WhatsApp: ವಾಟ್ಸ್​ಆ್ಯಪ್ ಮೂಲಕ ಆಧಾರ್ ಕಾರ್ಡ್, ಪಾನ್ ಕಾರ್ಡ್ ಡೌನ್​ಲೋಡ್ ಮಾಡುವುದು ಹೇಗೆ?

Aadhaar and PAN Card: MyGov ಹೆಲ್ಪ್‌ಡೆಸ್ಕ್ ವಾಟ್ಸ್​ಆ್ಯಪ್​ಗೆಂದು ಸಹಾಯವಾಣಿ ನಂಬರ್ ಒಂದನ್ನು ನೀಡಿದ್ದು ಇದರ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ದಾಖಲೆಗಳನ್ನು ನೀವು ವಾಟ್ಸ್​ಆ್ಯಪ್​ನಲ್ಲೇ ಪಡೆಯಬಹುದು.

WhatsApp: ವಾಟ್ಸ್​ಆ್ಯಪ್ ಮೂಲಕ ಆಧಾರ್ ಕಾರ್ಡ್, ಪಾನ್ ಕಾರ್ಡ್ ಡೌನ್​ಲೋಡ್ ಮಾಡುವುದು ಹೇಗೆ?
WhatsApp and Aadhaar Pan Card
Follow us
TV9 Web
| Updated By: Vinay Bhat

Updated on: Sep 27, 2022 | 1:28 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್​ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಇಂದು ಕೇವಲ ಚಾಟ್ ಮಾಡಲು, ಫೋಟೋ, ವಿಡಿಯೋ ಕಳುಹಿಸಲು ಮಾತ್ರ ಸೀಮಿತವಾಗಿಲ್ಲ. ಇದುಬಿಟ್ಟು ಅನೇಕ ಪ್ರಯೋಜನಗಳಿವೆ. ಭಾರತದಲ್ಲಿ ವಾಟ್ಸ್​ಆ್ಯಪ್ ಬಳಕೆದಾರರು ಪ್ಯಾನ್ ಕಾರ್ಡ್ (Pan Card), ಆಧಾರ್ ಕಾರ್ಡ್ (Aadhaar Card), ಡ್ರೈವಿಂಗ್ ಲೈಸೆನ್ಸ್ ವಿಮಾ ಪಾಲಿಸಿ ಸೇರಿದಂತೆ ಅನೇಕ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದಕ್ಕಾಗಿ MyGov ತನ್ನ ವಾಟ್ಸ್​ಆ್ಯಪ್ ಚಾಟ್‌ಬಾಟ್‌ನಲ್ಲಿ ಸೇವೆಯನ್ನು ನೀಡಿದ್ದು, ಇದರ ಸಹಾಯದಿಂದ ಡಿಜಿಲಾಕರ್ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರದಂತಹ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.

MyGov ಹೆಲ್ಪ್‌ಡೆಸ್ಕ್ ವಾಟ್ಸ್​ಆ್ಯಪ್​ಗೆಂದು ಸಹಾಯವಾಣಿ ನಂಬರ್ ಒಂದನ್ನು ನೀಡಿದ್ದು ಇದರ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ದಾಖಲೆಗಳನ್ನು ನೀವು ವಾಟ್ಸ್​ಆ್ಯಪ್​ನಲ್ಲೇ ಪಡೆಯಬಹುದು. ನೀವು ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ಹೊಂದಿದ್ದರೆ, ದಾಖಲೆಗಳನ್ನು ಪಡೆಯುವುದು ಮತ್ತಷ್ಟು ಸುಲಭವಾಗುತ್ತದೆ.

ವಾಟ್ಸ್​ಆ್ಯಪ್ ಮೂಲಕ ಆಧಾರ್ಪಾನ್ ಡೌನ್​ಲೋಡ್ ಹೇಗೆ?:

ಇದನ್ನೂ ಓದಿ
Image
Google: ನಾಸಾ ಡಾರ್ಟ್ ಮಿಷನ್ ಯಶಸ್ವಿ: ಗೂಗಲ್​ನಿಂದ ವಿಶೇಷ ಸಂಭ್ರಮಾಚರಣೆ
Image
NASA: ಭೂಮಿ ಸೇಫ್: ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದು ದೊಡ್ಡ ಅಪಾಯ ತಪ್ಪಿಸಿದ ನಾಸಾದ ಡಾರ್ಟ್ ನೌಕೆ
Image
PDF File: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ರಿಮೂವ್‌ ಮಾಡಲು ಇಲ್ಲಿದೆ ನೋಡಿ ಟ್ರಿಕ್ಸ್
Image
WhatsApp Uber service: ಇದೀಗ ವಾಟ್ಸ್​ಆ್ಯಪ್​ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಇಲ್ಲಿದೆ ಸಂಪೂರ್ಣ ಮಾಹಿತಿ
  • ಮೊದಲು +91-9013151515 ಈ ನಂಬರ್ ಅನ್ನು MyGov HelpDesk ಎಂದು ನಿಮ್ಮ ಫೋನ್​ನಲ್ಲಿ ಸೇವ್ ಮಾಡಿ.
  • ನಂತರ ವಾಟ್ಸ್​ಆ್ಯಪ್ ತೆರೆದು MyGov HelpDesk ಚಾಟ್‌ಬಾಟ್​ನಲ್ಲಿ ನಮಸ್ತೆ‘, ‘ಹಾಯ್ಎಂದು ಟೈಪ್ ಮಾಡಿ ಕಳುಹಿಸಿ.
  • ಆಗ ಡಿಜಿಲಾಕರ್ ಅಥವಾ ಕೋವಿನ್ ಸೇವೆ ಎಂಬ ಎರಡು ಆಯ್ಕೆ ಕಾಣಿಸುತ್ತದೆ. ಇಲ್ಲಿ ಡಿಜಿಲಾಕರ್ ಸೇವೆಗಳುಆಯ್ಕೆಮಾಡಿ.
  • ಈಗ ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಚಾಟ್‌ಬಾಟ್ ಕೇಳಿದಾಗ ಹೌದುಟ್ಯಾಪ್ ಮಾಡಿ.
  • ನೀವು ಖಾತೆ ಹೊಂದಿಲ್ಲದಿದ್ದರೆ ಅಧಿಕೃತ ವೆಬ್‌ಸೈಟ್ ಅಥವಾ ಡಿಜಿಲಾಕರ್ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯನ್ನು ರಚಿಸಿ.
  • ಚಾಟ್‌ಬಾಟ್ ಈಗ ನಿಮ್ಮ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಳುಹಿಸಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ. ಅದನ್ನು ಚಾಟ್‌ಬಾಟ್ ನಲ್ಲಿ ನಮೂದಿಸಿ.
  • ಈಗ ಚಾಟ್‌ಬಾಟ್ ಪಟ್ಟಿಗಳು ನಿಮ್ಮ ಡಿಜಿಲಾಕರ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸುತ್ತದೆ.
  • ಡೌನ್‌ಲೋಡ್ ಮಾಡಲು, ಕಳುಹಿಸಲಾದ ಡಾಕ್ಯುಮೆಂಟ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಕಳುಹಿಸಿ.
  • ಆಗ ನಿಮ್ಮ ಡಾಕ್ಯುಮೆಂಟ್ PDF ರೂಪದಲ್ಲಿ ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ