WhatsApp: ವಾಟ್ಸ್ಆ್ಯಪ್ ಮುಂದಿನ ಅಪ್ಡೇಟ್ನಲ್ಲಿ ಬರಲಿದೆ ವಿಭಿನ್ನ ಫೀಚರ್: ಬಳಕೆದಾರರು ಫಿದಾ ಆಗೋದು ಗ್ಯಾರಂಟಿ
WhatsApp custom wallpapers: ವಾಟ್ಸ್ಆ್ಯಪ್ ವಾಯಿಸ್ ನೋಟ್ ಆಯ್ಕೆಯಲ್ಲಿ ಬದಲಾವಣೆ ಬರಲಿದೆ ಎಂದು ಹೇಳಿದ ಬೆನ್ನಲ್ಲೇ ಇದೀಗ ಚಾಟ್‌ಗಳಲ್ಲಿ ವೈಯಕ್ತಿಕ ವಾಲ್‌ಪೇಪರ್‌ಗಳನ್ನು ಬದಲಾಯಿಸಲು ಅವಕಾಶ ನೀಡಲಿದೆ.
ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ (WhatsApp) ಮೆಸೇಜಿಂಗ್ ಅಪ್ಲಿಕೇಶನ್ ಮುಂದಿನ ದಿನಗಳಲ್ಲಿ ಸಾಲು ಸಾಲು ಅಪ್ಡೇಟ್ಗಳನ್ನು ನೀಡಲು ಸಜ್ಜಾಗಿದೆ. ಈಗಾಗಲೇ ವಾಟ್ಸ್ಆ್ಯಪ್ನಲ್ಲೇ ಫೋಟೋ ಎಡಿಟಿಂಗ್, ಲಾಗೌಟ್ ಫೀಚರ್, ಸ್ಟೇಟಸ್ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಆಯ್ಕೆ ನೀಡಲು ಮುಂದಾಗಿದೆ. ಮೊನ್ನೆಯಷ್ಟೆ ವಾಯಿಸ್ ನೋಟ್ ಆಯ್ಕೆಯಲ್ಲಿ ಬದಲಾವಣೆ ಬರಲಿದೆ ಎಂದು ಹೇಳಿದ ಬೆನ್ನಲ್ಲೇ ಇದೀಗ ಚಾಟ್‌ಗಳಲ್ಲಿ ವೈಯಕ್ತಿಕ ವಾಲ್‌ಪೇಪರ್‌ಗಳನ್ನು ಬದಲಾಯಿಸಲು ಅವಕಾಶ ನೀಡಲಿದೆ. ಅಂದರೆ ವಾಟ್ಸ್ಆ್ಯಪ್ ವೈಯುಕ್ತಿಕ ಚಾಟ್ ಬ್ಯಾಕ್‌ಗ್ರೌಂಡ್ ವಾಲ್ ಪೇಪರ್‌ನಲ್ಲಿ ಹೊಸ ಫೀಚರ್ಸ್ ಬರಲಿದೆ.
ಈ ಹೊಸ ಫೀಚರ್ ಮೂಲಕ ಪ್ರತಿ ಚಾಟ್ ಮತ್ತು ಗುಂಪಿಗೆ ನಿಮಗಿಷ್ಟವಾದ ಬ್ಯಾಕ್‌ಗ್ರೌಂಡ್ ಸೆಟ್ ಮಾಡಬಹುದು. ಸದ್ಯದಲ್ಲೇ ಈ ಆಯ್ಕೆ ಬಳಕೆದಾರರಿಗೆ ಸಿಗಲಿದೆಯಂತೆ. ಇದಲ್ಲದೆ ವಾಟ್ಸ್ಆ್ಯಪ್ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ.
ಅಲ್ಲದೆ ನೊಟಿಫಿಕೇಶನ್ ಜೊತೆಗೆ ಗ್ರೂಪ್ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ವಾಯ್ಸ್ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ. ವಾಯ್ಸ್ ನೋಟ್ ತೆಗೆದುಕೊಳ್ಳುವಾಗ ಯಾರಾದರೂ ಅಡ್ಡಿಪಡಿಸಿದಾಗ ವಿರಾಮ ತೆಗೆದುಕೊಳ್ಳಬೇಕಾದಾಗ ಈ ಫೀಚರ್ಸ್ ಉಪಯುಕ್ತವಾಗಿರುತ್ತದೆ.
ಇನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಕೆಲವೇ ದಿನಗಳಲ್ಲಿ ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ಚಾಟ್ ವಿಂಡೋ ಅನ್ನು ಕ್ಲೋಸ್ ಮಾಡಿದ (ಚಾಟ್ ವಿಂಡೋದಿಂದ ಹೊರಬಂದ) ನಂತರವು, ವಾಯಿಸ್ ನೋಟ್ ಕೇಳಲು ಅನುಮತಿಸುತ್ತದೆ ಎಂದು ಹೇಳಲಾಗಿದೆ. ವಾಟ್ಸ್ಆ್ಯಪ್ ಫೀಚರ್ಸ್‌ಗಳ ಟ್ರ್ಯಾಕರ್ Wabetanino ಪ್ರಕಾರ, ಬಳಕೆದಾರರು ಬೇರೆ ಚಾಟ್‌ಗೆ ಬದಲಾಯಿಸಿದಾಗ ವಾಯಿಸ್ ನೋಟ್ ಗಳನ್ನು ಕೇಳಲು ಅನುಮತಿಸುವ ಈ ಹೊಸ ಫೀಚರ್ ಅನ್ನು ಮೂರು ತಿಂಗಳ ಹಿಂದೆ ಐಒಎಸ್ ಬೀಟಾದಲ್ಲಿ ಗುರುತಿಸಲಾಗಿದೆ ಎನ್ನಲಾಗಿದೆ.
Micromax IN Note 2: ಬಿಡುಗಡೆ ಆಯಿತು ದೇಶೀಯ ಸ್ಮಾರ್ಟ್ಫೋನ್: ಬಜೆಟ್ ಪ್ರಿಯರು ಇದನ್ನು ಮಿಸ್ ಮಾಡಲೇಬೇಡಿ
Oppo Reno 7 series: ರಿಲೀಸ್ಗೂ ಮುನ್ನವೇ ಕ್ಯಾಮೆರಾದಿಂದ ಧೂಳೆಬ್ಬಿಸುತ್ತಿರುವ ಒಪ್ಪೋ ರೆನೋ 7 ಸರಣಿ