Itel A49: ಗಮನಿಸಿ: ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಆಕರ್ಷಕ ಸ್ಮಾರ್ಟ್​ಫೋನ್

Itel A49 Price: ಐಟೆಲ್ (Itel) ಸಂಸ್ಥೆ ಇದೀಗ ಭಾರತದಲ್ಲಿ ಕೇವಲ 6,499 ರೂಪಾಯಿಗೆ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಅದುವೆ ಐಟೆಲ್‌ ಎ49 (Itel A49).

Itel A49: ಗಮನಿಸಿ: ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಆಕರ್ಷಕ ಸ್ಮಾರ್ಟ್​ಫೋನ್
Itel A49
Follow us
TV9 Web
| Updated By: Vinay Bhat

Updated on: Mar 15, 2022 | 3:35 PM

ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಐಟೆಲ್ (Itel) ಸಂಸ್ಥೆ ಇದೀಗ ಭಾರತದಲ್ಲಿ ಕೇವಲ 6,499 ರೂಪಾಯಿಗೆ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಅದುವೆ ಐಟೆಲ್‌ ಎ49 (Itel A49). ಡೀಸೆಂಟ್ ಕ್ಯಾಮೆರಾ (Camera), ಉತ್ತಮ ಬ್ಯಾಟರಿ (Battery) ಸೇರಿದಂತೆ ಈ ಸ್ಮಾರ್ಟ್‌ಫೋನ್‌ (Smartphone) ಕ್ವಾಡ್-ಕೋರ್ 1.4GHz ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿರುವುದು ವಿಶೇಷ. ಜೊತೆಗೆ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಅಲ್ಲದೆ ಇದು ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾ ಎಫೆಕ್ಟ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಸದ್ಯಕ್ಕೆ ಈ ಸ್ಮಾರ್ಟ್‌ಫೋನ್‌ ಕೇವಲ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 2GB RAM + 32GB ಏಕೈಕ ಸ್ಟೋರೇಜ್ ಮಾದರಿಗೆ 6,499 ರೂ ನಿಗದಿ ಮಾಡಲಾಗಿದೆ. ಇದು ಕ್ರಿಸ್ಟಲ್ ಪರ್ಪಲ್, ಡೋಮ್ ಬ್ಲೂ, ಸ್ಕೈ ಸಯಾನ್ ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇನ್ನು ಈ ಫೋನ್‌ ಕಂಪನಿಯ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿದೆ. ಈ ಹೊಸ ಐಟೆಲ್ ಫೋನ್ ಉಚಿತ ಒನ್-ಟೈಮ್ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಆಫರ್‌ನೊಂದಿಗೆ ಬರುತ್ತದೆ ಮತ್ತು ಗ್ರಾಹಕರು ಖರೀದಿಸಿದ 100 ದಿನಗಳಲ್ಲಿ ಪಡೆಯಬಹುದಾಗಿದೆ.

ಈ ಫೋನಿನ ವಿಶೇಷತೆ ಬಗ್ಗೆ ನೋಡುವುದಾದರೆ ಐಟೆಲ್‌ A49 ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್‌ಡ್ರಾಪ್ ನಾಚ್ ಶೈಲಿಯಿಂದ ಕೂಡಿದ್ದು 60Hz ರಿಫ್ರೆಶ್ ರೇಟ್ ಬೆಂಬಲವನ್ನು ಪಡೆದುಕೊಂಡಿದೆ. ಕ್ವಾಡ್-ಕೋರ್ 1.4GHz ಪ್ರೊಸೆಸರ್ ಬಲ ನೀಡಲಾಗಿದೆ. ಇದು ಆಂಡ್ರಾಯ್ಡ್ 11 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಬಳಸಿಕೊಂಡು 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, AI ಚಾಲಿತ ಸೆನ್ಸಾರ್‌ ಒಳಗೊಂಡಿರುವ LED ಫ್ಲ್ಯಾಷ್‌ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸೆಲ್ಫಿ ಕ್ಯಾಮೆರಾ AI ಬ್ಯೂಟಿ ಮೋಡ್‌ನಂತಹ ಫೀಚರ್ಸ್‌ಗಳನ್ನು ಬೆಂಬಲಿಸುತ್ತದೆ.

ಐಟೆಲ್‌ A49 ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE/ ViLTE , Wi-Fi, ಬ್ಲೂಟೂತ್ ಮತ್ತು USB ಪೋರ್ಟ್ ಅನ್ನು ಒಳಗೊಂಡಿದೆ. ಈ ಫೋನ್‌ ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ. ಅಷ್ಟೇ ಅಲ್ಲದೆ ಫೇಸ್ ಅನ್‌ಲಾಕ್ ಫೀಚರ್ಸ್‌ ಅನ್ನು ಕೂಡ ಬೆಂಬಲಿಸುತ್ತದೆ.

Redmi Note 11 Pro+: ಇಂದು ಮೊದಲ ಸೇಲ್ ಕಾಣುತ್ತಿದೆ 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್: ಬೆಲೆ ಎಷ್ಟು?

Telegram Update: ವಾಟ್ಸ್​ಆ್ಯಪ್​ನಲ್ಲಿರದ ಮತ್ತೊಂದು ಅಚ್ಚರಿ ಫೀಚರ್ ಪರಿಚಯಿಸಿದ ಟೆಲಿಗ್ರಾಮ್