Moto G42: ಭಾರತದಲ್ಲಿ ಮೋಟೋ G42 ಬಿಡುಗಡೆ: ರೆಡ್ಮಿ, ಪೋಕೋ ಫೋನ್​ಗೆ ಶುರುವಾಯ್ತು ನಡುಕ

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿರುವ ಬಿಡುಗಡೆ ಆಗಿರುವ ರೆಡ್ಮಿ ನೋಟ್ 11, ರೆಡ್ಮಿ 9i (Redmi 9i), ಪೋಕೋ M4 Pro ಸ್ಮಾರ್ಟ್​​ಫೋನ್​ಗಳಿಗೆ ಮೋಟೋ G42 ಕಠಿಣ ಪೈಪೋಟಿ ನೀಡಲಿದೆ.

Moto G42: ಭಾರತದಲ್ಲಿ ಮೋಟೋ G42 ಬಿಡುಗಡೆ: ರೆಡ್ಮಿ, ಪೋಕೋ ಫೋನ್​ಗೆ ಶುರುವಾಯ್ತು ನಡುಕ
Moto G42
Edited By:

Updated on: Jul 04, 2022 | 1:46 PM

ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ತನ್ನದೆ ಆದ ವಿಶೇಷ ಸ್ಥಾನ ಸಂಪಾದಿಸಿರುವ ಮೋಟೋರೊಲ (Motorola) ಕಂಪನಿ ಇದೀಗ ಭಾರತದಲ್ಲಿ ಬಜೆಟ್ ಬೆಲೆಗೆ ಆಕರ್ಷಕ ಫೋನೊಂದನ್ನು ಬಿಡುಗಡೆ ಮಾಡಿದೆ. ಅದುವೇ ಮೋಟೋ ಜಿ42 (Moto G42). ಇದು ಮೋಟೋ G41 ಸ್ಮಾರ್ಟ್​​ಫೋನ್​ನ ಮುಂದಿನ ಆವೃತ್ತಿಯಾಗಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿರುವ ಬಿಡುಗಡೆ ಆಗಿರುವ ರೆಡ್ಮಿ ನೋಟ್ 11, ರೆಡ್ಮಿ 9i (Redmi 9i), ಪೋಕೋ M4 Pro ಸ್ಮಾರ್ಟ್​​ಫೋನ್​ಗಳಿಗೆ ಮೋಟೋ G42 ಕಠಿಣ ಪೈಪೋಟಿ ನೀಡಲಿದೆ. ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, 50 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಜೊತೆಗೆ 5000mAh ಬ್ಯಾಟರಿಯನ್ನ ಕೂಡ ಅಳವಡಿಸಲಾಗಿದೆ. ಹೀಗೆ ಅನೇಕ ಆಕರ್ಷಕ ಫೀಚರ್​ಗಳಿರುವ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ ಎಂಬುದು ವಿಶೇಷ. ಹಾಗಾದ್ರೆ ಮೋಟೋ G42 ಸ್ಮಾರ್ಟ್​​ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್​ಗಳಿವೆ ಎಂಬುದನ್ನು ನೋಡೋಣ.

ಮೋಟೋ G42 ಸ್ಮಾರ್ಟ್​​ಫೋನ್ ಭಾರತದಲ್ಲಿ ಸದ್ಯಕ್ಕೆ ಇಂದು ಆಯ್ಕೆಯಲ್ಲಷ್ಟೆ ರಿಲೀಸ್ ಆಗಿದೆ. ಇದರ 4 RAM + 64 GB ಸ್ಟೋರೇಜ್‌ ಸಾಮರ್ಥ್ಯಕ್ಕೆ 13,999 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​​ನಲ್ಲಿ ಈ ಫೋನ್ ಜುಲೈ 11 ರಿಂದ ಖರೀದಿಗೆ ಸಿಗಲಿದೆ. ಮೊದಲ ಸೇಲ್ ಪ್ರಯುಕ್ತ SBI ಕಾರ್ಡ್​​ ಮೂಲಕ ಖರೀದಿಸಿದರೆ ಮೋಟೋ G42 ಮೇಲೆ 1,000 ರೂ. ಗಳ ಡಿಸ್ಕೌಂಟ್ ಸಿಗಲಿದೆ.

Asus ROG Phone 6: ಏಸಸ್ ರಾಗ್ ಫೋನ್ 6, 6 ಪ್ರೊ ಬಿಡುಗಡೆಗೆ ಡೇಟ್ ಫಿಕ್ಸ್: ಕಾದು ಕುಳಿತಿದ್ದಾರೆ ಟೆಕ್ ಪ್ರಿಯರು

ಇದನ್ನೂ ಓದಿ
Moto G42: ಭಾರತದಲ್ಲಿಂದು ಬಹುನಿರೀಕ್ಷಿತ ಮೋಟೋ G42 ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಎಷ್ಟು?
ಬರೋಬ್ಬರಿ 21000mAh ಬ್ಯಾಟರಿ ಫೋನ್ ಲಾಂಚ್: ಒಮ್ಮೆ ಚಾರ್ಜ್ ಫುಲ್ ಮಾಡಿದ್ರೆ 100 ದಿನ ನೋ ಟೆನ್ಶನ್
Nothing Phone 1: ಫ್ಲಿಪ್​ಕಾರ್ಟ್​​ನಲ್ಲಿ ನಥಿಂಗ್ ಫೋನ್ 1 ಪ್ರೀ ಆರ್ಡರ್​ ಆರಂಭ: ಬುಕ್ಕಿಂಗ್​ಗೆ ಭರ್ಜರಿ ಬೇಡಿಕೆ
Whatsapp: ವಾಟ್ಸ್​ಆ್ಯಪ್​ನಲ್ಲಿ ಶಾಕಿಂಗ್ ಫೀಚರ್: ಮೆಸೇಜ್ ಡಿಲೀಟ್ ಮಾಡುವಾಗ ಸಿಗುತ್ತೆ ಹೊಸ ಆಯ್ಕೆ

ಮೋಟೋ G42 ಸ್ಮಾರ್ಟ್‌ಫೋನ್‌ 6.4 ಇಂಚಿನ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್‌ 12 ನ ಇತ್ತೀಚಿನ ಆವೃತ್ತಿಯ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇದು 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 20W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಒಟ್ಟಾರೆ ಬ್ಯಾಟರಿ ಕಾರ್ಯಕ್ಷಮತೆಯಲ್ಲಿ 20 ಪ್ರತಿಶತದಷ್ಟು ವರ್ಧಕವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಅನ್ನು ಹೊಂದಿದೆ. ಇದು ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿಯೊಂದಿಗೆ ಬರುತ್ತಿರುವುದು ವಿಶೇಷ. ಜೊತೆಗೆ ಲೋ ಲೈಟ್‌ ಸ್ಟೇಟಸ್‌ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ನೈಟ್ ವಿಷನ್ ಮೋಡ್ ಅನ್ನು ಒಳಗೊಂಡಿದೆ. 16 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ ಯನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡಾಲ್ಬಿ ಅಟ್ಮೋಸ್‌ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

Arnav Sivram: 17 ಕಂಪ್ಯೂಟರ್ ಪ್ರೊಗ್ರಾಮಿಂಗ್ ಕಲಿತ 13 ವರ್ಷದ ತಮಿಳುನಾಡಿನ ಬಾಲಕ ಅರ್ನವ್

Published On - 1:46 pm, Mon, 4 July 22