ಭಾರತದಲ್ಲಿ 5ಜಿ ಲಾಂಚ್ಗೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 1 ರಂದು ನಡೆಯಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (Mobile Congress) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ಮುಂದಿನ ತಿಂಗಳು 5G ಆರಂಭಿಸುವ ನಿರೀಕ್ಷಿಯಿದೆ. ಇದರ ನಡುವೆ ಭಾರತದಲ್ಲಿ ಒಂದರ ಹಿಂದೆ ಒಂದಂರಂತೆ ಅತಿ ಕಡಿಮೆ ಬೆಲೆಗೆ 5ಜಿ ಫೋನ್ಗಳು ಬಿಡುಗಡೆ ಆಗುತ್ತಿದೆ. ಈ ಪೈಕಿ ಜಿಯೋ ಕೂಡ ನೂತನ 5G (Jio Phone 5G) ಸ್ಮಾರ್ಟ್‌ಫೋನ್ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಹೀಗಿರುವಾಗ ಈ ಫೋನಿನ ಬೆಲೆ ಸೇರಿದಂತೆ ಕೆಲ ಫೀಚರ್ಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಇದೀಗ ಜಿಯೋ ಲಾಂಚ್ ಮಾಡಲಿರುವ ಹೊಸ 5G ಸ್ಮಾರ್ಟ್‌ಫೋನ್ ಗ್ರಾಹಕರಲ್ಲಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಗ್ಯಾಜೆಟ್ಸ್ ವೆಬ್ಸೈಟ್ 91 ಮೊಬೈಲ್ಸ್ ಮಾಡಿರುವ ವರದಿಯ ಪ್ರಕಾರ ನೂತನ ಜಿಯೋ ಫೋನ್ 5G ಬೆಲೆ ಕೇವಲ 12,000 ರೂ. ಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಫೋನ್ ‘ಗಂಗಾ’ ಎಂಬ ಕೋಡ್ ನೇಮ್ ಹೊಂದಿದ್ದು, ‘LS1654QB5’ ಮಾದರಿ ಸಂಖ್ಯೆಯೊಂದಿಗೆ ಲಾಂಚ್ ಆಗಲಿದೆ ಎಂಬ ಮಾತಿದೆ.
ಜಿಯೋ ಫೋನ್ 5G ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ+ LCD ಸ್ಕ್ರೀನ್ ಜೊತೆಗೆ 90Hz ಸ್ಕ್ರೀನ್ ರೀಫ್ರೇಶ್ ರೇಟ್ ಅನ್ನು ಹೊಂದಿರಲಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 480 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಪ್ರೊಸೆಸರ್ ಎಂಟ್ರಿ ಲೆವೆಲ್ 5G SoC ಆಗಿದೆ.
ಇನ್ನು ಈ ಸ್ಮಾರ್ಟ್‌ಫೋನ್ 4GB RAM ಮತ್ತು 32GB ಇಂಟರ್ ಸ್ಟೋರೇಜ್ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ಯ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಜಿಯೋ ಫೋನ್ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿರುವ ಸಾದ್ಯತೆಯಿದೆ.
ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿರಲಿದೆ. ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಇರಲಿದೆ. 5,000mAh ಬ್ಯಾಟರಿ ಬ್ಯಾಕ್‌ಅಪ್ ಇರಲಿದ್ದು 18W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿರಲಿದೆಯಂತೆ. ಇದು ಸೋರಿಕೆ ಆಗಿರುವ ಫೀಚರ್ಸ್ ಆಗಿದೆಯಷ್ಟೆ. ಕಂಪನಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.