JioPhone Next: ರಿವೀಲ್ ಆಯ್ತು ಜಿಯೋಫೋನ್‌ ನೆಕ್ಸ್ಟ್‌ ಸ್ಮಾರ್ಟ್​ಫೋನ್ ಬೆಲೆ: ದೀಪಾವಳಿಯಂದು ಖರೀದಿಗೆ ಲಭ್ಯ

ಜಿಯೋಫೋನ್‌ ನೆಕ್ಸ್ಟ್‌ ದೀಪಾವಳಿಯಿಂದ ಅಂದರೆ ನವೆಂಬರ್ 4ಕ್ಕೆ ಖರೀದಿಗೆ ಲಭ್ಯವಾಗಲಿದೆ. ಖರೀದಿಸುವ ಗ್ರಾಹಕರಿಗಾಗಿ ರಿಲಯನ್ಸ್‌ ಜಿಯೋ ಹಲವು ಇಎಂಐ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ EMI ಪ್ಲಾನ್‌ಗಳು 18 ತಿಂಗಳು ಮತ್ತು 24 ತಿಂಗಳುಗಳ ಅವಧಿಗೆ ಲಭ್ಯವಿವೆ.

JioPhone Next: ರಿವೀಲ್ ಆಯ್ತು ಜಿಯೋಫೋನ್‌ ನೆಕ್ಸ್ಟ್‌ ಸ್ಮಾರ್ಟ್​ಫೋನ್ ಬೆಲೆ: ದೀಪಾವಳಿಯಂದು ಖರೀದಿಗೆ ಲಭ್ಯ
JioPhone Next
Follow us
TV9 Web
| Updated By: Vinay Bhat

Updated on:Oct 30, 2021 | 1:50 PM

ಬಹುನಿರೀಕ್ಷಿತ ಜಿಯೋಫೋನ್‌ ನೆಕ್ಸ್ಟ್‌ (JioPhone Next) ಭಾರತದಲ್ಲಿ ಅಧಿಕೃತವಾಗಿದೆ. ರಿಲಯನ್ಸ್‌ ಜಿಯೋ (Reliance Jio) ಮತ್ತು ಗೂಗಲ್‌ (Google) ಸಹಯೋಗದಲ್ಲಿ ಸಿದ್ದವಾಗಿರುವ ಈ ಸ್ಮಾರ್ಟ್‌ಫೋನ್‌ ದೀಪಾವಳಿಯಿಂದ (Deepavali) ಅಂದರೆ ನವೆಂಬರ್ 4ಕ್ಕೆ ಖರೀದಿಗೆ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ ಮತ್ತು ಗೂಗಲ್‌ನಿಂದ ತಯಾರಾಗಿ ದೇಶದಲ್ಲಿ ಹೊಸ ಬದಲಾವಣೆ ತರುವ ಉದ್ದೇಶವನ್ನು ಹೊಂದಿರುವ JioPhone Next ಸ್ಮಾರ್ಟ್‌ಫೋನಿನ ಅಧಿಕೃತ ಮಾಹಿತಿಗಳನ್ನು ರಿಲಯನ್ಸ್ ಪ್ರಕಟಿಸಿದೆ. ಇದೇ ದೀಪಾವಳಿಗೆ ಲಾಂಚ್ ಆಗುತ್ತಿರುವ JioPhone Next ಸ್ಮಾರ್ಟ್‌ಫೋನ್ 6,499.ರೂ ಬೆಲೆ ಹೊಂದಿದ್ದು, ಈ ಫೋನ್‌ ಅನ್ನು ಜಿಯೋ ಆಫರ್ ಮೂಲಕ ಕೇವಲ 1,999.ರೂ ಬೆಲೆಗೆ ಖರೀದಿಸಬಹುದಾಗಿದೆ ಹಾಗೂ ತಿಂಗಳಿಗೆ 300 ರೂ.ಮಾತ್ರ EMI ಪಾವತಸಬೇಕಿದೆ ಎಂದು ತಿಳಿದುಬಂದಿದೆ.

JioPhone Next ಪ್ರಗತಿOS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು Android-ಆಧಾರಿತ ಸಾಫ್ಟ್‌ವೇರ್ ಅನ್ನು ವಿಶೇಷವಾಗಿ ಭಾರತೀಯ ಪ್ರೇಕ್ಷಕರಿಗಾಗಿ ತಯಾರಿಸಲಾಗಿದೆ. ಜಿಯೋಫೋನ್‌ ನೆಕ್ಸ್ಟ್‌ ಖರೀದಿಸುವ ಗ್ರಾಹಕರಿಗಾಗಿ ರಿಲಯನ್ಸ್‌ ಜಿಯೋ ಹಲವು ಇಎಂಐ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ EMI ಪ್ಲಾನ್‌ಗಳು 18 ತಿಂಗಳು ಮತ್ತು 24 ತಿಂಗಳುಗಳ ಅವಧಿಗೆ ಲಭ್ಯವಿವೆ. ಈ ಪ್ಲಾನ್‌ಗಳು ಜಿಯೋದಿಂದ ವಾಯ್ಸ್‌ ಮತ್ತು ಡೇಟಾ ಪ್ರಯೋಜನಗಳನ್ನು ಹೊಂದಿವೆ. ಆದ್ದರಿಂದ ಬಳಕೆದಾರರು ಈ ಕ್ಯಾರಿಯರ್ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಜಿಯೋ ಆಲ್‌ವೇಸ್‌ ಆನ್ ಪ್ಲಾನ್, XL ಪ್ಲಾನ್‌ ಮತ್ತು XXL ಪ್ಲಾನ್‌ ಅನ್ನು ಒಳಗೊಂಡಿದೆ.

ಆಲ್‌ವೇಸ್ ಆನ್ ಯೋಜನೆ – 24 ತಿಂಗಳಿಗೆ 300 ರೂ. ಅಥವಾ 18 ತಿಂಗಳಿಗೆ ತಿಂಗಳಿಗೆ 350 ರೂ. EMI ಪಾವತಿಸುವುದರ ಜೊತೆಗೆ . JioPhone Next ಸ್ಮಾರ್ಟ್‌ಫೋನನ್ನು ಖರೀದಿಸಬಹುದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರು ತಿಂಗಳಿಗೆ 5GB ಡೇಟಾ ಮತ್ತು 100 ನಿಮಿಷಗಳ ಕರೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಆಲ್‌ವೇಸ್‌ ಆನ್ ಪ್ಲಾನ್‌: ಈ ಪ್ಲಾನ್ 24 ತಿಂಗಳ ಅವಧಿಯನ್ನು ಹೊಂದಿದ್ದು, ತಿಂಗಳಿಗೆ 450ರೂ ಅಥವಾ 18 ತಿಂಗಳ ಅವಧಿಗೆ ತೆಗೆದುಕೊಂಡರೆ ತಿಂಗಳಿಗೆ 500 ರೂ. ಇಎಂಐ ಆಯ್ಕೆ ಹೊಂದಿದೆ. ಇದು ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ

ಲಾರ್ಜ್‌ ಪ್ಲಾನ್ -ಯೋಜನೆ – ಈ ಯೋಜನೆಯ ಬೆಲೆ ರೂ. 24 ತಿಂಗಳಿಗೆ ತಿಂಗಳಿಗೆ 450 ಅಥವಾ ರೂ. 18 ತಿಂಗಳಿಗೆ ತಿಂಗಳಿಗೆ 500 ರೂ. ಇದು ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ.

XL ಪ್ಲಾನ್ -ಈ ಪ್ಲಾನ್24 ತಿಂಗಳ ಅವಧಿಯಲ್ಲಿ ತಿಂಗಳಿಗೆ 500 ರೂ ಹಾಗೂ 18 ತಿಂಗಳ ಅವಧಿಯಲ್ಲಿ ತಿಂಗಳಿಗೆ 550ರೂ ಬೆಲೆ ಹೊಂದಿದೆ. ಇದು ದಿನಕ್ಕೆ 2GB ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ.

XXL ಯೋಜನೆ – ಈ ಯೋಜನೆಯ ಬೆಲೆ ರೂ. 24 ತಿಂಗಳಿಗೆ ತಿಂಗಳಿಗೆ 550 ರೂ. 18 ತಿಂಗಳಿಗೆ ತಿಂಗಳಿಗೆ 600 ರೂ. ಇದು ದಿನಕ್ಕೆ 2.5GB ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳೊಂದಿಗೆ ಬರುತ್ತದೆ. ಈ EMI ಯೋಜನೆಗಳನ್ನು ಪಡೆಯಲು ಗ್ರಾಹಕರು 501. ರೂ.ಗಳ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಜಿಯೋಫೋನ್ ನೆಕ್ಸ್ಟ್ ಫೀಚರ್ಸ್‌ ಏನು?:

ಜಿಯೋಫೋನ್ ನೆಕ್ಸ್ಟ್ 720×1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 5.45-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 215 ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಪ್ರಗತಿ OS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯಾಗಿದ್ದು, ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗಲಿದೆ. ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು 512GB ವರೆಗೆ ವಿಸ್ತರಿಸಬಹುದಾಗಿದೆ.

ಈ ಫೋನ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ರಿಯರ್‌ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್, ನೈಟ್ ಮೋಡ್ ಮತ್ತು ಫ್ರೀ ಲೋಡ್ ಮಾಡಿದ ಕಸ್ಟಮ್ ಇಂಡಿಯಾ-ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-USB ಪೋರ್ಟ್, 3.5mm ಆಡಿಯೋ ಜ್ಯಾಕ್, ಬ್ಲೂಟೂತ್ v4.1, Wi-Fi ಯನ್ನು ಬೆಂಬಲಿಸಲಿದೆ.

ಹೊಸ JioPhone Next ಭಾರತದಲ್ಲಿ 6,499.ರೂ ಬೆಲೆ ಹೊಂದಿದೆ. ಖರೀದಿಸಲು ಬಳಕೆದಾರರು ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್‌ಗೆ ಭೇಟಿ ನೀಡಬೇಕು ಅಥವಾ ವೆಬ್‌ಸೈಟ್‌ಗೆ ಹೋಗಿ ನೋಂದಾಯಿಸಿಕೊಳ್ಳಬೇಕು.

WhatsApp: ನವೆಂಬರ್ 1 ರಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಬಂದ್: ನಿಮ್ಮ ಫೋನ್ ಕೂಡ ಇದೆಯೇ?

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಶುರು ಮಾಡಿದ ರೆಡ್ಮಿ ನೋಟ್ 11 ಸರಣಿ: ಬೆಲೆ ಎಷ್ಟು ಗೊತ್ತೇ?

(JioPhone Next the budgeted entry-level smartphone available from Diwali Price Revealed)

Published On - 1:49 pm, Sat, 30 October 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್