ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲಿ ರಿಲಯನ್ಸ್ ಜಿಯೋ (Reliance jio) ತನ್ನ ಬಳಕೆದಾರರಿಗೆ ಆಕರ್ಷಕ ಪ್ಲಾನ್ಗಳನ್ನು ಪರಿಚಯಿಸುತ್ತೇ ಇರುತ್ತದೆ. ಈಗಂತು 5G ಸೇವೆ ನೀಡುವುದರಲ್ಲಿ ಬ್ಯುಸಿ ಆಗಿರುವ ಕಂಪನಿ ದೇಶದ ಮೂಲೆ ಮೂಲೆಗೆ ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವಲ್ಲಿ ಕೆಲಸ ಮಾಡುತ್ತಿದೆ. ಇದರ ನಡುವೆ ತನ್ನ ಬ್ರಾಡ್‌ಬ್ಯಾಂಡ್ (Broadband ) ಬಳಕೆದಾರರಿಗೆ ಕೂಡ ಅನೇಕ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಹತ್ತಿರವಾಗುತ್ತಿದ್ದಂತೆ ಕ್ರಿಕೆಟ್ ಪ್ರಿಯರಿಗಾಗಿ ಹೊಸ ಹೋಮ್ ಬ್ರಾಡ್‌ಬ್ಯಾಂಡ್ ‘ಬ್ಯಾಕ್-ಅಪ್ ಪ್ಲಾನ್’ ಅನ್ನು ಜಿಯೋ ಘೋಷಿಸಿದೆ.
ಐಪಿಎಲ್ ವೀಕ್ಷಿಸುವವರಿಗಾಗಿಯೇ ಈ ಯೋಜನೆ ಜಾರಿಗೊಳಿಸಿದ್ದು ಇದರಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವು ಲೈವ್ ಸ್ಪೋರ್ಟ್ಸ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಮುಂಬರುವ ಟಾಟಾ ಐಪಿಎಲ್ನ ತಡೆರಹಿತ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಬಳಕೆದಾರರು ಒಂದು ಒಂದು, ಎರಡು ಅಥವಾ ಏಳು ದಿನದ ಆಯ್ಕೆಗಳೊಂದಿಗೆ ಮತ್ತು ಅಗತ್ಯವಿರುವಾಗ ವೇಗವನ್ನು (10Mbps ನಿಂದ 30 / 100Mbps ವರೆಗೆ) ಅಪ್‌ಗ್ರೇಡ್ ಮಾಡಲು ಆಯ್ಕೆ ನೀಡಲಾಗಿದೆ. ಇದು ಮಾರ್ಚ್ 30 ರಿಂದ ಈ ಪ್ಲಾನ್ ಜಾರಿಗೊಳ್ಳಲಿದೆ.
ಈ ಯೋಜನೆಯು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಕೆಲಸ, ಮನರಂಜನೆ ಮತ್ತು ಇತರೆ ವಿಷಯಗಳ್ಳಲ್ಲಿ ಅಡಚಣೆಯಿಲ್ಲದ ಅನುಭವಗಳನ್ನು ಸಕ್ರಿಯಗೊಳಿಸುತ್ತದೆ. ನಿಮಗೆ ಅನಿಯಮಿತ ಡೇಟಾ ಮತ್ತು ವಾಯ್ಸ್ ಕಾಲಿಂಗ್ ಆಯ್ಕೆ ಬೇಕಾದಲ್ಲಿ 198 ರೂಪಾಯಿಯ 10 Mbps ಅನಿಯಮಿತ ಹೋಮ್ ಬ್ರಾಡ್‌ಬ್ಯಾಂಡ್ ಅನ್ನು ಪಡೆಯಬಹುದು. ಈ ಹೊಸ ಯೋಜನೆಯಲ್ಲಿ ಗ್ರಾಹಕರು ತಿಂಗಳಿಗೆ ಕೇವಲ 100/200 ಹೆಚ್ಚುವರಿಯಾಗಿ ಪಾವತಿಸಿ ಅನಿಯಮಿತ ಮನರಂಜನೆಗೆ ಅಪ್‌ಗ್ರೇಡ್ ಆಗಬಹುದು. ಇದಲ್ಲದೆ 550+ ಲೈವ್ ಟಿವಿ ಚಾನೆಲ್‌ಗಳು, 14 OTT ಅಪ್ಲಿಕೇಶನ್, ಯುಟ್ಯೂಬ್, ಗೇಮಿಂಗ್ ಹೀಗೆ ನೂರಾರು ಅಪ್ಲಿಕೇಶನ್‌ಗಳನ್ನು ಬಳಸಲು ಅವಕಾಶ ಇದೆ.
ಐಪಿಎಲ್ 2023 ರಿಲಯನ್ಸ್ ಜಿಯೋದ ಜಿಯೋ ಸಿನಿಮಾ ಆ್ಯಪ್ನಲ್ಲಿ ನೇರಪ್ರಸಾರ ಕಾಣಲಿದೆ. ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ನಡುವಿನ ಜಂಟಿ ಉದ್ಯಮವಾಗಿರುವ ವಯೋಕಾಮ್18 ಮೀಡಿಯಾ ಪ್ರೈ. ಕಳೆದ ವರ್ಷದ ಹರಾಜಿನಲ್ಲಿ ಭಾರತದ ಉಪಖಂಡದಲ್ಲಿನ ಡಿಜಿಟಲ್ ಐಪಿಎಲ್ ಪ್ರಸಾರದ ಹಕ್ಕುಗಳನ್ನು 20,500 ಕೋಟಿ ರೂ.ಗೆ ಪಡೆದುಕೊಂಡಿತ್ತು. ಹೀಗಾಗಿ ಜಿಯೋ ಸಿನಿಮಾದಲ್ಲಿ ಐಪಿಎಲ್ ಲೈವ್ ಕಾಣಲಿದೆ. ಜಿಯೋ ಬಳಕೆದಾರರು ಉಚಿತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಐಪಿಎಲ್ನ ಎಲ್ಲ ಪಂದ್ಯಗಳು 4K ರೆಸಲ್ಯೂಶನ್ (UltraHD) ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆಯಂತೆ. ಇದುವರೆಗೆ ಐಪಿಎಲ್ ಅನ್ನು ದೇಶದಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಮಾತ್ರ ಸ್ಟ್ರೀಮ್ ಮಾಡಲಾಗುತ್ತಿತ್ತು. ಇದಕ್ಕಾಅಗಿ ಚಂದಾದಾರಿಕೆಯನ್ನು ಹೊಂದಿರುವುದು ಅಗತ್ಯವಿತ್ತು. ಆದರೀಗ ಜಿಯೋ ಎಲ್ಲವನ್ನು ಉಚಿತವಾಗಿ ನೀಡುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Tue, 28 March 23