ಮೈಕ್ರೋಸಾಫ್ಟ್ನಿಂದ ವಿಂಡೋಸ್ 10ಗೆ ಸಪೋರ್ಟ್ ನೀಡುವುದನ್ನು 2025ಕ್ಕೆ ಕೊನೆ ಮಾಡಲಿದೆ ಎಂದು ಘೋಷಣೆ ಮಾಡಿದೆ. ಕಂಪೆನಿಯಿಂದ ವಿಂಡೋಸ್ 10 ಹೋಮ್, ಪ್ರೊ, ವರ್ಕ್ಸ್ಟೇಷನ್ಸ್ ಪ್ರೊ ಮತ್ತು ಪ್ರೊ ಎಜುಕೇಷನ್ಗೆ ಅಕ್ಟೋಬರ್ 14, 2025ಕ್ಕೆ ಸಪೋರ್ಟ್ ಕೊನೆ ಮಾಡುತ್ತದೆ. ಇದರರ್ಥ ಏನೆಂದರೆ, ಆ ದಿನಾಂಕದ ನಂತರ ಯಾವುದೇ ಅಪ್ಡೇಟ್ಗಳನ್ನು ಮಾಡುವುದಿಲ್ಲ ಮತ್ತು ಭದ್ರತಾ ಸಮಸ್ಯೆಗಳನ್ನು ಸರಿಪಡಿಸುವುದಿಲ್ಲ. ಯಾವಾಗ ಮೈಕ್ರೋಸಾಫ್ಟ್ನಿಂದ ವಿಂಡೋಸ್ 10 ಬಿಡುಗಡೆ ಮಾಡಲಾಗಿತ್ತೋ ಆಗಲೇ ಇದು ವಿಂಡೋಸ್ನ ಕೊನೆಯ ವರ್ಷನ್ ಎಂದು ಹೇಳಲಾಗಿತ್ತು. ಆದರೆ ಈಚೆಗೆ ಕಂಪೆನಿ ಟೀಸರ್ನಲ್ಲಿ ಖಾತ್ರಿ ಪಡಿಸಿರುವ ಪ್ರಕಾರ, ಈ ತಿಂಗಳ ಕೊನೆಗೆ ವಿಂಡೋಸ್ 11 ಬಿಡುಗಡೆ ಮಾಡಲಿದೆ. ವೆಬ್ಸೈಟ್ನಲ್ಲಿ ಈ ಕಾರ್ಯಕ್ರಮ ಲಿಸ್ಟ್ ಆಗಿದೆ. ಜೂನ್ 24ನೇ ತಾರೀಕಿನಂದು ಇದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಂಪೆನಿಯು ‘ಮುಂಬರುವ ವಿಂಡೋಸ್’ ಪ್ರಮುಖಾಂಶಗಳನ್ನು ತಿಳಿಸಲಾಗುವುದು.
ಈ ಕಾರ್ಯಕ್ರಮವು ಐಎಸ್ಟಿ 10.30ಕ್ಕೆ ಶುರುವಾಗುತ್ತದೆ. ಮೈಕ್ರೋಸಾಫ್ಟ್ನಿಂದ ಈ ಸುದ್ದಿಯನ್ನು ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಿಂದ ಖಾತ್ರಿ ಪಡಿಸಿದೆ. ಮೈಕ್ರೋಸಾಫ್ಟ್ ಬಿಲ್ಡ್ 2021 ಕಾರ್ಯಕ್ರಮದಲ್ಲಿ ಸಿಇಒ ಸತ್ಯ ನಾಡೆಲ್ಲ ಮಾತನಾಡಿ, ಮುಂದಿನ ತಲೆಮಾರಿನ ವಿಂಡೋಸ್ ಕಳೆದ ದಶಕದ ಮಹತ್ವದ ಅಪ್ಡೇಟ್ ಆಗಿರುತ್ತದೆ ಎಂದಿದ್ದರು. “ಶೀಘ್ರದಲ್ಲೇ ಕಳೆದ ದಶಕದಲ್ಲಿ ವಿಂಡೋಸ್ನಲ್ಲಿ ಮಹತ್ವದ ಅಪ್ಡೇಟ್ ಆಗಲಿದೆ. ಡೆವಲಪರ್ಗಳು ಮತ್ತು ಕ್ರಿಯೇಟರ್ಸ್ಗಳಿಗೆ ಅದ್ಭುತ ಆರ್ಥಿಕ ಅವಕಾಶ ತೆರೆದುಕೊಳ್ಳುತ್ತದೆ. ಕಳೆದ ಕೆಲವು ತಿಂಗಳಿಂದ ಇದನ್ನು ನಾನೇ ಪರೀಕ್ಷೆ ಮಾಡ್ತಿದೀನಿ. ಮುಂದಿನ ತಲೆಮಾರಿನ ವಿಂಡೋಸ್ ಬಗ್ಗೆ ಬಹಳ ಖುಷಿಯಾಗಿದ್ದೀನಿ,” ಎಂದಿದ್ದಾರೆ.
ವಿಂಡೋಸ್ 11ನಲ್ಲಿ ಬಹಳ ಪ್ರಮುಖವಾದ ಯೂಸರ್ ಇಂಟರ್ಫೇಸ್ (UI) ಬದಲಾವಣೆ ಆಗಿದೆ. ವಿಂಡೋಸ್ 10 ನಿವೃತ್ತಿಯ ಬಗ್ಗೆ ಹೇಳುವುದಾದರೆ, 2025ರ ಆಚೆಗೂ ಬಳಕೆ ಆಗುವ ಸಾಧ್ಯತೆ ಇದೆ. ಏಕೆಂದರೆ ವಿಂಡೋಸ್ 7 ಅಪ್ಗ್ರೇಡ್ಗೆ ಬಹಳ ಸಮಯ ನೀಡಲಾಗಿತ್ತು. ಹೊಸ ಆಪರೇಟಿಂಗ್ ಸಿಸ್ಟಮ್ಗೆ ಮೈಗ್ರೇಟ್ (ಬದಲಾಗುವುದಕ್ಕೆ) ಹೆಚ್ಚುವರಿ ಸಮಯವನ್ನು ಜನರಿಗೆ ನೀಡಲಾಗುವುದು.
ಇದನ್ನೂ ಓದಿ: ಮೈಕ್ರೋಸಾಫ್ಟ್ನಿಂದ ಇಂಟರ್ನೆಟ್ ಎಕ್ಸ್ಪ್ಲೋರರ್ಗೆ ನಿವೃತ್ತಿ; 2022ರ ಜೂನ್ನಿಂದ ಎಡ್ಜ್ ಹವಾ
( Technology giant Microsoft to end Windows 10 by 2025. Here is the details all you need to know about)