ಸಾಂಕೇತಿಕ ಚಿತ್ರ
ವಿಂಡೋಸ್ ಲ್ಯಾಪ್‌ಟಾಪ್ (Windows Laptop) ಬಳಸುವವರಿಗೆ ಎಚ್ಚರಿಕೆಯ ಸಂದೇಶವೊಂದು ಬಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ವಿಂಡೋಸ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ. ಮೈಕ್ರೋಸಾಫ್ಟ್ (Microsoft) ವಿಂಡೋಸ್‌ನ ಕೆಲವು ಆವೃತ್ತಿಗಳಲ್ಲಿ ಭದ್ರತಾ ಲೋಪ ಕಂಡುಬಂದಿರುವ ಬಗ್ಗೆ ವರದಿ ಮಾಡಿದ್ದು, ಮಾಲ್‌ವೇರ್, ವೈರಸ್‌ಗಳಿಂದ ವಿಂಡೋಸ್ ಅನ್ನು ರಕ್ಷಿಸುವ ಸಾಧನವಾಗಿರುವ ವಿಂಡೋಸ್ ಡಿಫೆಂಡರ್ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.
ವಿಂಡೋಸ್ನಲ್ಲಿ ಕಂಡುಬಂದಿರುವ ಭದ್ರತಾ ಲೋಪದ ಶ್ರೇಯಾಂಕ ‘ಹೆಚ್ಚು‘ ಎಂದು ಗುರುತಿಸಲಾಗಿದೆ. ಇದರಿಂದ ಹ್ಯಾಕರ್ಗಳು ಸುಲಭವಾಗಿ ಕಂಪ್ಯೂಟರ್‌ಗೆ ಪ್ರವೇಶವನ್ನು ಪಡೆಯಬಹುದಂತೆ. ಏಜೆನ್ಸಿಯ ಪ್ರಕಾರ, ವಿಂಡೋಸ್ ಡಿಫೆಂಡರ್‌ನ ಕ್ರೆಡೆನ್ಶಿಯಲ್ ಗಾರ್ಡ್ ಘಟಕದಲ್ಲಿ ದೋಷ ಕಾಣಿಸಿಕೊಂಡಿದೆ.
CERT-In ಈ ಬಗ್ಗೆ ಮಾಹಿತಿ ನೀಡಿದ್ದು, “ವಿಂಡೋಸ್ ಡಿಫೆಂಡರ್ ಕ್ರೆಡೆನ್ಶಿಯಲ್ ಗಾರ್ಡ್‌ನಲ್ಲಿ ಈ ದೋಷಗಳು ವರದಿಯಾಗಿವೆ. ಇದರಿಂದ ಸ್ಥಳೀಯ ಹ್ಯಾಕರ್ಗಳಿಗೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಮತ್ತು ಕಂಪ್ಯೂಟರ್ನಲ್ಲಿರುವ ಕೆಲ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ,” ಎಂದು ಹೇಳಿದೆ.
ಯಾವ ವಿಂಡೋಸ್ ಆವೃತ್ತಿಗಳ ಮೇಲೆ ಪರಿಣಾಮ ಬೀರುತ್ತವೆ?:
- Windows 10 Version 1809 for ARM64-based Systems
- Windows 10 Version 1809 for x64-based Systems
- Windows 10 Version 1809 for 32-bit Systems
- Windows Server 2022 (Server Core installation)
- Windows Server 2022
- Windows Server 2019 (Server Core installation)
- Windows Server 2019
- Windows Server 2016 (Server Core installation)
- Windows Server 2016
- Windows Server, version 20H2 (Server Core installation)
- Windows 11 for ARM64-based Systems
- Windows 11 for x64-based Systems
- Windows 10 Version 1607 for x64-based Systems
- Windows 10 Version 1607 for 32-bit Systems
- Windows 10 for x64-based Systems
- Windows 10 for 32-bit Systems
- Windows 10 Version 21H2 for x64-based Systems
- Windows 10 Version 21H2 for ARM64-based Systems
- Windows 10 Version 21H2 for 32-bit Systems
- Windows 10 Version 20H2 for ARM64-based Systems
- Windows 10 Version 20H2 for 32-bit Systems
- Windows 10 Version 20H2 for x64-based Systems
- Windows 10 Version 21H1 for 32-bit Systems
- Windows 10 Version 21H1 for ARM64-based Systems
- Windows 10 Version 21H1 for x64-based Systems