AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telegram Update: ವಾಟ್ಸ್​ಆ್ಯಪ್​ನಲ್ಲಿರದ ಮತ್ತೊಂದು ಅಚ್ಚರಿ ಫೀಚರ್ ಪರಿಚಯಿಸಿದ ಟೆಲಿಗ್ರಾಮ್

Telegram New Feature: ವಾಟ್ಸ್​ಆ್ಯಪ್​ಗೆ ಸೆಡ್ಡು ಹೊಡೆದು ತನ್ನ ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತಿರುವ ಟೆಲಿಗ್ರಾಮ್ ಇದೀಗ ಇತರ ಅಪ್ಲಿಕೇಶನ್‌ಗಳೊಂದಿಗೆ ಲೈವ್ ಸ್ಟ್ರೀಮಿಂಗ್ ಸೇರಿದಂತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ.

Telegram Update: ವಾಟ್ಸ್​ಆ್ಯಪ್​ನಲ್ಲಿರದ ಮತ್ತೊಂದು ಅಚ್ಚರಿ ಫೀಚರ್ ಪರಿಚಯಿಸಿದ ಟೆಲಿಗ್ರಾಮ್
Telegram Update
TV9 Web
| Updated By: Vinay Bhat|

Updated on: Mar 15, 2022 | 6:28 AM

Share

ಇತ್ತೀಚಿನ ದಿನಗಳಲ್ಲಿ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ಗಿಂತ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಟೆಲಿಗ್ರಾಮ್ (Telegram) ಆ್ಯಪ್ ಹೊಸ ಹೊಸ ಅಪ್ಡೇಟ್​ಗಳನ್ನು ಪರಚಯಿಸುತ್ತಿದೆ. ತಿಂಗಳ ಹಿಂದೆಯಷ್ಟೆ ಟೆಲಿಗ್ರಾಮ್ 8.5 ಅಪ್ಡೇಟ್ ಬಿಡುಗಡೆ ಮಾಡಿ ಐಒಎಸ್ ಮತ್ತು ಆಂಡ್ರಾಯ್ಡ್ (iOS and Android) ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿತ್ತು. ಇದರಲ್ಲಿ ವಿಡಿಯೋ ಸ್ಟಿಕ್ಕರ್​ಗಳನ್ನು ವೈಯುಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಕೂಡ ಶೇರ್‌ ಮಾಡಬಹುದ ಆಯ್ಕೆ ನೀಡಿತು. ಹೀಗೆ ವಾಟ್ಸ್​ಆ್ಯಪ್​ಗೆ (WhatsApp) ಸೆಡ್ಡು ಹೊಡೆದು ತನ್ನ ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತಿರುವ ಟೆಲಿಗ್ರಾಮ್ ಇದೀಗ ಇತರ ಅಪ್ಲಿಕೇಶನ್‌ಗಳೊಂದಿಗೆ ಲೈವ್ ಸ್ಟ್ರೀಮಿಂಗ್ ಸೇರಿದಂತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಗ್ರೂಪ್ಸ್​ ಮತ್ತು ಚಾನೆಲ್‌ಗಳಲ್ಲಿ ಅನಿಯಮಿತ ವೀಕ್ಷಕರೊಂದಿಗೆ ಲೈವ್ ವಿಡಿಯೋ ಪ್ರಸಾರದ ಸಾಮರ್ಥ್ಯವನ್ನು ಟೆಲಿಗ್ರಾಮ್ ಹೊಂದಿದೆ.

ಈ ಆಯ್ಕೆಯ ಮೂಲಕ ಬಳಕೆದಾರರು ಟೆಲಿಗ್ರಾಮ್​ನಲ್ಲಿ OBS ಸ್ಟುಡಿಯೋ ಮತ್ತು XSplit ಬ್ರಾಡ್‌ಕಾಸ್ಟರ್‌ನಂತಹ ಸ್ಟ್ರೀಮಿಂಗ್ ಪರಿಕರಗಳಿಂದ ಪ್ರಸಾರ ಮಾಡಬಹುದಾಗಿದೆ. ಓವರ್‌ಲೇಗಳು ಮತ್ತು ಮಲ್ಟಿ – ಸ್ಕ್ರೀನ್​ ಲೇಔಟ್‌ಗಳನ್ನು ಸುಲಭವಾಗಿ ಸೇರಿಸಬಹುದಾಗಿದೆ. ಇದರಿಂದಾಗಿ ಯಾವುದೇ ಟೆಲಿಗ್ರಾಮ್ ಚಾನಲ್ ಅನ್ನು ವೃತ್ತಿಪರ ಟಿವಿ ಸ್ಟೇಷನ್ ಆಗಿ ಪರಿವರ್ತಿಸಬಹುದು. ಇದರ ಜೊತೆಗೆ ಡೌನ್‌ಲೋಡ್ ಮ್ಯಾನೇಜರ್, ನ್ಯೂ ಅಟ್ಯಾಚ್​​ಮೆಂಟ್‌ ಮೆನು, ರಿ ಡಿಸೈನ್ಡ್‌ ಲಾಗಿನ್ ಫ್ಲೋ, ಇತರ ಅಪ್ಲಿಕೇಶನ್‌ಗಳ ಮೂಲಕ ಲೈವ್ ಪ್ರಸಾರಗಳಿಗೆ ಬೆಂಬಲ ನೀಡುತ್ತದೆ.

ಇನ್ನು ಟೆಲಿಗ್ರಾಮ್ ಈಗಾಗಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಯಾವುದೇ ಡಿವೈಸ್‌ನಿಂದ 2GB ವರೆಗಿನ ಸ್ಟೋರೇಜ್‌ ಸ್ಪೇಸ್‌ ಫೈಲ್‌ಗಳನ್ನು ಶೇರ್‌ ಮಾಡಲು ಅನುವು ಮಾಡಿಕೊಟ್ಟಿದೆ. ಫೈಲ್‌ಗಳು ಡೌನ್‌ಲೋಡ್ ಆಗುವಾಗ ಬಳಕೆದಾರರು ಈಗ ಸರ್ಚ್‌ ಬಾರ್‌ನಲ್ಲಿ ಹೊಸ ಐಕಾನ್ ಕಾಣಬಹುದಾಗಿದೆ. ಈ ಐಕಾನ್ ಬಳಕೆದಾರರಿಗೆ ಡೌನ್‌ಲೋಡ್ ಮ್ಯಾನೇಜರ್‌ಗೆ ಪ್ರವೇಶವನ್ನು ನೀಡುತ್ತದೆ. ಇದರ ಮೂಲಕ ಡೌನ್‌ಲೋಡ್ ಆಗುತ್ತಿರುವ ಎಲ್ಲಾ ಫೈಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ.

ಟೆಲಿಗ್ರಾಮ್ 2020 ರಿಂದ ಪ್ರತಿ 2GB ವರೆಗಿನ ಫೈಲ್‌ಗಳ ಹಂಚಿಕೆಗೆ ಅವಕಾಶವಿದೆ. ಇತ್ತೀಚಿನ ಅಪ್ಡೇಟ್​​​​ನೊಂದಿಗೆ ಫೈಲ್‌ಗಳು ಡೌನ್ಲೋಡ್​ ಆಗುತ್ತಿರುವಾಗ ಸರ್ಚ್​ ಬಾರ್‌ನಲ್ಲಿ ಹೊಸ ಐಕಾನ್ ಗೋಚರಿಸುತ್ತದೆ. ಬಳಕೆದಾರರು ಐಕಾನ್ ಅನ್ನು ಟ್ಯಾಪ್ ಮಾಡಬಹುದು ಅಥವಾ ಅವುಗಳನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ಹುಡುಕಾಟದಲ್ಲಿ ಡೌನ್ಲೋಡ್​ ಟ್ಯಾಬ್‌ಗೆ ಹೋಗಬಹುದಾಗಿದೆ. ಬಹು ಫೋಟೋಗಳನ್ನು ಕಳುಹಿಸುವ ಮೊದಲು ಬಳಕೆದಾರರು ತಮ್ಮ ಆಲ್ಬಮ್ ಅನ್ನು ನಿರ್ವಹಿಸಬಹುದು ಮತ್ತು ಪೂರ್ವ ವೀಕ್ಷಣೆಯನ್ನೂ ಮಾಡಬಹುದಾಗಿದೆ.

ಇದಿಷ್ಟೇ ಅಲ್ಲದೆ ಹಿಂದಿನ ಚಾಟ್‌ಗೆ ತ್ವರಿತವಾಗಿ ಹೋಗಲು ಬಳಕೆದಾರರು ಈಗ ಹಿಂದೆ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಅವಕಾಶ ನೀಡಿದೆ. ಕರೆಗಳ ಗುಣಮಟ್ಟವನ್ನು ಸುಧಾರಿಸಲಾಗಿದೆ. ಅಲ್ಲದೆ ಮೌನ ಸಂದೇಶಗಳನ್ನು ಕಳುಹಿಸುವುದನ್ನು ಈಗ ಹಂಚಿಕೆ ಮೆನುವಿನಿಂದ ನೇರವಾಗಿ ಸಕ್ರಿಯಗೊಳಿಸಲಾಗಿದೆ. ಹಾಗೆಯೇ ಚಾಟ್‌ಗಳ ಮೂಲಕ ನ್ಯಾವಿಗೇಟ್ ಮಾಡುವಾಗ, ಹಿಂದಿನ ಚಾಟ್‌ಗೆ ತ್ವರಿತವಾಗಿ ನೆಗೆಯಲು ನೀವು ಈಗ ಬ್ಯಾಕ್‌ ಬಟನ್ ಅನ್ನು ಹಿಡಿದಿಟ್ಟುಕೊಳ್ಳಬಹುದು.

Amazon Fab Phones Fest: ಇಂದು ಕೊನೇ ದಿನ: ಇನ್ಮುಂದೆ ಅಮೆಜಾನ್​ನಲ್ಲಿ ಸ್ಮಾರ್ಟ್​ಫೋನ್​ಗೆ ಇಷ್ಟೊಂದು ಡಿಸ್ಕೌಂಟ್ ಡೌಟ್

Xiaomi Super Sale: 108MP ಕ್ಯಾಮೆರಾ, 120W ಫಾಸ್ಟ್ ಚಾರ್ಜರ್: ಶವೋಮಿಯ ಈ ಫೋನ್ ಖರೀದಿಗೆ ಕ್ಯೂ ನಿಂತ ಜನರು

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ