Sign In

By signing in or creating an account, you agree with Associated Broadcasting Company's Terms & Conditions and Privacy Policy.

JioTag: ಆ್ಯಪಲ್​ ಏರ್​ಟ್ಯಾಗ್​ಗೆ ಸೆಡ್ಡು ಹೊಡೆದ ಜಿಯೋ; ಕಡಿಮೆ ಬೆಲೆಯ ಜಿಯೋಟ್ಯಾಗ್ ಬಿಡುಗಡೆ

ಆ್ಯಪಲ್​ ಏರ್​ಟ್ಯಾಗ್​ಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ಇದೀಗ ಜಿಯೋಟ್ಯಾಗ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯ ಬಹು ನಿರೀಕ್ಷಿತ ಜಿಯೋಟ್ಯಾಗ್ ವಿನ್ಯಾಸದ ದೃಷ್ಟಿಯಿಂದ ಮಾತ್ರವಲ್ಲದೆ ಬೆಲೆ ವಿಚಾರದಲ್ಲಿಯೂ ಆ್ಯಪಲ್​ ಏರ್​ಟ್ಯಾಗ್​ಗೆ ಪೈಪೋಟಿ ಒಡ್ಡಲಿದೆ.

JioTag: ಆ್ಯಪಲ್​ ಏರ್​ಟ್ಯಾಗ್​ಗೆ ಸೆಡ್ಡು ಹೊಡೆದ ಜಿಯೋ; ಕಡಿಮೆ ಬೆಲೆಯ ಜಿಯೋಟ್ಯಾಗ್ ಬಿಡುಗಡೆ
ಜಿಯೋಟ್ಯಾಗ್ (ಚಿತ್ರ ಕೃಪೆ; ರಿಲಯನ್ಸ್ ಜಿಯೋ ವೆಬ್​ಸೈಟ್)Image Credit source: Reliance Jio Website
Follow us
Ganapathi Sharma
|

Updated on:Jun 08, 2023 | 7:20 PM

ನವದೆಹಲಿ: ಆ್ಯಪಲ್​ ಏರ್​ಟ್ಯಾಗ್​ಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ಇದೀಗ ಜಿಯೋಟ್ಯಾಗ್ (JioTag Tracker) ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯ ಬಹು ನಿರೀಕ್ಷಿತ ಜಿಯೋಟ್ಯಾಗ್ ವಿನ್ಯಾಸದ ದೃಷ್ಟಿಯಿಂದ ಮಾತ್ರವಲ್ಲದೆ ಬೆಲೆ ವಿಚಾರದಲ್ಲಿಯೂ ಆ್ಯಪಲ್​ ಏರ್​ಟ್ಯಾಗ್​ಗೆ (Apple AirTag) ಪೈಪೋಟಿ ಒಡ್ಡಲಿದೆ. ಬ್ಲೂಟೂಥ್ ಟ್ರ್ಯಾಕರ್‌ ಜಿಯೋಟ್ಯಾಗ್ ಬೆಲೆ 749 ರೂ (MRP Rs 2,199) ಆಗಿದೆ. ಆ್ಯಪಲ್​ ಏರ್​ಟ್ಯಾಗ್ ಬೆಲೆ ಸದ್ಯ 3,490 ರೂ. ಇದೆ. ಕೀ, ವ್ಯಾಲೆಟ್‌ನಂಥ ವಸ್ತುಗಳನ್ನು ಹಾಗೂ ಸ್ಮಾರ್ಟ್​​​ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಟ್ರ್ಯಾಕ್ ಮಾಡಲು ಮತ್ತು ಹುಡುಕಲು ಜಿಯೋಟ್ಯಾಗ್ ನೆರವಾಗಲಿದೆ.

ಏನಿದು ಜಿಯೋಟ್ಯಾಗ್?

ಬಳಕೆದಾರರು ತಮ್ಮ ಸ್ಮಾರ್ಟ್​ಫೋನ್, ಕೀ ಅಥವಾ ವ್ಯಾಲೆಟ್ ಹಾಗೂ ಇತರ ವಸ್ತುಗಳನ್ನು ಆಕಸ್ಮಿಕವಾಗಿ ಬಿಟ್ಟುಹೋದಾಗ ಎಚ್ಚರಿಸುವ ಒಂದು ಸಾಧನವೇ ಜಿಯೋಟ್ಯಾಗ್. ಇದು ಬ್ಲೂಟೂಥ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಕಳೆದುಹೋಗಿರುವ ವಸ್ತು ಕೊನೆಯದಾಗಿ ಎಲ್ಲಿ ಬಳಕೆದಾರರರ ಬಳಿ ಇತ್ತು ಎಂಬುದನ್ನೂ ನಿಖರವಾಗಿ ತಿಳಿಸಬಲ್ಲದು.

ಕಳೆದುಹೋಗಿರುವ ವಸ್ತುವಿನ ಬಗ್ಗೆ ಜಿಯೋಥಿಂಗ್ಸ್ ಆ್ಯಪ್​ನಲ್ಲಿ ಮಾರ್ಕ್ ಮಾಡಿ ಇಡುವ ಆಯ್ಕೆಯನ್ನೂ ಜಿಯೋಟ್ಯಾಗ್ ಹೊಂದಿದೆ. ಈ ಆಯ್ಕೆಯು ಜಿಯೋ ನೆಟ್ವರ್ಕ್​ ಅನ್ನು ಬಳಸಿಕೊಂಡು ವಸ್ತು ಕಳೆದುಹೋಗಿರುವ ಸ್ಥಳವನ್ನು ಪತ್ತೆ ಮಾಡಲು ನೆರವಾಗಲಿದೆ ಎಂದು ಜಿಯೋ ವೆಬ್​ಸೈಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಹೇಗಿದೆ ಜಿಯೋಟ್ಯಾಗ್?

ಜಿಯೋಟ್ಯಾಗ್ ಕೇವಲ 9.5 ಗ್ರಾಂ ತೂಕ ಹೊಂದಿದೆ. ಬ್ಲೂಟೂಥ್ 5.1 ಸಪೋರ್ಟ್ ಹೊಂದಿದೆ. 1 ವರ್ಷದವರೆಗಿನ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಒಳಾಂಗಣದಲ್ಲಿ (ಇಂಡೋರ್​​ನಲ್ಲಿ) 20 ಮೀಟರ್​​ ವರೆಗಿನ ರೇಂಜ್ ಹಾಗೂ ಹೊರಾಂಗಣದಲ್ಲಿ (ಔಟ್​​ಡೋರ್​​ನಲ್ಲಿ) 50 ಮೀಟರ್​​ ವರೆಗಿನ ರೇಂಜ್ ಹೊಂದಿರಲಿದೆ.

ಜಿಯೋಟ್ಯಾಗ್ ಎಲ್ಲಿ ಖರೀದಿಸಬಹುದು?

ಸದ್ಯ ಬಿಳಿ ಬಣ್ಣದ ಜಿಯೋಟ್ಯಾಗ್ ಮಾತ್ರ ಲಭ್ಯವಿದ್ದು, ಜಿಯೋದ ಅಧಿಕೃತ ವೆಬ್​ಸೈಟ್​​ ಮೂಲಕ ಖರೀದಿಗೆ ಲಭ್ಯವಿದೆ. ಕೆಲವು ಪಿನ್ ಕೋಡ್‌ಗಳಿಗೆ ಕ್ಯಾಶ್ ಆನ್ ಡೆಲಿವರಿ ಸೌಲಭ್ಯವನ್ನೂ ಜಿಯೋ ಒದಗಿಸಿದೆ.

ಜಿಯೋಟ್ಯಾಗ್ ಬೆಲೆ ವಿವರ

ಬ್ಲೂಟೂತ್‌ ಟ್ರ್ಯಾಕರ್‌ ಜಿಯೋಟ್ಯಾಗ್ ಬೆಲೆ 2,199 ರೂ. ಆಗಿದೆ. ಸದ್ಯ ಆರಂಭಿಕ ಆಫರ್​ನೊಂದಿಗೆ ಕೇವಲ 749 ರೂ.ಗೆ ಜಿಯೋಟ್ಯಾಗ್ ಖರೀದಿಗೆ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Thu, 8 June 23

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ