ವಾಟ್ಸ್ಆ್ಯಪ್ನಲ್ಲಿ ಬರಲಿದೆ ಹೊಸ ವಾಯ್ಸ್ ಚಾಟ್ ಫೀಚರ್; ಇಲ್ಲಿದೆ ವಿವರ
ವಾಟ್ಸ್ಆ್ಯಪ್ನ ಹೊಸ ವಾಯ್ಸ್ ಚಾಟ್ ಆಯ್ಕೆಯನ್ನು ಮೆಟಾ ಜಾಗತಿಕವಾಗಿ ಪರಿಚಯಿಸುತ್ತಿದೆ. ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಡಿವೈಸ್ಗಳಲ್ಲಿ ಈ ಆಯ್ಕೆ ಲಭ್ಯವಾಗಲಿದೆ. ಸದ್ಯ ಹೊಸ ಫೀಚರ್ ಅಳವಡಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಬಳಕೆದಾರರಿಗೆ ದೊರೆಯಲಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
ಹೊಸ ಹೊಸ ಫೀಚರ್ಗಳನ್ನು ನೀಡುತ್ತಾ ಬಳಕೆದಾರರ ಆಕರ್ಷಣೆ ಉಳಿಸಿಕೊಂಡಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ (WhatsApp) ಇದೀಗ ಹೊಸದೊಂದು ಆಯ್ಕೆಯೊಂದಿಗೆ ನಿಮ್ಮ ಮುಂದೆ ಬರಲಿದೆ. ದೊಡ್ಡ ಗ್ರೂಪ್ಗಳಿಗೆಂದೇ ಹೊಸ ವಾಯ್ಸ್ ಚಾಟ್ ಫೀಚರ್ (voice-chat feature) ಅನ್ನು ಪರಿಚಯಿಸಲಾಗುತ್ತಿದೆ ಎಂದು ಮಂಗಳವಾರ ವಾಟ್ಸ್ಆ್ಯಪ್ ಘೋಷಣೆ ಮಾಡಿದೆ.
ಗ್ರೂಪ್ ಕಾಲ್ನಂತೆಯೇ ಇರಲಿದೆ ಆದರೆ…
ವಾಟ್ಸ್ಆ್ಯಪ್ ಹೊಸ ವಾಯ್ಸ್ ಚಾಟ್ ಫೀಚರ್ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೂಪ್ ಕಾಲ್ಗೆ ಸರಿಸಮನಾಗಿ ಇರಲಿದೆ. ಆದರೆ, ಗ್ರೂಪ್ನ ಪ್ರತಿಯೊಬ್ಬ ಮೆಂಬರ್ನ ಮೊಬೈಲ್ನಲ್ಲಿಯೂ ರಿಂಗ್ ಆಗುವುದಿಲ್ಲ. ಇನ್ ಚಾಟ್ ಪಾಪ್ಅಪ್ ನೊಟಿಫಿಕೇಷನ್ ಬರಲಿದ್ದು, ಸದ್ದಿಲ್ಲದೇ ವಾಯ್ಸ್ ಚಾಟ್ನಲ್ಲಿ ಸೇರಿಕೊಳ್ಳಬಹುದು.
ವಾಯ್ಸ್ ಚಾಟ್ ಶುರು ಮಾಡುವುದು ಹೇಗೆ?
ಹೊಸ ವಾಯ್ಸ್ ಚಾಟ್ ಫೀಚರ್ ಆರಂಭಿಸಲು ಬಳಕೆದಾರರು ಮೊದಲಿಗೆ ಗ್ರೂಪ್ ಚಾಟ್ ಅನ್ನು ತೆರೆಯಬೇಕು. ನಂತರ ಸ್ಕ್ರೀನ್ನ ಮೇಲ್ಭಾಗದ ಬಲಬದಿಯಲ್ಲಿರುವ ನೀಲಿ ಬಣ್ಣದ ವಾಯ್ಸ್ ಚಾಟ್ ಐಕಾನ್ ಅನ್ನು tap ಮಾಡಬೇಕು. ನಂತರ ಸಂಭಾಷಣೆ ಆರಂಭಿಸಲು ‘Start Voice Chat’ ಆಯ್ಕೆಯನ್ನು tap ಮಾಡಬೇಕು. ಸಂಭಾಷಣೆ ಆರಂಭವಾದ ಬಳಿಕ ಗ್ರೂಪ್ನ ಸದಸ್ಯರು ಪುಷ್ ನೊಟಿಫಿಕೇಷನ್ ಪಡೆಯುತ್ತಾರೆ.
ಬಳಕೆದಾರರು ತಮಗೆ ಬೇಕೆನಿಸಿದಾಗ ಇತರರಿಗೆ ಅಡ್ಡಿಯಾಗದಂತೆ ಸದ್ದಿಲ್ಲದೇ ವಾಯ್ಸ್ ಚಾಟ್ಗೆ ಸೇರಿಕೊಳ್ಳಬಹುದು ಮತ್ತು ನಿರ್ಗಮಿಸಬಹುದಾಗಿದೆ. ಚಾಟ್ ಸ್ಕ್ರೀನ್ನ ಮೇಲ್ಭಾಗದಲ್ಲಿ (ಚಾಟ್ ಆ್ಯಕ್ಟೀವ್ ಆಗಿದ್ದಾಗ) ಚಾಟ್ ಕಂಟ್ರೋಲ್ ಆಯ್ಕೆ ಲಭ್ಯವಿರಲಿದೆ. ಚಾಟ್ನಲ್ಲಿ ಭಾಗಿಯಾಗಿರುವವರು ಮತ್ತು ಕೇಳುತ್ತಿರುವವರಿಗೆ ಟೆಕ್ಷ್ಟ್ ಮೆಸೇಜ್ ಮಾಡಲು ಅವಕಾಶವಿರುತ್ತದೆ. ಚಾಟ್ನಲ್ಲಿ ಭಾಗವಹಿಸಿರುವವರು ಸ್ಕ್ರೀನ್ನ ಕೆಳಭಾಗದಲ್ಲಿ ಗೋಚರಿಸುವ ಬ್ಯಾನರ್ ಮೂಲಕ ಚಾಟ್ನಲ್ಲಿರುವವರ ಪ್ರೊಫೈಲ್‌ಗಳನ್ನು ನೋಡಬಹುದಾಗಿದೆ.
ಇದೇ ಮೊದಲಲ್ಲ
ವಾಟ್ಸ್ಆ್ಯಪ್ ಪರಿಚಯಿಸುತ್ತಿರುವ ಹೊಸ ವಾಯ್ಸ್ ಚಾಟ್ ಫೀಚರ್ ಈಗಾಗಲೇ ಇತರ ಸಾಮಾಜಿಕ ಮಾಧ್ಯಮ ಆ್ಯಪ್ಗಳಲ್ಲಿ ಲಭ್ಯವಿದೆ. ಟೆಲಿಗ್ರಾಂ, ಡಿಸ್ಕಾರ್ಡ್, ಸ್ಲ್ಯಾಕ್ ಆ್ಯಪ್ಗಳಲ್ಲಿ ಈಗ ವಾಟ್ಸ್ಆ್ಯಪ್ ಪರಿಚಯಿಸುತ್ತಿರುವ ಮಾದರಿಯ ವಾಯ್ಸ್ ಚಾಟ್ ಆಯ್ಕೆ ಈಗಾಗಲೇ ಲಭ್ಯವಿದೆ.
Tech Tips: ನೀವು ಹಳೆಯ ಸ್ಮಾರ್ಟ್ಫೋನ್ ಸೇಲ್ ಮಾಡುತ್ತೀರಿ ಎಂದಾದರೆ ಈ ವಿಚಾರ ತಿಳಿದಿರಲಿ
ವಾಟ್ಸ್ಆ್ಯಪ್ನ ಹೊಸ ವಾಯ್ಸ್ ಚಾಟ್ ಆಯ್ಕೆಯನ್ನು ಮೆಟಾ ಜಾಗತಿಕವಾಗಿ ಪರಿಚಯಿಸುತ್ತಿದೆ. ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಡಿವೈಸ್ಗಳಲ್ಲಿ ಈ ಆಯ್ಕೆ ಲಭ್ಯವಾಗಲಿದೆ. ಸದ್ಯ ಹೊಸ ಫೀಚರ್ ಅಳವಡಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಬಳಕೆದಾರರಿಗೆ ದೊರೆಯಲಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ