Jio free calls: ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಕರೆಗಳು ಉಚಿತ

|

Updated on: May 14, 2021 | 4:20 PM

ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಉಚಿತ ಕರೆಗಳ ಸೌಲಭ್ಯವನ್ನು ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ.

Jio free calls: ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಕರೆಗಳು ಉಚಿತ
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
Follow us on

ರಿಲಯನ್ಸ್ ಜಿಯೋದಿಂದ ಶುಕ್ರವಾರ ಹೇಳಿಕೆಯನ್ನು ನೀಡಿದ್ದು, ಪ್ರತಿ ತಿಂಗಳು 300 ನಿಮಿಷಗಳ ಉಚಿತ ಹೊರಹೋಗುವ ಕರೆಗಳನ್ನು ಒದಗಿಸುವ ನಿಟ್ಟಿನಲ್ಲಿ ರಿಲಯನ್ಸ್ ಫೌಂಡೇಷನ್ ಜತೆಗೆ ಕೆಲಸ ಮಾಡುತ್ತಿರುವುದಾಗಿ, ಅದು ದಿನಕ್ಕೆ 10 ನಿಮಿಷದಂತೆ ಆಗುತ್ತದೆ. ಕೊರೊನಾ ಬಿಕ್ಕಟ್ಟು ಇರುವ ಅವಧಿಯುದ್ದಕ್ಕೂ ಹೀಗೆ ಒದಗಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಯಾರಿಗೆ ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಲು ಆಗುವುದಿಲ್ಲವೋ ಅಂಥ ಜಿಯೋ ಫೋನ್ ಬಳಕೆದಾರರಿಗೆ ಈ ಯೋಜನೆಯು ದೊರೆಯಲಿದೆ ಎಂದು ಕಂಪೆನಿಯ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಉಚಿತ ಟಾಕ್ ಟೈಮ್ ಘೋಷಣೆ ಮಾಡಿರುವ ಮೊದಲ ಕಂಪೆನಿ ರಿಲಯನ್ಸ್ ಜಿಯೋ. ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಲಾಕ್​ಡೌನ್ ಅಥವಾ ಲಾಕ್​ಡೌನ್ ರೀತಿಯ ನಿರ್ಬಂಧವನ್ನು ಹೇರಲಾಗಿದೆ. “ರಿಲಯನ್ಸ್ ಫೌಂಡೇಷನ್ ಜತೆಗೆ ಜಿಯೋ ಕೆಲಸ ಮಾಡುತ್ತಿದ್ದು, ಯಾವ ಜಿಯೋ ಗ್ರಾಹಕರಿಗೆ ರೀಚಾರ್ಜ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲವೋ ಅಂಥವರಿಗೆ ಕೊರೊನಾ ಬಿಕ್ಕಟ್ಟಿನ ಅವಧಿಯುದ್ದಕ್ಕೂ ತಿಂಗಳಿಗೆ 300 ನಿಮಿಷಗಳ ಉಚಿತ ಹೊರಹೋಗುವ ಕರೆ (ದಿನಕ್ಕೆ 10 ನಿಮಿಷದಂತೆ)ಯನ್ನು ನೀಡಲಾಗುವುದು,” ಎಂದು ಜಿಯೋ ಹೇಳಿಕೆಯಲ್ಲಿ ತಿಳಿಸಿದೆ.

ಟಾಕ್​ಟೈಮ್ ಜತೆಗೆ ಮತ್ತೊಂದು ಯೋಜನೆ ಘೋಷಣೆ ಮಾಡಲಾಗಿದೆ. ಜಿಯೋಫೋನ್ ಬಳಕೆದಾರರು ಎಷ್ಟು ಮೊತ್ತದ ರೀಚಾರ್ಜ್ ಮಾಡುತ್ತಾರೋ ಅದೇ ಮೊತ್ತವು ಉಚಿತವಾಗಿ ದೊರೆಯುತ್ತದೆ. “ಕೊರೊನಾ ಸಂಕಷ್ಟ ಕಾಲದಲ್ಲಿ ಸಂವಹನಕ್ಕೆ ಯಾವುದೇ ಕಾರಣಕ್ಕೂ ತಡೆ ಆಗಬಾರದು. ಅದರಲ್ಲೂ ನಮ್ಮ ಸಮಾಜದ ದುರ್ಬಲ ವರ್ಗಕ್ಕೆ ತೊಂದರೆ ಆಗಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಈಗಿನ ಆಫರ್​ಗಳು ವಾರ್ಷಿಕ ಅಥವಾ ಜಿಯೋಫೋನ್ ಸಾಧನದ ಜತೆಗಿನ ಪ್ಲಾನ್​ಗಳ ಜತೆಗೆ ಬರುವುದಿಲ್ಲ.

ಇದನ್ನೂ ಓದಿ: ಕೊರೊನಾ ಸಂಕಷ್ಟದಿಂದ WFH ಅನಿವಾರ್ಯ! ಇದಕ್ಕಾಗಿ Jio ಪ್ಲಾನ್ ಏನಿದೆ ಗೊತ್ತಾ?

(Reliance Jio announced 300 minutes free outgoing calls per month for users till corona ends)