Micromax IN Note 2: ಬಿಡುಗಡೆ ಆಯಿತು ದೇಶೀಯ ಸ್ಮಾರ್ಟ್​ಫೋನ್: ಬಜೆಟ್ ಪ್ರಿಯರು ಇದನ್ನು ಮಿಸ್ ಮಾಡಲೇಬೇಡಿ

Micromax IN Note 2 Launched: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ದೇಶೀಯ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್​ ಕೊನೆಗೂ ತನ್ನ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಡ್ಯಾಜ್ಲಿಂಗ್ ಗ್ಲಾಸ್ ಫಿನಿಶ್ ಹೊಂದಿರುವ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 ಕಂಡು ಮೊಬೈಲ್ ಪ್ರಿಯರು ಫಿದಾ ಆಗಿದ್ದಾರೆ

Micromax IN Note 2: ಬಿಡುಗಡೆ ಆಯಿತು ದೇಶೀಯ ಸ್ಮಾರ್ಟ್​ಫೋನ್: ಬಜೆಟ್ ಪ್ರಿಯರು ಇದನ್ನು ಮಿಸ್ ಮಾಡಲೇಬೇಡಿ
Micromax IN Note 2
Follow us
TV9 Web
| Updated By: Vinay Bhat

Updated on: Jan 25, 2022 | 1:46 PM

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ದೇಶೀಯ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್​ ಕೊನೆಗೂ ತನ್ನ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡಲು ದೇಸಿ ಬ್ರ್ಯಾಂಡ್ ಇದೀಗ ಸಜ್ಜಾಗಿ ನಿಂತಿದೆ. ಮೈಕ್ರೋಮ್ಯಾಕ್ಸ್‌ ಇನ್ ನೋಟ್ 1 (Micromax IN Note 1) ಸರಣಿಯ ಮುಂದಿನ ಆವೃತ್ತಿಯಾಗಿ ಇದೀಗ ಭಾರತದಲ್ಲಿ ಹೊಸ ಮೈಕ್ರೋಮ್ಯಾಕ್ಸ್ ಇನ್‌ ನೋಟ್‌ 2 (Micromax IN Note 2) ಫೋನ್‌ ಅನಾವರಣಗೊಂಡಿದೆ. ಡ್ಯಾಜ್ಲಿಂಗ್ ಗ್ಲಾಸ್ ಫಿನಿಶ್ ಹೊಂದಿರುವ ಈ ಸ್ಮಾರ್ಟ್​ಫೋನ್ ಕಂಡು ಮೊಬೈಲ್ ಪ್ರಿಯರು ಫಿದಾ ಆಗಿದ್ದಾರೆ. ಬಲಿಷ್ಠ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇದರಲ್ಲಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸ್ಮಾರ್ಟ್‌ಫೋನ್‌ 6.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದ್ದು ಗೋರಿಲ್ಲ ಗ್ಲಾಸ್ ಪ್ರೊಟೆಕ್ಷನ್​ ನೀಡಲಾಗಿದೆ. ಮೀಡಿಯಾ ಟೆಕ್ ಹಿಲಿಯೋ G95 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ಇದು ಕಳೆದೊಂದು ವರ್ಷದಿಂದ ಸೆಕ್ಯುರಿಟಿ ಅಪ್ಡೇಟ್ ಕೇಳುತ್ತಿದ್ದು ಆಂಡ್ರಾಯ್ಡ್ 12 ಪರಿಚಯಿಸುವ ಸಾಧ್ಯತೆ ಕೂಡ ಇದೆ.

ಈ ಸ್ಮಾರ್ಟ್‌ಫೋನ್​ನಲ್ಲಿ ನಾಲ್ಕು ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. 5 ಮೆಗಾಫಿಕ್ಸೆಲ್​ನ ಆಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಬೋಖ್ ಕ್ಯಾಮೆರಾ ಮತ್ತು 2 ಮೆಗಾಫಿಕ್ಸೆಲ್​ ಮ್ಯಾಕ್ರೊ ಕ್ಯಾಮೆರಾ ನೀಡಲಾಗಿದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ವಿಶೇಷವಾಗಿ ನೈಟ್ ಮೋಡ್ ಮತ್ತು ಎಐ ಮೋಡ್ ಆಯ್ಕೆ ನೀಡಲಾಗಿದೆ.

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. 30W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದುಕೊಂಡಿದ್ದು, ಇದು ಕೇವಲ 25 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಈ ಫೋನ್ ಬ್ರೌನ್ ಮತ್ತು ಬ್ಲ್ಯಾಕ್ ಕಲರ್‌ ಆಯ್ಕೆಯಲ್ಲಿ ಬರಲಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ.

ಬೆಲೆ ಎಷ್ಟು?:

ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಸದ್ಯಕ್ಕೆ ಭಾರತದಲ್ಲಿ ಕೇವಲ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯಕ್ಕೆ 12,490 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಇದೇ ಜನವರಿ 30 ರಂದು ಈ ಫೋನ್ ಖರೀದಿಗೆ ಸಿಗಲಿದೆ. ಮೈಕ್ರೋಮ್ಯಾಕ್ಸ್‌ ಇನ್‌ ನೋಟ್‌ 2 ಫೋನಿನ 12,490 ರೂ. ಬೆಲೆ ಸದ್ಯದ ಆಫರ್​ ಆಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿದೆ ಎಂದು ಕಂಪನಿ ಹೇಳಿದೆ.

Oppo Reno 7 series: ರಿಲೀಸ್​ಗೂ ಮುನ್ನವೇ ಕ್ಯಾಮೆರಾದಿಂದ ಧೂಳೆಬ್ಬಿಸುತ್ತಿರುವ ಒಪ್ಪೋ ರೆನೋ 7 ಸರಣಿ