Lava X2: ಕೇವಲ 6,599 ರೂ: ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಬಿಡುಗಡೆ ಆಯಿತು ಹೊಸ ಸ್ಮಾರ್ಟ್​ಫೋನ್

| Updated By: Vinay Bhat

Updated on: Mar 05, 2022 | 1:19 PM

Lava X2 Price: ಅಚ್ಚರಿ ಎಂಬಂತೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್, ಬೊಂಬಾಟ್ ಬ್ಯಾಟರಿ ಲೈಫ್ ಇರುವ ಲಾವಾ X2 ಸ್ಮಾರ್ಟ್‌ಫೋನ್‌ ಬೆಲೆ ಕೇವಲ 6,999 ರೂ. ಎಂದರೆ ನಂಬಲೇ ಬೇಕು.

Lava X2: ಕೇವಲ 6,599 ರೂ: ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಬಿಡುಗಡೆ ಆಯಿತು ಹೊಸ ಸ್ಮಾರ್ಟ್​ಫೋನ್
Lava X2
Follow us on

ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿ ಸುದ್ದಿಯಾಗುವ ಪ್ರಸಿದ್ಧ ಲಾವಾ (Lava) ಕಂಪನಿ ಇದೀಗ ಭಾರತದಲ್ಲಿ ಊಹಿಸಲಾಗದ ಬೆಲೆಗೆ ಆಕರ್ಷಕ ಫೋನೊಂದನ್ನು ಅನಾವರಣ ಮಾಡಿದೆ. ಇದರ ಹೆಸರು ಲಾವಾ ಎಕ್ಸ್​2 (Lava X2). ಇದು ಈ ಸರಣಿಯ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಅಚ್ಚರಿ ಎಂಬಂತೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್, ಬೊಂಬಾಟ್ ಬ್ಯಾಟರಿ ಲೈಫ್ ಜೊತೆಗೆ ಬಜೆಟ್ ಖರೀದಿದಾರರ ಅಗತ್ಯಗಳನ್ನು ಪೂರೈಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್​ಫೋನ್ (Smartphone) ಬೆಲೆ ಕೇವಲ 6,999 ರೂ. ಎಂದರೆ ನಂಬಲೇ ಬೇಕು.

ಹೌದು, ಭಾರತದಲ್ಲಿ ಲಾವಾ X2 ಸ್ಮಾರ್ಟ್‌ಫೋನ್‌ ಬೆಲೆ ಕೇವಲ 6,999 ರೂ.ಆಗಿದೆ. 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಮಾರ್ಚ್ 11 ರವರೆಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಮುಂಗಡ ಬುಕ್ಕಿಂಗ್‌ಗಳಿಗೆ ರಿಯಾಯಿತಿ ದರದಲ್ಲಿ 6,599 ರೂ. ಬೆಲೆಗೆ ಖರೀದಿಸುವ ಅವಕಾಶ ಕಲ್ಪಿಸಿದೆ. ಅಮೆಜಾನ್ ಪೇಜ್‌ ಪ್ರಕಾರ, ಈ ಸ್ಮಾರ್ಟ್‌ಫೋನ್ ನೀಲಿ ಮತ್ತು ಸಯಾನ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಗ್ರಾಹಕರ ಖರೀದಿ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅಮೆಜಾನ್ ವಿಶೇಷ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಲಾವಾ ಕಂಪನಿ ಹೇಳಿಕೊಂಡಿದೆ.

ಲಾವಾ X2 ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 81.3% ಸ್ಕ್ರೀನ್-ಟು-ಬಾಡಿ ಅನುಪಾತದಿಂದ ಕೂಡಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ.

ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ f/2.0 ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಇನ್ನು ರಿಯರ್‌ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಅನ್ನು ಕೂಡ ಹೊಂದಿದ್ದು, ವೀಡಿಯೊ 30fps ನಲ್ಲಿ 1080p ರೆಕಾರ್ಡ್‌ ಮಾಡಲು ಅನುಮತಿಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ರಿಯರ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ v5.0, 3.5 ಎಂಎಂ ಆಡಿಯೊ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಒಟಿಜಿ ಬೆಂಬಲ ಸೇರಿವೆ. ಇದಲ್ಲದೆ ಅಕ್ಸಿಲೆರೋಮೀಟರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ನೀಡಿರುವುದು ವಿಶೇಷ. ಇಷ್ಟು ಕಡಿಮೆ ಬೆಲೆಗೆ ಇಷ್ಟೆಲ್ಲ ಫೀಚರ್​ಗಳಿರುವ ಫೋನ್ ಭಾರತದಲ್ಲಿ ಸಿಗುವುದು ತೀರಾ ವಿರಳ.

Moto G22: ಬಜೆಟ್ ಬೆಲೆಗೆ ಬಂಪರ್ ಫೀಚರ್ಸ್ ಇರುವ ಮೋಟೋ G22 ಸ್ಮಾರ್ಟ್‌ಫೋನ್ ಬಿಡುಗಡೆ