JIO Down: ದೇಶದಾದ್ಯಂತ ಜಿಯೋ ನೆಟ್​ವರ್ಕ್ ಡೌನ್: ಕಾಲ್ ಹೋಗ್ತಿಲ್ಲ, ಮೆಸೇಜ್ ಸೆಂಡ್ ಆಗ್ತಿಲ್ಲ

| Updated By: Vinay Bhat

Updated on: Nov 29, 2022 | 11:56 AM

ದೇಶದಲ್ಲಿ ಅನೇಕ ಜಿಯೋ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದು ಕರೆ ಮಾಡಲು, ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಆಗಿದೆ. ಟ್ವಿಟರ್​ನಲ್ಲಿ 'ಜಿಯೋ ಡೌನ್' (Jio Down) ಟ್ರೆಂಡ್ ಆಗಿದ್ದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.

JIO Down: ದೇಶದಾದ್ಯಂತ ಜಿಯೋ ನೆಟ್​ವರ್ಕ್ ಡೌನ್: ಕಾಲ್ ಹೋಗ್ತಿಲ್ಲ, ಮೆಸೇಜ್ ಸೆಂಡ್ ಆಗ್ತಿಲ್ಲ
JIO Down
Follow us on

ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ (Reliance) ಒಡೆತನದ ಜಿಯೋ ನೆಟ್​ವರ್ಕ್ ಡೌನ್ ಆಗಿದೆ. ದೇಶದಲ್ಲಿ ಅನೇಕ ಜಿಯೋ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದು ಕರೆ ಮಾಡಲು, ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಆಗಿದೆ. ಟ್ವಿಟರ್​ನಲ್ಲಿ ‘ಜಿಯೋ ಡೌನ್’ (Jio Down) ಟ್ರೆಂಡ್ ಆಗಿದ್ದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಇಂದು ಮುಂಜಾನೆಯಿಂದ ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಬೈಲ್ ಡೇಟಾ ಎಂದಿನಂತೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕರೆ ಮತ್ತು ಎಸ್​ಎಮ್​ಎಸ್ ಕಳುಹಿಸಲು ಮಾತ್ರ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ವರದಿ ಮಾಡಿರುವ ಡೌನ್​ಡಿಟೆಕ್ಟನ್, ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಜಿಯೋ ಬಳಕೆದಾರರು ಈ ಸಮಸ್ಯೆ ಎದುರಿಸಿದ್ದಾರಂತೆ. ಈ ಸಮಯದಲ್ಲಿ ಶೇ. 37 ರಷ್ಟು ಜನರಿಗೆ ಜಿಯೋ ಸಿಗ್ನಲ್ ಕಾಣಿಸುತ್ತಿರಲಿಲ್ಲ. ಶೇ. 26 ರಷ್ಟು ಮಂದಿಗೆ ಮೆಸೇಜ್ (Message) ಕಳುಹಿಸುವಾಗ ಎರಾರ್ ಬಂದಿದೆ. ದೆಹಲಿ, ಅಹ್ಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾದಲ್ಲಿ ಈ ಸಮಸ್ಯೆ ಕಂಡುಬಂದಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಒಬ್ಬರು ಟ್ವೀಟ್ ಮಾಡಿದ್ದು, ಬೆಳಗ್ಗಿನಿಂದ ವೋಲ್ಟ್ ಸಿಗ್ನಲ್ ಕಾಣಿಸುತ್ತಿಲ್ಲ, ಕರೆ ಮಾಡಲು ಆಗುತ್ತಿಲ್ಲ. ಹೀಗಿರುವಾಗ ನೀವು 5G ಸೇವೆಯನ್ನು ಹೇಗೆ ನೀಡುತ್ತೀರಿ ಎಂದು ಬರೆದುಕೊಂಡಿದ್ದಾರೆ. ಇಲ್ಲಿದೆ ನೋಡಿ ಟ್ವಿಟರ್ ರಿಯಾಕ್ಷನ್.

ಇದನ್ನೂ ಓದಿ
YouTube Ambient Mode: ಏನಿದು ಯೂಟ್ಯೂಬ್ ಆಂಬಿಯೆಂಟ್ ಮೋಡ್?: ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
Tech Tips: ಗೂಗಲ್​ನಲ್ಲಿ ನಿಮ್ಮ ಫೋಟೋ ಕಾಣಿಸಬೇಕೇ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Fact Check ಸ್ನಾಪ್​​ಚಾಟ್​​ ಖರೀದಿಸಲು ಎಲಾನ್​​ ಮಸ್ಕ್​​​ ಚಿಂತನೆ ಎಂಬ ವೈರಲ್ ಸ್ಕ್ರೀನ್​​ಶಾಟ್ ಫೇಕ್
Flipkart Black Friday Sale: 20,000 ರೂ. ಒಳಗೆ ಸಿಗುತ್ತಿದೆ ಈ ಬೊಂಬಾಟ್ ಸ್ಮಾರ್ಟ್​ಫೋನ್​ಗಳು

 

ಆದರೆ, ಜಿಯೋ ಮಾತ್ರ ಈ ಸಮಸ್ಯೆ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ವರ್ಷದಲ್ಲಿ ಜಿಯೋ ಅನೇಕ ಬಾರಿ ಇಂಥಹ ಸಮಸ್ಯೆ ಎದುರಿಸಿದೆ. ಕಳೆದ ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್​ನಲ್ಲೂ ಜಿಯೋ ಬಳಕೆದಾರರು ನೆಟ್​ವರ್ಕ್​ ಸಮಸ್ಯೆಗೆ ತುತ್ತಾಗಿದ್ದರು.

WhatsApp New Features: ಡೆಸ್ಕ್​ಟಾಪ್ ಬಳಕೆದಾರರಿಗೆ ಎರಡು ಹೊಸ ಫೀಚರ್: ವಾಟ್ಸ್​ಆ್ಯಪ್​ನಿಂದ ವಿಭಿನ್ನ ಪ್ರಯತ್ನ

ಜಿಯೋದಿಂದ ವೆಲ್​ಕಮ್ ಆಫರ್ ಘೋಷಣೆ:

ಜಿಯೋ ಟ್ರೂ 5G ಅನ್ನು ಉಚಿತವಾಗಿ ಸಂಪರ್ಕಿಸಲು ಮತ್ತು ಆನಂದಿಸಲು ಗ್ರಾಹಕರಿಗೆ ವೆಲ್‌ಕಮ್ ಆಫರ್ ಅನ್ನು ಘೋಷಿಸಿದೆ. ಆದರೆ, ಈ ವೆಲ್‌ಕಮ್‌ ಆಫರ್ ಆಯ್ದ ಜಿಯೋ 5G ಬಳಕೆದಾರರಿಗೆ ಮಾತ್ರವಷ್ಟೆ ಲಭ್ಯವಾಗುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಜಿಯೋ ಗ್ರಾಹಕರು ಕೆಲ ಅರ್ಹತೆಯನ್ನು ಪಡೆದುಕೊಂಡಿರಬೇಕು ಎಂದು ರಿಲಯನ್ಸ್ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಜಿಯೋ 5G ವೆಲ್‌ಕಮ್‌ ಆಫರ್ ಸದ್ಯ ದೆಹಲಿ – NCR, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಇತರ 5 ನಗರಗಳು ಸೇರಿದಂತೆ ಅರ್ಹ ನಗರಗಳಲ್ಲಿ ಮಾತ್ರ ಲಭ್ಯವಿದೆ. ಅಂದಹಾಗೆ ಈ 5G ಕೊಡುಗೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ 1gbps ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ. ಅಂತೆಯೆ 5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಹೊಸ 5G ಸಿಮ್ ಖರೀದಿಸಬೇಕಾಗಿಲ್ಲ ಎಂದು ಜಿಯೋ ಈ ಹಿಂದೆ ತನ್ನ ಬಳಕೆದಾರರಿಗೆ ಭರವಸೆ ನೀಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Tue, 29 November 22