Moto G Pure: ಒಂದೇ ದಿನ ಬಜೆಟ್ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಮೋಟೋ

| Updated By: Vinay Bhat

Updated on: Oct 08, 2021 | 2:44 PM

Moto E40: ಮೋಟೋ E40 ಫೋನ್‌ ಯುರೋಪ್‌ನಲ್ಲಿ ಅನಾವರಣಗೊಳಿಸಿದೆ, ಮೋಟೋ ಜಿ ಪ್ಯೂರ್ ಯುಎಸ್‌ನಲ್ಲಿ ಪರಿಚಯಿಸಿದೆ. ಸದ್ಯದಲ್ಲೇ ಈ ಎರಡೂ ಸ್ಮಾರ್ಟ್​ಫೋನ್ ಭಾರತಕ್ಕೆ ಲಗ್ಗೆಯಿಡಲಿದೆ.

Moto G Pure: ಒಂದೇ ದಿನ ಬಜೆಟ್ ಬೆಲೆಗೆ ಎರಡು ಆಕರ್ಷಕ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಮೋಟೋ
Moto G Pure, Moto E40
Follow us on

ಈ ವರ್ಷ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಇದೀಗ ತನ್ನ ಬಹು ನಿರೀಕ್ಷಿತ ಮೋಟೋ ಇ40 (Moto E40) ಮತ್ತು ಮೋಟೋ ಜಿ ಪ್ಯೂರ್ (Moto G Pure) ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಎರಡೂ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್ ಆಗಿದ್ದು, ಮೋಟೋ E40 ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಮೋಟೋ G ಪ್ಯೂರ್ ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕಪ್​ನಿಂದ ಕೂಡಿದೆ.

ಮೋಟೋ E40 ಫೋನ್‌ ಯುರೋಪ್‌ನಲ್ಲಿ ಅನಾವರಣಗೊಳಿಸಿದೆ, ಮೋಟೋ ಜಿ ಪ್ಯೂರ್ ಯುಎಸ್‌ನಲ್ಲಿ ಪರಿಚಯಿಸಿದೆ. ಸದ್ಯದಲ್ಲೇ ಈ ಎರಡೂ ಸ್ಮಾರ್ಟ್​ಫೋನ್ ಭಾರತಕ್ಕೆ ಲಗ್ಗೆಯಿಡಲಿದೆ. ಮೋಟೋ E40 ಬೆಲೆ ಯುರೋ 149, ಅಂದರೆ ಭಾರತದಲ್ಲಿ ಅಂದಾಜು 12,900 ರೂ. ಎನ್ನಬಹುದು. ಇದನ್ನು ಚಾರ್ಕೋಲ್ ಗ್ರೇ ಮತ್ತು ಕ್ಲೇ ಪಿಂಕ್ ಕಲರ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಮೋಟೋ ಜಿ ಪ್ಯೂರ್‌ ಸ್ಮಾರ್ಟ್‌ಫೋನ್‌ ಬೆಲೆ $ 159.99 ಭಾರತದಲ್ಲಿ ಅಂದಾಜು 12,00 0ರೂ. ಈ ಪೈಕಿ ಮೋಟೋ E40 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಇದೇ ಅಕ್ಟೋಬರ್ 12 ರಂದು ಬಿಡುಗಡೆಗೊಳ್ಳಲಿದೆ.

ಮೋಟೋ E40 ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೊಕ್ ಟಿ 700 ಆಕ್ಟಾ-ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸರ್​ನಿಂದ ಕೂಡಿದೆ. ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿದ್ದು, ನೈಟ್‌ ಫೋಟೋಗ್ರಫೀಗೆ ಅನುಕೂಲವಾಗಲಿದೆ. ಜೊತೆಗೆ ಈ ಫೋನ್‌‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 40 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ.

ಇತ್ತ ಮೋಟೋ G ಪ್ಯೂರ್ ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G25 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. ಜೊತೆಗೆ 4,000mAh ಬ್ಯಾಟರಿ ಸಾಮರ್ಥ್ಯ ನೀಡಲಾಗಿದೆ.

Amitabh Bachchan Voice: ಅಮಿತಾಬ್‌ ಬಚ್ಚನ್‌ ಧ್ವನಿಯನ್ನು ಅಮೆಜಾನ್ ಎಕೋ ಮತ್ತು ಆ್ಯಪ್​ಗೆ ಅಳವಡಿಸುವುದು ಹೇಗೆ?

Realme GT Neo 2: ಚೀನಾದಲ್ಲಿ ಧೂಳೆಬ್ಬಿಸಿದ ರಿಯಲ್ ಮಿ ಜಿಟಿ ನಿಯೋ 2 ​ಫೋನ್ ಅ. 13ಕ್ಕೆ ಭಾರತದಲ್ಲಿ ಬಿಡುಗಡೆ: ಬೆಲೆ?

(Moto E40 and Moto G Pure smartphones have gone official)