗಳ ಸಾಲಿಗೆ ಇದುಕೂಡ ಸೇರ್ಪಡೆ ಆಗಿದೆ.
ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, OIS ಬೆಂಬಲದ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೆನ್ಸರ್ ಹೊಂದಿದೆ. ಮುಂಭಾಗ ಸೆಲ್ಫಿ ಫೋಓ ಹಾಗೂ ವಿಡಿಯೋಕ್ಕಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಯ್ಕೆ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ಹೆಡ್‌ಫೋನ್ ಜ್ಯಾಕ್, ವೈ-ಫೈ, ಬ್ಲುಟೂತ್, ಯುಎಸ್ಬು ಟೈಪ್-ಸಿ ಮತ್ತು ಸ್ಟಿರಿಯೊ ಸ್ಪೀಕರ್ ಸೆಟಪ್ ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Tue, 21 March 23