Vivo Y21A: ಕೇವಲ 13,990 ರೂ. ಗೆ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ವಿವೋ

ವಿವೋ ತನ್ನ ಜನಪ್ರಿಯ ‘Y’ ಸರಣಿಯ ಅಡಿಯಲ್ಲಿ ಮತ್ತೊಂದು ಹೊಸ ಬಜೆಟ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ವಿವೋ ತನ್ನ ಹೊಸ ವಿವೋ ವೈ21ಎ (Vivo Y21A) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ

Vivo Y21A: ಕೇವಲ 13,990 ರೂ. ಗೆ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ವಿವೋ
Vivo Y21A
Follow us
TV9 Web
| Updated By: Vinay Bhat

Updated on: Jan 25, 2022 | 3:29 PM

ಪ್ರಸಿದ್ಧ ವಿವೋ (Vivo) ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡುತ್ತಿದೆ. ವರ್ಷದ ಆರಂಭದಲ್ಲಿ ಬಜೆಟ್ ಬೆಲೆಯ ವಿವೋ ವೈ21ಟಿ ಫೋನ್ ಮತ್ತು ವಿವೋ 23 5G ಹಾಗೂ ವಿವೋ ವಿ23 ಪ್ರೊ 5ಜಿ ಫೋನನ್ನು ಅನಾವರಣ ಮಾಡಿತ್ತು. ಇದರ ಬೆನ್ನಲ್ಲೇ ವಿವೋ ವೈ33ಟಿ (Vivo Y33T) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿತ್ತು. ಹೀಗೆ ಈ ತಿಂಗಳು ವಿವೋ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿರುವ ಫೋನ್ ಒಟ್ಟು ನಾಲ್ಕು. ಇದೀಗ ತನ್ನ ಜನಪ್ರಿಯ ‘Y’ ಸರಣಿಯ ಅಡಿಯಲ್ಲಿ ಮತ್ತೊಂದು ಹೊಸ ಬಜೆಟ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ವಿವೋ ತನ್ನ ಹೊಸ ವಿವೋ ವೈ21ಎ (Vivo Y21A) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್‌, ವಾಟರ್‌ಡ್ರಾಪ್-ಶೈಲಿಯ ಡಿಸ್‌ಪ್ಲೇ ನಾಚ್, 5000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್ ಇದರಲ್ಲಿದ್ದು, ಬಜೆಟ್ ಬೆಲೆಯಿಂದ ಕೂಡಿದೆ.

ಭಾರತದಲ್ಲಿ ವಿವೋ Y21A ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆಗೊಂಡಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 13,990 ರೂ. ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ಫೋನ್ ಡೈಮಂಡ್ ಗ್ಲೋ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಇದನ್ನು ನೀವು ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಪಾಲುದಾರ ರಿಟೇಲ್‌ ಸ್ಟೋರ್‌ ಮೂಲಕ ಖರೀದಿಸಬಹುದು.

ವಿವೋ Y21A ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್‌ ಹಿಲಿಯೋ P22 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿದೆ.

ಬಲಿಷ್ಠವಾದ ದೀರ್ಘ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದು 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5.0, FM ರೇಡಿಯೋ ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಕೂಡ ಪಡೆದುಕೊಂಡಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್, ಮ್ಯಾಗ್ನಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಸಾಮರ್ಥ್ಯದಿಂದ ಕೂಡಿದೆ.

WhatsApp: ವಾಟ್ಸ್​ಆ್ಯಪ್ ಮುಂದಿನ ಅಪ್ಡೇಟ್​ನಲ್ಲಿ ಬರಲಿದೆ ವಿಭಿನ್ನ ಫೀಚರ್: ಬಳಕೆದಾರರು ಫಿದಾ ಆಗೋದು ಗ್ಯಾರಂಟಿ

Micromax IN Note 2: ಬಿಡುಗಡೆ ಆಯಿತು ದೇಶೀಯ ಸ್ಮಾರ್ಟ್​ಫೋನ್: ಬಜೆಟ್ ಪ್ರಿಯರು ಇದನ್ನು ಮಿಸ್ ಮಾಡಲೇಬೇಡಿ