Mobile Phone Radiation: ಎಚ್ಚರ, ಈ ಸ್ಮಾರ್ಟ್​ಫೋನ್​ಗಳು ಅತಿಹೆಚ್ಚು ರೇಡಿಯೇಷನ್​ ಹೊರ ಸೂಸುತ್ತವೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 07, 2021 | 5:19 PM

Xiaomi MI A1 ಮೊಬೈಲ್​ ಅತಿಹೆಚ್ಚು ವಿಕಿರಣ ಸೂಸುವ ಮೊಬೈಲ್​ ಆಗಿದೆ. ಇದರ ಎಸ್​ಎಆರ್ ಪ್ರಮಾಣ 1.75 W/KG (ವ್ಯಾಟ್​ ಪ್ರತಿ ಕೆಜಿ) ಇದೆ.

Mobile Phone Radiation: ಎಚ್ಚರ, ಈ ಸ್ಮಾರ್ಟ್​ಫೋನ್​ಗಳು ಅತಿಹೆಚ್ಚು ರೇಡಿಯೇಷನ್​ ಹೊರ ಸೂಸುತ್ತವೆ
ಸಾಂದರ್ಭಿಕ ಚಿತ್ರ
Follow us on

ನಾವು ಬಳಕೆ ಮಾಡುವ ಮೊಬೈಲ್​ಗಳು ರೇಡಿಯೇಷನ್​ ಹೊರ ಸೂಸುತ್ತವೆ. ಇದು ನಮಗೆ ಗೊತ್ತಿಲ್ಲದೆ ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತಲೇ ಇರುತ್ತದೆ. ಕೆಲವು ಮೊಬೈಲ್​ಗಳು ಅತಿ ಹೆಚ್ಚು ವಿಕಿರಣ ಹೊರ ಸೂಸಿದರೆ, ಇನ್ನೂ ಕೆಲವು ಕಡಿಮೆ ವಿಕಿರಣ ಸೂಸುವಂಥವು. ಹಾಗಾದರೆ, 2021ರ ಅತಿ ಹೆಚ್ಚು ರೇಡಿಯೇಷನ್​ ಹೊರ ಹಾಕುವ ಮೊಬೈಲ್​ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಮೊಬೈಲ್​ ವಿಕಿರಣಗಳ ಕುರಿತು ಜರ್ಮನ್ ಫೆಡರಲ್ ಆಫೀಸ್ ಅಧ್ಯಯನ ನಡೆಸಿ ವರದಿ ಒಂದನ್ನು ಸಿದ್ಧಪಡಿಸಿದೆ. ಮೊಬೈಲ್​ ಹೊರ ಸೂಸುವ ವಿಕಿರಣಗಳನ್ನು ಅಳೆಯಲು Specific absorption rate (SAR) ಬಳಕೆ ಮಾಡಲಾಗುತ್ತದೆ. ಅಂದರೆ, ಮನುಷ್ಯನ ದೇಹ ಮೊಬೈಲ್​ ಸಂಪರ್ಕಕ್ಕೆ ಬಂದಾಗ ಪ್ರತಿ ಯುನಿಟ್​ಗೆ ಎಷ್ಟು ರೆಡಿಯೋ ವಿಕಿರಣ ಹೀರಿಕೊಳ್ಳುತ್ತದೆ ಎನ್ನುವುದನ್ನು ಎಸ್​​ಎಆರ್ ಹೇಳುತ್ತದೆ. ಎಸ್​ಎಆರ್​ ಪ್ರಮಾಣ ಹೆಚ್ಚು ಇದ್ದರೆ ಮಾನವನ ದೇಹಕ್ಕೆ ಅಪಾಯ.

Xiaomi MI A1 ಮೊಬೈಲ್​ ಅತಿಹೆಚ್ಚು ವಿಕಿರಣ ಸೂಸುವ ಮೊಬೈಲ್​ ಆಗಿದೆ. ಇದರ ಎಸ್​ಎಆರ್ ಪ್ರಮಾಣ 1.75 W/KG (ವ್ಯಾಟ್​ ಪ್ರತಿ ಕೆಜಿ) ಇದೆ. OnePlus 5T ಮೊಬೈಲ್​ ಎಸ್​​ಎಆರ್​ ಪ್ರಮಾಣ 1.68 W/KG ಇದೆ. Xiaomi MI Max 3 ಎಸ್​ಎಆರ್ ಪ್ರಮಾಣ 1.58 W/KG ಆಗಿದೆ. ಉಳಿದಂತೆ OnePlus 6T (1.55 W/KG ), HTC U12 Life (1.48 W/KG ) Xiami Mi Mix 3 (1.45 W/KG ), Xiaomi MI MIX 3 (1.45 W/KG ), Goggle Pixel 3 XL (1.39 W/KG ) ಎಸ್​ಎಆರ್​ ಹೊಂದಿದೆ. ಇನ್ನು ಅತಿ ಹೆಚ್ಚು ವಿಕಿರಣ ಹೊರಸೂಸುವ ಸಾಲಿನಲ್ಲಿ IPhone 7, OnuPlus 5, Google Pixel 3, Redmi Note 5 ಮೊಬೈಲ್​ ಕೂಡ ಇದೆ.

ಇನ್ನು ಅತಿ ಕಡಿಮೆ ವಿಕಿರಣ ಸೂಸುವ ಮೊಬೈಲ್​ ಕೂಡ ಇದೆ. Samsung Galaxy Note 8 ಅತಿ ಕಡಿಮೆ ಅಂದರೆ ಕೇವಲ 0.17 W/KG ಎಸ್​ಎಆರ್ ರೇಟ್​ ಹೊಂದಿದೆ. ಸ್ಯಾಮ್​ಸಂಗ್ ಕಂಪೆನಿಯ ಸಾಕಷ್ಟು ಮೊಬೈಲ್​ಗಳು ಕಡಿಮೆ ವಿಕಿರಣ ಸೂಸುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: World Cancer Day 2021 ಕ್ಯಾನ್ಸರ್​ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !