ಮೆಟಾ (Meta) ತನ್ನ ಟ್ವಿಟ್ಟರ್ (Twitter) ಪ್ರತಿಸ್ಪರ್ಧಿ ಥ್ರೆಡ್ಸ್ ಆ್ಯಪ್ ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬುಧವಾರ ಮಧ್ಯರಾತ್ರಿ ಯುಕೆಯಲ್ಲಿ ಥ್ರೆಡ್ಸ್ (Threads) ಅಪ್ಲಿಕೇಶನ್ ಲೈವ್ ಮಾಡಲಾಯಿತು. ಇದೀಗ ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಇದು ಕಟ್ಟುನಿಟ್ಟಾದ ಡೇಟಾ ಗೌಪ್ಯತೆ ನಿಯಮಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ದಿ ವರ್ಜ್ ವರದಿಯ ಪ್ರಕಾರ, ಕೇವಲ ಎರಡು ಗಂಟೆಗಳಲ್ಲಿ ಥ್ರೆಡ್ಸ್ ಅಪ್ಲಿಕೇಶನ್ 2 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ನೋಂದಣಿಗೆ ಸಾಕ್ಷಿಯಾಗಿದೆ.
ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಆಕೌಂಟ್ ಮೂಲಕ ಥ್ರೆಡ್ಸ್‌ಗೆ ಲಿಂಕ್ ಮಾಡಬಹುದು. ಇನ್ಸ್ಟಾದ ಯೂಸರ್ ನೇಮ್ ಥ್ರೆಡ್ಸ್ನಲ್ಲೂ ಮುಂದುವರೆಸಬಹುದು. ವಿಶೇಷ ಎಂದರೆ, ಬಳಕೆದಾರರ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಬ್ಲೂ ಟಿಕ್ ಇದ್ದರೆ ಅದು ಥ್ರೆಡ್ಸ್ನಲ್ಲಿ ಕಾಣಿಸಲಿದೆ. ಈ ಆ್ಯಪ್ ಥೇಟ್ ಟ್ವಿಟ್ಟರ್ ರೀತಿಯ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಉದಾಹರಣೆಗೆ, ಬಳಕೆದಾರರು ಟ್ವಿಟ್ಟರ್ನಂತೆ ಥ್ರೆಡ್ಸ್ನಲ್ಲಿ ಸರಣಿ ಪೋಸ್ಟ್ಗಳನ್ನು ಪ್ರಕಟಿಸಬಹುದು. ಇನ್ಸ್ಟಾಗ್ರಾಮ್ ಗ್ರಾಹಕರನ್ನು ಆಕರ್ಷಿಸಲು, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪೋಸ್ಟ್ ಕೂಡ ಇದರಲ್ಲಿ ಶೇರ್ ಆಗಲಿದೆ.
Amazon Prime Day: ಹೊಸ ಫೋನ್ ಬಿಡುಗಡೆ ಮತ್ತು ವಿಶೇಷ ಆಫರ್ ನೀಡುವ ಪ್ರೈಮ್ ಡೇ ಸೇಲ್
ಥ್ರೆಡ್ಸ್ ಆ್ಯಪ್ ಟ್ವಿಟರ್‌ನ ಹಳೆಯ ಆವೃತ್ತಿಯನ್ನು ಹೋಲುವಂತಿದೆ. ಪ್ರತಿ ಪೋಸ್ಟ್ 500 ಅಕ್ಷರಗಳವರೆಗೆ ಬರೆಯಬಹುದು. ಲಿಂಕ್‌ಗಳು, ಫೋಟೋಗಳು (ಪ್ರತಿ ಪೋಸ್ಟ್‌ಗೆ ಹತ್ತು ಅಕ್ಷರ), ಮತ್ತು 5 ನಿಮಿಷಗಳ ಉದ್ದದ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ. ನಿಮ್ಮ ಥ್ರೆಡ್ಸ್ ಪೋಸ್ಟ್‌ಗೆ ಯಾರು ಪ್ರತ್ಯುತ್ತರ ನೀಡಬಹುದು ಎಂಬುದನ್ನು ಸಹ ಬಳಕೆದಾರರು ನಿಯಂತ್ರಿಸಬಹುದು. ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ನೀವು ಥ್ರೆಡ್ಸ್ ಪ್ರೊಫೈಲ್ನಲ್ಲಿ ಸೆಟ್ಟಿಂಗ್ಸ್ ಬದಲಾಯಿಸಬಹುದಾಗಿದೆ.
ಆದರೆ, ಬಳಕೆದಾರರಿಗೆ ಜಿಫ್ ಫೈಲ್ಗಳನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿಲ್ಲ. ಹಾಗೆಯೆ “ಕ್ಲೋಸ್ ಫ್ರೆಂಡ್ಸ್” ವೈಶಿಷ್ಟ್ಯವಿಲ್ಲ. ಬಹು ಮುಖ್ಯವಾಗಿ, ಥ್ರೆಡ್ಸ್ನಲ್ಲಿ DM ಆಯ್ಕೆ ನೀಡಲಾಗಿಲ್ಲ. ಈ ಫೀಚರ್ಗಳೆಲ್ಲ ಮುಂದಿನ ಅಪ್ಡೇಟ್ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ