Blue Tick: ಫೇಸ್ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿದೆ ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ: ಬೆಲೆ ಎಷ್ಟು ನೋಡಿ?
Meta Verified: ಮೆಟಾ ಪ್ರಸ್ತುತ ಭಾರತಲ್ಲಿ ತನ್ನ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ (Blue Tick) ನೀಡುವ ಸೇವೆಗಳನ್ನು ಹೊರತಂದಿದೆ. ಐಇಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಸಿಗುತ್ತಿದೆ.
ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಅವರು ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡ ಬಳಿಕ ಮೆಟಾ ಒಡೆತನದ ಫೇಸ್ಬುಕ್, ಇನ್ಸ್ಟಾಗ್ರಾಮ್ನಂತಹ ಇತರೆ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬದಲಾವಣೆಗಳು ಆಗುತ್ತಿದೆ. ಹೊಸ ಹೊಸ ಫೀಚರ್ಗಳಿಂದ ಹಿಡಿದು ಉದ್ಯೋಗಿಗಳ ವಜಾದ ವರೆಗೆ ಅನೇಕ ಕಂಪನಿಗಳು ಟ್ವಿಟ್ಟರ್ ದಾರಿಯನ್ನೇ ಹಿಡಿಯುತ್ತಿದೆ. ಇದರಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಬ್ಲೂ ಟಿಕ್ ಚಂದಾದಾರಿಕೆ. ಟ್ವಿಟ್ಟರ್‌ನಲ್ಲಿ ಹಣ ಕೊಟ್ಟು ವೆರಿಫೈಡ್ ಅನ್ನು ಪಡೆದುಕೊಳ್ಳಬಹುದು. ಇದೀಗ ಇದೇ ಹಣ ಕೊಟ್ಟು ಬ್ಲೂ ಟಿಕ್ ಪಡೆದುಕೊಳ್ಳಿ ಎಂಬ ನಿಯಮವನ್ನು ಮೆಟಾ (Meta) ಕಂಪನಿಯೂ ಪ್ರಾರಂಭಿಸಿದೆ. ಟ್ವಿಟರ್ ಅನ್ನೇ ಅನುಸರಿಸಿರುವ ಮೆಟಾ ಈಗ ಭಾರತದಲ್ಲಿ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ (Blue Tick) ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಮೆಟಾ ಪ್ರಸ್ತುತ ಭಾರತಲ್ಲಿ ತನ್ನ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈ ಸೇವೆಗಳನ್ನು ಹೊರತಂದಿದೆ. ಐಇಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಸಿಗುತ್ತಿದೆ. ಭಾರತದಲ್ಲಿ, Android ಮತ್ತು iOS ಬಳಕೆದಾರರಿಗೆ ಮೆಟಾ ವೆರಫೈಡ್ ಪ್ರತಿ ತಿಂಗಳಿಗೆ 699 ರೂ. ನಿಗದಿ ಮಾಡಲಾಗಿದೆ. ಇದನ್ನು ಶೀಘ್ರದಲ್ಲೇ ವೆಬ್ ಬಳಕೆದಾರರಿಗೆ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದು 599 ರೂ. ಮಾಸಿಕ ಶುಲ್ಕ ಇರಲಿದೆ ಎಂದು ಕಂಪನಿಯು ಘೋಷಿಸಿದೆ.
Vivo S17: ಸೂಪರ್ ಎಸ್ ಸರಣಿಯಲ್ಲಿ ಸ್ಟೈಲಿಶ್ ವಿವೋ ಫೋನ್ ಬಿಡುಗಡೆ
ಫೇಸ್ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲೂ ಟಿಕ್ ಅನ್ನು ಖರೀದಿಸಲು 18 ವರ್ಷ ವಯಸ್ಸಿನವರಾಗಿರಬೇಕು. ಇದಕ್ಕಾಗಿ ನಿಮ್ಮ ಫೋಟೋ ಐಡಿಯನ್ನು ಸಲ್ಲಿಸಬೇಕು. ಜೊತೆಗೆ ಸೆಲ್ಫೀ ವಿಡಿಯೋ ಕಳುಹಿಸಿ ಖಚಿತ ಪಡಿಸಬೇಕು. ಬಳಿಕವಷ್ಟೆ ನಿಮ್ಮ ಹೆಸರಿನ ಪಕ್ಕದಲ್ಲಿ ನೀಲಿ ಟಿಕ್ ಅನ್ನು ಪಡೆಯಲು ಅನುಮತಿ ಕಳುಹಿಸಬಹುದು. ಟ್ವಿಟ್ಟರ್‌ನಲ್ಲಿ ಬ್ಲೂಟಿಕ್ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲಿಸಿದ ಬ್ಯಾಡ್ಜ್ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೋಸ್ಟ್ ಮಾಡಲಾದ ಯಾವುದೇ ಮಾಹಿತಿಯನ್ನು ಜನರು ಸುಲಭವಾಗಿ ನಂಬಬಹುದಾಗಿದೆ. ಹಾಗೂ ಅವರಿಗೆ ವಿಶೇಷ ಸ್ಥಾನಮಾನ ಸಹ ಸಾಮಾಜಿಕ ವಲಯದಲ್ಲಿ ಇರುತ್ತದೆ.
ಫೆಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಿಂದೆ ಪ್ರಸಿದ್ಧ ವ್ಯಕ್ತಿಗಳಿಗೆ ಮಾತ್ರ ಬ್ಲೂ ಬ್ಯಾಡ್ಜ್ ಇರುವ ವೆರಿಫೈಡ್ ಅಕೌಂಟ್ ನೀಡಲಾಗುತ್ತಿತ್ತು. ಇದೀಗ ಟ್ವಿಟ್ವರ್‌ನಂತೆಯೇ ಹಣ ಪಾವತಿಸಿದ ಖಾತೆದಾರರಿಗೆ ಬ್ಲೂ ಟಿಕ್ ನೀಡಲಿದೆ. ಟ್ವಿಟ್ಟರ್ ಬ್ಲೂ ಟಿಕ್ ಪಡೆದುಕೊಳ್ಳಲು ತಿಂಗಳಿಗೆ 650 ರೂ. ವೆಬ್ ಬಳಕೆದಾರರಿಗೆ, 900 ರೂ. ಮೊಬೈಲ್ ಬಳಕೆದಾರರಿಗೆ ನಿಗದಿ ಮಾಡಲಾಗಿದೆ. ಅಂತೆಯೆ ವರ್ಷಕ್ಕೆ 6,800 ರೂ. ಪಾವತಿಸಬೇಕು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ