Sign In

By signing in or creating an account, you agree with Associated Broadcasting Company's Terms & Conditions and Privacy Policy.

Moto G22: ಬಜೆಟ್ ಬೆಲೆಗೆ ಬಂಪರ್ ಫೀಚರ್ಸ್ ಇರುವ ಮೋಟೋ G22 ಸ್ಮಾರ್ಟ್‌ಫೋನ್ ಬಿಡುಗಡೆ

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಮೋಟೋ G22 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಪ್ರೊಸೆಸರ್‌ ಬಲವನ್ನು ಪಡೆದಿದೆ. ಅಲ್ಲದೆ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ.

Moto G22: ಬಜೆಟ್ ಬೆಲೆಗೆ ಬಂಪರ್ ಫೀಚರ್ಸ್ ಇರುವ ಮೋಟೋ G22 ಸ್ಮಾರ್ಟ್‌ಫೋನ್ ಬಿಡುಗಡೆ
Moto G22
Follow us
TV9 Web
| Updated By: Vinay Bhat

Updated on: Mar 05, 2022 | 6:28 AM

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗಷ್ಟೆ ಮೋಟೋರೊಲಾ ಎಡ್ಜ್‌ 30 ಪ್ರೊ (Motorola Edge 30 Pro) ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿ ಧೂಳೆಬ್ಬಿಸಿದ್ದ ಮೋಟೋರೊಲಾ ಕಂಪನಿ ಇದೀಗ ಮತ್ತೊಂದು ಆಕರ್ಷಕ ಫೋನ್ ಅನ್ನು ಅನಾವರಣ ಮಾಡಿದೆ. ಮೋಟೋ ಕಂಪನಿಯು ತನ್ನ G ಸರಣಿಯಲ್ಲಿ ನೂತನವಾಗಿ ಮೋಟೋ ಜಿ22 (Moto G22) ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಿದೆ. ಆದರೆ, ಸದ್ಯಕ್ಕೆ ಇದು ಯುರೋಪ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಕೆಲವೇ ತಿಂಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆಯಂತೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಪ್ರೊಸೆಸರ್‌ ಬಲವನ್ನು ಪಡೆದಿದೆ. ಅಲ್ಲದೆ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಈ ಅದ್ಭುತ ಫೀಚರ್ಸ್ ಹೊಂದಿರುವ ಮೋಟೋ G22 ಸ್ಮಾರ್ಟ್‌ಫೋನ್ (Smartphone) ಬಜೆಟ್ ಬೆಲೆಗೆ ಲಭ್ಯವಿದೆ.

ಈ ಫೋನಿನ ಇತರೆ ವಿಶೇಷತೆ ಬಗ್ಗೆ ನೋಡುವುದಾದರೆ, ಮೋಟೋ G22 ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಹಿಲಿಯೋ G37 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಈ ಫೋನ್ ಆಂಡ್ರಾಯ್ಡ್ 12 ಓಎಸ್‌ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.

ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇದರೊಂದಿಗೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಈ ಫೋನ್ 185 ಗ್ರಾಂ ತೂಕವನ್ನು ಪಡೆದಿದೆ. ಸದ್ಯಕ್ಕೆ ಇದು ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 4GB RAM ಮತ್ತು 64GB ರೂಪಾಂತರದ ಆಯ್ಕೆಗೆ EUR 169.99 ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 14,270 ರೂ. ಎನ್ನಬಹುದು.

Realme V25: ಫುಲ್‌ ಚಾರ್ಜ್‌ ಮಾಡಿದ್ರೆ 24 ದಿನಗಳ ಸ್ಟ್ಯಾಂಡ್‌ಬೈ ಟೈಂ: ಇದು ರಿಯಲ್ ಮಿಯ ಹೊಸ ಪವರ್​​ಫುಲ್ ಫೋನ್

Motorola Edge 30 Pro: 68W ಟರ್ಬೊ ಚಾರ್ಜರ್, 50MP ಕ್ಯಾಮೆರಾ: ಮೋಟೋ ಎಡ್ಜ್‌ 30 ಪ್ರೊ ಇಂದು ಮೊದಲ ಸೇಲ್

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ