ವರ್ಡ್‌ಪ್ಯಾಡ್ (Word Pad) ನಿಮಗೆ ನೆನಪಿದೆಯೇ? ಸುಲಭವಾಗಿ ಬರೆಯಲು ಮತ್ತು ಅಕ್ಷರವನ್ನು ಎಡಿಟ್ ಮಾಡಲು ಬಳಕೆದಾರರಿಗೆ ಮೈಕ್ರೋಸಾಫ್ಟ್ ಒದಗಿಸಿರುವ ಉಪಯುಕ್ತ ಅಪ್ಲಿಕೇಷನ್. ಆದರೆ, ಇದು ಎಂಎಸ್ ವರ್ಡ್ನಷ್ಟು ಜನಪ್ರಿಯವಾಗಿಲ್ಲ, ಅಷ್ಟೊಂದು ವೈಶಿಷ್ಟ್ಯ-ಆಯ್ಕೆಗಳು ಇದರಲ್ಲಿಲ್ಲ. ಇದೀಗ ಆಘಾತಕಾರಿ ಸುದ್ದಿ ಎಂಬಂತೆ ಉಚಿತವಾಗಿ ಲಭ್ಯವಾಗುತ್ತಿದ್ದ ಈ ಅಪ್ಲಿಕೇಷನ್ ಸದ್ಯದಲ್ಲೇ ತನ್ನ ಕೆಲಸವನ್ನು ನಿಲ್ಲಿಸಲಿದೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ಅಪ್ಡೇಟ್ ಪಡೆಯದ ವರ್ಡ್‌ಪ್ಯಾಡ್ ಅನ್ನು ಮೈಕ್ರೋಸಾಫ್ಟ್ ವಿಂಡೋಸ್‌ನ ಮುಂದಿನ ವರ್ಷನ್ನಲ್ಲಿ ತೆಗೆದುಹಾಕಲು ನಿರ್ಧರಿಸಿದೆ.
ಐಎಎನ್‌ಎಸ್ ವರದಿಯ ಪ್ರಕಾರ, ವರ್ಡ್‌ಪ್ಯಾಡ್ ಯಾವುದೇ ನೂತನ ಅಪ್ಡೇಟ್ ಪಡೆಯದ ಕಾರಣ ಮೈಕ್ರೋಸಾಫ್ಟ್ ಅದನ್ನು ತೆಗೆದುಹಾಕುತ್ತಿದೆ ಎಂದು ಹೇಳಿದೆ. ಸ್ಟ್ಯಾಂಡರ್ಡ್ ಬರಹಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಅನೇಕ ಆಯ್ಕೆಗಳಿರುವ ಎಂಎಸ್ ವರ್ಡ್ ಬಳಸಿ. ಅಥವಾ ಸರಳ ಬರಹಕ್ಕಾಗಿ ನೋಟ್‌ಪ್ಯಾಡ್ ಉಪಯೋಗಿಸಿ. .doc, .rtf ಮತ್ತು .txt ನಂತಹ ಸರಳ ಡಾಕ್ಯುಮೆಂಟ್‌ಗಳಿಗಾಗಿ ವಿಂಡೋಸ್ ನೋಟ್‌ಪ್ಯಾಡ್ ಬಳಸಿ ಎಂದು ಕಂಪನಿಯು ಬಳಕೆದಾರರಲ್ಲಿ ಹೇಳಿದೆ.
ಭಾರತದಲ್ಲಿ 108MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟು?
ಕಂಪನಿಯು ನೋಟ್‌ಪ್ಯಾಡ್‌ನಲ್ಲಿ ನೂತನ ಅಪ್ಡೇಟ್ ಘೋಷಿಸಿದ ನಂತರವೇ ಮೈಕ್ರೋಸಾಫ್ಟ್ ವರ್ಡ್‌ಪ್ಯಾಡ್ ಅನ್ನು ತೆಗೆದುಹಾಕುವ ಯೋಜನೆ ಮಾಡಿದೆ. ವರ್ಡ್ಪ್ಯಾಡ್ನಲ್ಲಿ ಮಾಹಿತಿಯನ್ನು ಟೈಪ್ ಮಾಡುವುದು ಮತ್ತು ಅದರ ಫಾಂಟ್, ಗಾತ್ರ, ಇತ್ಯಾದಿಗಳನ್ನು ಬದಲಾಯಿಸುವುದು ಹೊರತುಪಡಿಸಿ ಹೆಚ್ಚಿನ ಆಯ್ಕೆಯನ್ನು ನೀಡಲಾಗಿಲ್ಲ. ಹೀಗಾಗಿ ಇದನ್ನು ಕೊನೆಗೊಳಿಸಲು ಮುಂದಾಗಿದೆ.
ಮೈಕ್ರೋಸಾಫ್ಟ್ ಸದ್ಯ AI ಜನರೇಟಿವ್ ಮೇಲೆ ಹೆಚ್ಚು ಗಮನಹರಿಸುತ್ತಿದೆ ಮತ್ತು ವಿಂಡೋಸ್ 12 AI-ಚಾಲಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮೈಕ್ರೋಸಾಫ್ಟ್ ಇನ್ನೂ ಏನನ್ನೂ ಘೋಷಿಸದಿದ್ದರೂ, ವಿಂಡೋಸ್ 12 ಅನ್ನು 2024 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಓಪನ್ಎಐ ಮೂಲಕ ಎಐ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಮೈಕ್ರೋಸಾಫ್ಟ್ ಅದೇ ಅಸ್ತ್ರ ಹಿಡಿದು ಭಾರತದ ಭವಿಷ್ಯವನ್ನು ಹಿಡಿಯಲು ಹೊರಟಿದೆ. ಭಾರತದ ಆರೋಗ್ಯ, ಶಿಕ್ಷಣ, ಉದ್ಯಮ ಮತ್ತು ಕೃಷಿ ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನ ಅಳವಡಿಕೆಗೆ ಮೈಕ್ರೋಸಾಫ್ಟ್ ಬಂಡವಾಳ ಹಾಕಲಿದೆಯಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ