ಐಟೆಲ್ ಕಂಪನಿ ಭಾರತದಲ್ಲಿ ಎರಡು ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದು ಐಟೆಲ್ S23+ (Itel S23+) ಮತ್ತು ಐಟೆಲ್ P55 ಪವರ್ 5G ಫೋನ್ ಆಗಿದೆ. ಈ ಫೋನ್ 6-ಇಂಚಿನ ಡಿಸ್ ಪ್ಲೇ ಹೊಂದಿದ್ದು, 50 ಮೆಗಾ ಪಿಕ್ಸೆಲ್ AI ಕ್ಯಾಮೆರಾ ಸೆಟಪ್, ಯುಸಿನಕ್ ಟೈಗರ್ T616 ಮತ್ತು ಮೀಡಿಯಾಟೆಕ್ ಡೈಮನ್ಸಿಟಿ 6080 ಪ್ರೊಸೆಸರ್ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಐಟೆಲ್ S23+ ಮತ್ತು ಐಟೆಲ್ P55 ಪವರ್ 5G ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಟೆಲ್ S23+ ಫೋನಿನ 8GB + 256GB ಸ್ಟೋರೇಜ್ ಆಯ್ಕೆಗೆ 13,999 ರೂ. ನಿಗದಿ ಮಾಡಲಾಗಿದೆ. ಇದು ಅಕ್ಟೋಬರ್ 6 ರಿಂದ ಅಮೆಜಾನ್ ಇಂಡಿಯಾ ಮೂಲಕ ಆನ್‌ಲೈನ್ ಖರೀದಿಗೆ ಲಭ್ಯವಿರುತ್ತದೆ. ಆದರೆ, ಇದೇ ತಿಂಗಳ ಕೊನೆಯ ವಾರದಲ್ಲಿ ಈ ಫೋನ್ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಕಾಣಲಿದೆ.
ಬಿಡುಗಡೆ ಆಯಿತು ಭಾರತದ ಸ್ಮಾರ್ಟ್‌ಫೋನ್: ಯಾವುದು?, ಬೆಲೆ ಎಷ್ಟು?
ಮತ್ತೊಂದೆಡೆ, ಐಟೆಲ್ P55 ಪವರ್ 5G ಅನ್ನು ಎರಡು ಶೇಖರಣಾ ರೂಪಾಂತರಗಳಲ್ಲಿ ಅನಾವರಣಗೊಳಿಸಲಾಗಿದೆ. 4GB + 64GB ಮಾದರಿಯ ರೂಪಾಂತರವನ್ನು ಆಫ್‌ಲೈನ್ ಸ್ಟೋರ್‌ಗಳಲ್ಲಿ ರೂ. 9,699 ಕ್ಕೆ ನಿಮ್ಮದಾಗಿಸಬಹುದು. 6GB + 128GB ಸಂಗ್ರಹಣೆಗೆ 9,999 ರೂ, ನಿಗದಿ ಮಾಡಲಾಗಿದ್ದು, ಇದು ಅಕ್ಟೋಬರ್ 4 ರಿಂದ ಅಮೆಜಾನ್ನಲ್ಲಿ ಲಭ್ಯವಿರುತ್ತದೆ.
ಐಟೆಲ್ S23+ 6.78-ಇಂಚಿನ FHD+ AMOLED ಡಿಸ್ ಪ್ಲೇಯೊಂದಿಗೆ ಬರುತ್ತದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. ಈ ಸ್ಮಾರ್ಟ್‌ಫೋನ್ 8GB + 256GB ಆಂತರಿಕ ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ. ಮೈಕ್ರೊ SD ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಬಹುದು. ಐಟೆಲ್ S23+ 50MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಐಟೆಲ್ P55 ಪವರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಅನ್ನು 6GB RAM ನೊಂದಿಗೆ ಜೋಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ 128GB ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದು. 50MP ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 8MP ಫ್ರಂಟ್ ಶೂಟರ್ ಅನ್ನು ಹೊಂದಿದೆ. ಈ ಫೋನ್ 6.6-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ