WhatsApp: ರೈಲ್ವೆ ಪ್ರಯಾಣಿಕೆರಿಗೆ ವಾಟ್ಸ್​ಆ್ಯಪ್​ನಿಂದ ಬಂಪರ್ ಫೀಚರ್: ಏನದು ನೋಡಿ

IRCTC: ಇದೀಗ ರೈಲ್ವೆ (Railway) ಪ್ರಯಾಣಿಕರಿಗಾಗಿ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್​ಆ್ಯಪ್ ನೀಡಿದೆ. ರೈಲ್ವೆ ಪ್ರಯಾಣಿಕರು ಇದೀಗ ವಾಟ್ಸ್​ಆ್ಯಪ್ ಮೂಲಕ ಫುಡ್ ಆರ್ಡರ್ (Food Order) ಮಾಡಬಹುದು.

WhatsApp: ರೈಲ್ವೆ ಪ್ರಯಾಣಿಕೆರಿಗೆ ವಾಟ್ಸ್​ಆ್ಯಪ್​ನಿಂದ ಬಂಪರ್ ಫೀಚರ್: ಏನದು ನೋಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Vinay Bhat

Updated on: Aug 25, 2022 | 2:40 PM

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಅಗತ್ಯ ಫೀಚರ್​ಗಳನ್ನು ಪರಿಚಯಿಸಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಕೇವಲ ಮೆಸೇಜ್, ಫೋಟೋ, ಸ್ಟೇಟಸ್​ನಲ್ಲಿ ಹೊಸ ಹೊಸ ಅಪ್ಡೇಟ್ ನೀಡುವುದು ಮಾತ್ರವಲ್ಲದೆ ಇತರೆ ವಲಯಗಳಿಂದಲೂ ಜನರಿಗೆ ಸಹಕಾರಿಯಾಗುತ್ತಿದೆ. ಇದೀಗ ರೈಲ್ವೆ (Railway) ಪ್ರಯಾಣಿಕರಿಗಾಗಿ ಉಪಯುಕ್ತವಾದ ಆಯ್ಕೆಯೊಂದನ್ನು ವಾಟ್ಸ್​ಆ್ಯಪ್ ನೀಡಿದೆ. ರೈಲ್ವೆ ಪ್ರಯಾಣಿಕರು ಇದೀಗ ವಾಟ್ಸ್​ಆ್ಯಪ್ ಮೂಲಕ ಫುಡ್ ಆರ್ಡರ್ (Food Order) ಮಾಡಬಹುದು. ಮಾತ್ರವಲ್ಲದೆ ಆರ್ಡರ್ ಅನ್ನು ಲೈವ್ ಟ್ರ್ಯಾಕಿಂಗ್ ಆಡುವ ಅವಕಾಶದ ಜೊತೆ ತಮ್ಮ ಡೆಲಿವರಿಯನ್ನು ನೇರವಾಗಿ ಸೀಟುಗಳಿಗೆ ಪಡೆಯುವ ಆಯ್ಕೆ ನೀಡಲಾಗಿದೆ.

ಜಿಯೋ ಹ್ಯಾಪ್​ಟಿಕ್, ವಾಟ್ಸ್​ಆ್ಯಪ್ ಚಾಟ್​ಬಾಟ್ ಪ್ರೊವೈಡರ್ ಮತ್ತು ಝೂಪ್ ಐರ್​ಸಿಟಿಸಿ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಮೂಲಕ ನೀವು ರೈಲಿನಲ್ಲಿ ಪ್ರಯಾಣ ಮಾಡುವಾಗ ಆಹಾರವನ್ನು ಆರ್ಡರ್ ಮಾಡಿ ನೀವು ಕೂತಿದ್ದ ಜಾಗಕ್ಕೆ ತಂದುಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ರೈಲು ನಿಲ್ದಾಣಗಳ ಆಯ್ದ ರೆಸ್ಟೋರೆಂಟ್‌ಗಳಲ್ಲಿ ಪ್ರಯಾಣಿಕರು ತಮ್ಮ PNR ಸಂಖ್ಯೆಯನ್ನು ನಮೋದಿಸಿ ಆಹಾರವನ್ನು ಆರ್ಡರ್ ಮಾಡಬಹುದು.

ವಾಟ್ಸ್​ಆ್ಯಪ್ ಚಾಟ್‌ಬಾಟ್ ಪ್ಲಾಟ್‌ಫಾರ್ಮ್ ಪ್ರಯಾಣಿಕರಿಗೆ ನೆಟ್‌ವರ್ಕ್ ಸಂಪರ್ಕದ ಸಮಸ್ಯೆಗಳನ್ನು ನಿವಾರಿಸಲು ಮತ್ತು ರೈಲು ಪ್ರಯಾಣದ ಸಂದರ್ಭ ಉತ್ತಮ ಗುಣಮಟ್ಟದ ಆಹಾರ ಕಲ್ಪಿಸಲು ಸಹಾಯ ಮಾಡುತ್ತದೆ. ನೀವು +91 7042062070 ನಂಬರ್ ನೊಂದಿಗೆ ವಾಟ್ಸ್​ಆ್ಯಪ್​ನಲ್ಲಿ ಜೂಪ್​ನೊಂದಿಗೆ ಚಾಟ್ ಮಾಡಬಹುದು. ಆಹಾರ ಮಾರ್ಡರ್ ಮಾಡುವ ಕ್ರಮ ಇಲ್ಲಿದೆ.

ಇದನ್ನೂ ಓದಿ
Image
Flipkart Electronics Sale: ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ ಸೇಲ್: ಈ ಪ್ರೊಡಕ್ಟ್​ಗಳಿಗೆ ಇಷ್ಟೊಂದು ಡಿಸ್ಕೌಂಟ್ ಇನ್ಮುಂದೆ ಸಿಗಲ್ಲ
Image
Windows: ವಿಂಡೋಸ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ ಸಂದೇಶ
Image
Redmi Note 11SE: ಒಂದೇ ದಿನ ಬಾಕಿ: ನಾಳೆ ಭಾರತಕ್ಕೆ ಅಪ್ಪಳಿಸಲಿದೆ ರೆಡ್ಮಿಯ ಬಹುನಿರೀಕ್ಷಿತ ಸ್ಮಾರ್ಟ್​ಫೋನ್
Image
Apple iPhone 14: ಶೀಘ್ರದಲ್ಲಿ ಬರಲಿದೆ Apple iPhone 14, ಭಾರತದ BIS ವೆಬ್‌ಸೈಟ್‌ನಲ್ಲಿ ಹೇಳಿದ್ದೇನು ಗೊತ್ತಾ?
  • ಫೋನ್‌ನಲ್ಲಿ ವಾಟ್ಸ್​ಆ್ಯಪ್​ ತೆರೆಯಿರಿ ಮತ್ತು ಹಾಯ್ಸಂದೇಶವನ್ನು +91 7042062070 ಗೆ ಕಳುಹಿಸಿ Zoop ನೊಂದಿಗೆ ಚಾಟ್ ಮಾಡಿ.
  • ನಂತರ ನೀವು ಆರ್ಡರ್ ಫುಡ್, ಚೆಕ್ PNR ಸ್ಟೇಟಸ್, ಟ್ರ್ಯಾಕ್ ಆರ್ಡರ್ ಮುಂತಾದ ಹಲವಾರು ಆಯ್ಕೆಗಳು Zoop ನಿಂದ ಬರುತ್ತದೆ.
  • ಈಗ ನೀವು ಆಹಾರವನ್ನು ಆರ್ಡರ್ ಮಾಡಲು ಬಯಸಿದರೆ, ಅಲ್ಲಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ 10-ಅಂಕಿಯ PNR ಸಂಖ್ಯೆಯನ್ನು ನಮೋದಿಸಬೇಕಾಗುತ್ತದೆ. ಜೊತೆಗೆ ನಿಮ್ಮ PNR ಮತ್ತು ಇತರ ವಿವರಗಳನ್ನು ಖಚಿತಪಡಿಸಲು ನಿಮ್ಮನ್ನು ಕೇಳಲಾಗುತ್ತದೆ.
  • ನೀವು ಎಲ್ಲಾ ವಿವರಗಳನ್ನು ನಿಖರವಾಗಿ ಖಚಿತಪಡಿಸಿದರೆ, ಆರ್ಡರ್ ಅನ್ನು ಎಲ್ಲಿ ರಿಸಿವ್ ಮಾಡಲು ಬಯಸುತ್ತೀರಿ ಎಂಬ ಆಯ್ಕೆ ಕೇಳಲಾಗುತ್ತದೆ.
  • ನಿಲ್ದಾಣವನ್ನು ಆಯ್ಕೆ ಮಾಡಿದ ನಂತರ ನೀವು ನಿಮ್ಮ ಆಹಾರವನ್ನು ಯಾವ ರೆಸ್ಟೋರೆಂಟ್​ನಿಂದ ಆಯ್ಕೆ ಮಾಡುತ್ತೀರಿ ಎಂದು ಆರಿಸಬೇಕಾಗುತ್ತದೆ. ಈಗ ನಿಮಗೆ ಬೇಕಾದ ಆಹಾರವನ್ನು ಸೆಲೆಕ್ಟ್ ಮಾಡಿ.
  • ಆರ್ಡರ್ ಮಾಡಿದ ನಂತರ, ನಿಮ್ಮ ಆದೇಶದ ವಿವರವನ್ನು ನೀವು ಪಡೆಯುತ್ತೀರಿ. ಜೊತೆಗೆ ಬಿಲ್​ಗೆ ಸಂಬಂಧಿಸಿದ ಕೆಲ ವಿಧಾನಗಳಿರುತ್ತವೆ. ಅಂತಿಮವಾಗಿ ನಿಮ್ಮ ಸಂಖ್ಯೆಯನ್ನು ಖಚಿತಪಡಿಸಿ ಫುಡ್ ಆರ್ಡರ್ ಆಗುತ್ತದೆ.

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM