Motorola Edge 20 Pro: ಭಾರತದಲ್ಲಿ 30W ವೇಗದ ಚಾರ್ಜಿಂಗ್ ಇರುವ ಮೊಟೊರೊಲಾ ಎಡ್ಜ್ 20 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ

ಭಾರತದಲ್ಲಿ ಮೊಟೊರೊಲಾ ಎಡ್ಜ್ 20 ಪ್ರೊ ಸ್ಮಾರ್ಟ್‌ಫೋನ್‌ ಕೇವಲ ಒಂದು ಆಯ್ಕೆಯಲ್ಲಷ್ಟೆ ರಿಲೀಸ್ ಆಗಿದೆ. ಈ ಪ್ರಕಾರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 36,999 ರೂ. ಬೆಲೆ ನಿಗದಿ ಮಾಡಲಾಗಿದೆ.

Motorola Edge 20 Pro: ಭಾರತದಲ್ಲಿ 30W ವೇಗದ ಚಾರ್ಜಿಂಗ್ ಇರುವ ಮೊಟೊರೊಲಾ ಎಡ್ಜ್ 20 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ
Motorola Edge 20 Pro
Updated By: Vinay Bhat

Updated on: Oct 02, 2021 | 1:20 PM

ಭಾರತದಲ್ಲಿ ಈ ವರ್ಷ ಕೆಲ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತಿರುವ ಪ್ರಸಿದ್ಧ ಮೊಟೊರೊಲಾ (Motorola) ಕಂಪನಿ ಸದ್ಯ ಹೊಸ ಮೊಟೊರೊಲಾ ಎಡ್ಜ್ 20 ಪ್ರೊ (Motorola Edge 20 Pro) ಫೋನನ್ನು ದೇಶದಲ್ಲಿ ಅನಾವರಣ ಮಾಡಿದೆ. ಪಂಚ್ ಹೋಲ್ ಡಿಸ್ಪ್ಲೇ ವಿನ್ಯಾಸ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌, 30W ವೇಗದ ಚಾರ್ಜಿಂಗ್ ಬೆಂಬಲ ಸೇರಿದಂತೆ ಅನೇಕ ಆಕರ್ಷಕ ಫೀಚರ್​ಗಳನ್ನು ಈ ಸ್ಮಾರ್ಟ್​ಫೋನ್ ಹೊಂದಿದ್ದು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Flipkart Big Billion Days) ಮಾರಾಟ ಕಾಣಲಿದೆ.

ಭಾರತದಲ್ಲಿ ಮೊಟೊರೊಲಾ ಎಡ್ಜ್ 20 ಪ್ರೊ ಸ್ಮಾರ್ಟ್‌ಫೋನ್‌ ಕೇವಲ ಒಂದು ಆಯ್ಕೆಯಲ್ಲಷ್ಟೆ ರಿಲೀಸ್ ಆಗಿದೆ. ಈ ಪ್ರಕಾರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 36,999 ರೂ. ಬೆಲೆ ನಿಗದಿ ಮಾಡಲಾಗಿದೆ. ಇದು ಫ್ಲಿಪ್‌ಕಾರ್ಟ್ ಮೂಲಕ ಭಾನುವಾರ, ಅಕ್ಟೋಬರ್ 3 ರಿಂದ ಪ್ರಿ-ಆರ್ಡರ್ ಮೂಲಕ ಲಭ್ಯವಿದೆ. ಅಲ್ಲದೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಮೂಲಕ ಖರೀದಿಸಬಹುದು. ಜೊತೆಗೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೇಲೆ 10% ರಿಯಾಯಿತಿ ಒಳಗೊಂಡಿದೆ. ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಆರು ತಿಂಗಳವರೆಗೆ ನೋ ಕಾಸ್ಟ್‌ ಇಎಂಐ ಆಯ್ಕೆಗಳು ಇರುತ್ತದೆ.

ಮೊಟೊರೊಲಾ ಎಡ್ಜ್ 20 ಪ್ರೊ ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7-ಇಂಚಿನ ಫುಲ್-HD+ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಮೈ UX ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ f/1.9 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಟೆಲಿಫೋಟೋ ಲೆನ್ಸ್‌ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಮೊಟೊರೊಲಾ ಎಡ್ಜ್ 20 ಪ್ರೊ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದ್ದು, 30W ಟರ್ಬೊಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.1, GPS/ A-GPS, NFC ಮತ್ತು USB Type-C ಪೋರ್ಟ್ ಬೆಂಬಲಿಸಲಿದೆ. ಇದರ ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್ ಸೇರಿದಂತೆ ಇತ್ತೀಚೆಗಿನ ಹೊಸ ಫೀಚರ್ಸ್ ಇದರಲ್ಲಿದೆ.

Redmi Note 10 Lite: ಭಾರತದಲ್ಲಿ ಬಂಪರ್ ಫೀಚರ್ಸ್, ಕಡಿಮೆ ಬೆಲೆಯ ರೆಡ್ಮಿ ನೋಟ್ 10 ಲೈಟ್ ಸ್ಮಾರ್ಟ್​ಫೋನ್ ರಿಲೀಸ್

Amazon: ಕೇವಲ 1 ರೂ. ಗೆ ಸ್ಮಾರ್ಟ್​ಫೋನ್ ಸೇರಿ ಅನೇಕ ಪ್ರಾಡಕ್ಟ್ ಬುಕ್ ಮಾಡಿ: ಅಮೆಜಾನ್​ನಿಂದ ಹಿಂದೆಂದೂ ನೀಡದ ಆಫರ್

(Motorola Edge 20 Pro Motorola has finally lifted the veil of the Edge 20 Pro in India)