Infinix Hot 30i: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಿದೆ ಹೊಸ ಸ್ಮಾರ್ಟ್‌ಫೋನ್: ದಂಗಾದ ಶವೋಮಿ, ರಿಯಲ್ ಮಿ
ಇನ್ಫಿನಿಕ್ಸ್ ಇದೀಗ ಹೊಸ ಇನ್ಫಿನಿಕ್ಸ್ ಹಾಟ್ 30ಐ (Infinix Hot 30i) ಸ್ಮಾರ್ಟ್ಫೋನನ್ನು ಅನಾವರಣ ಮಾಡಿದೆ. ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ ಶವೋಮಿಯ ರೆಡ್ಮಿ, ರಿಯಲ್ ಮಿ ಫೋನ್ಗಳಿಗೆ ಸೆಡ್ಡು ಹೊಡೆಯುತ್ತಿದೆ.
ಭಾರತದ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚಾಗಿ ಶವೋಮಿ ಮತ್ತು ರಿಯಲ್ ಮಿ ಕಂಪನಿಗಳು ಬಜೆಟ್ ಬೆಲೆಗೆ ಸ್ಮಾರ್ಟ್ಫೋನ್ಗಳನ್ನು ರಿಲೀಸ್ ಮಾಡುತ್ತಿರುತ್ತದೆ. ಇದೀಗ ಇವುಗಳಿಗೆ ಪೈಪೋಟಿ ನೀಡಲು ಇನ್ಫಿನಿಕ್ಸ್ (Infinix) ಕಂಪನಿ ಬಂದಿದೆ. ಕಡಿಮೆ ಬೆಲೆಗೆ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುವುದಕ್ಕೆ ಹೆಸರುವಾಸಿ ಆಗಿರುವ ಇನ್ಫಿನಿಕ್ಸ್ ಇದೀಗ ಹೊಸ ಇನ್ಫಿನಿಕ್ಸ್ ಹಾಟ್ 30ಐ (Infinix Hot 30i) ಸ್ಮಾರ್ಟ್ಫೋನನ್ನು ಅನಾವರಣ ಮಾಡಿದೆ. ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ ಶವೋಮಿಯ ರೆಡ್ಮಿ, ರಿಯಲ್ ಮಿ ಫೋನ್ಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಫೋನ್ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಆಕರ್ಷಕ ಕ್ಯಾಮೆರಾ, ಡಿಸ್ ಪ್ಲೇ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಭಾರತದಲ್ಲಿ ಇನ್ಫಿನಿಕ್ಸ್ ಹಾಟ್ 30i ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿದೆ. ಇದರ 8GB RAM + 128GB ಸ್ಟೋರೇಜ್ ಆವೃತ್ತಿಗೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. ಇದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮುಂದಿನ ತಿಂಗಳು ಎಪ್ರಿಲ್ 3 ರಂದು ಮಧ್ಯಾಹ್ನ 12 ಗಂಟೆಯಿಂದ ಸೇಲ್ ಕಾಣಲಿದೆ. ಈ ಫೋನನ್ನು ನೀವು ಡೈಮಂಡ್ ವೈಡ್, ಗ್ಲಾಸಿಯರ್ ಬ್ಲೂ ಮತ್ತು ಮಿರರ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು.
OnePlus Nord CE 3 Lite: ಒನ್ಪ್ಲಸ್ನಿಂದ ಬರುತ್ತಿದೆ ಹೊಸ ಫೋನ್; ಬಿಡುಗಡೆಗು ಮುನ್ನ ಲೀಕ್ ಆಯ್ತು ಫೀಚರ್ಸ್
ಫೀಚರ್ಸ್ ಏನು?:
ಇನ್ಫಿನಿಕ್ಸ್ ಹಾಟ್ 30ಐ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+ ಡಿಸ್ ಪ್ಲೇಯನ್ನು ಹೊಂದಿದೆ. 500 ನಿಟ್ಸ್ ಬ್ರೈಟ್‌ನೆಸ್ ಮತ್ತು 90Hz ರಿಫ್ರೆಶ್ರೇಟ್ ಹೊಂದಿರುವ ಈ ಫೋನಿನ ಡಿಸ್ ಪ್ಲೇ ಅದ್ಭುತವಾಗಿದೆ. ಮೀಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 XOS 12 ಬೆಂಬಲವನ್ನು ಪಡೆದುಕೊಂಡಿದೆ.
ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇಯದು AI ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ ಮುಂಭಾಗದಲ್ಲಿ ವಿಡಿಯೋ ಮತ್ತು ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಪಡೆದುಕೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು ಎಲ್ಇಡಿ ಫ್ಲ್ಯಾಸ್ ಒಳಗೊಂಡಿದೆ. ಈ ಫೋನಿನಲ್ಲಿ ನೀವು 1TB ವರೆಗೆ ಮೆಮೋರಿಯನ್ನು ವಿಸ್ತರಿಸಬಹುದಾದ ಆಯ್ಕೆ ಕೂಡ ಇದೆ.
ಇನ್ಫಿನಿಕ್ಸ್ ಹಾಟ್ 30i ಸ್ಮಾರ್ಟ್‌ಫೋನ್ ಬಲಿಷ್ಠವಾದ 5000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಹೊಂದಿದೆ. ಇದು 10W ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸಲಿದೆ. ಒಂದು ಚಾರ್ಜ್ನಲ್ಲಿ 25 ದಿನಗಳ ಕಾಲಿಂಗ್ ಟೈಮ್ ಮತ್ತು 30 ದಿನಗಳ ಸ್ಟ್ಯಾಂಡ್ ಬೈ ಟೈಮ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G LTE, Wi-Fi, ಬ್ಲೂಟೂತ್, GPS/ A-GPS, ಮತ್ತು USB ಟೈಪ್-C ನೀಡಲಾಗಿದೆ. ಸೈಡ್- ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನ್ ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 27 March 23