ಇತರೆ ದೇಶಗಳಿಗೆ ಹೋಲಿಸಿದರೆ ಆಕರ್ಷಕ ಕ್ಯಾಮೆರಾದ ಸ್ಮಾರ್ಟ್ಫೋನ್ಗಳಿಗೆ (Smartphones) ಭಾರತದಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿಂದೆ ಶವೋಮಿ ಕಂಪನಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ಮೊಬೈಲ್ಗಳನ್ನು ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಕೂಡ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ಗಳಿಗೆ ಭಾರತದಲ್ಲಿ ಬೇಡಿಕೆ ಇದೆ. ಹೀಗಿರುವಾಗ ಮೋಟೋರೊಲಾ ಕಂಪನಿ ಒಂದು ಹೆಜ್ಜೆ ಮುಂದೆಯಿಟ್ಟಿದ್ದು ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ದೇಶದಲ್ಲಿ ಲಾಂಚ್ ಮಾಡಿದೆ. ಇದರ ಹೆಸರು ಮೋಟೋರೊಲಾ ಎಡ್ಜ್ 30 ಅಲ್ಟ್ರಾ 5ಜಿ (Motorola Edge 30 Ultra 5G). ಈ ಫೋನಿನ ಪ್ರಮುಖ ವಿಶೇಷತೆ ಕ್ಯಾಮೆರಾ ಆಗಿದ್ದು, ಇದು ವಿಶ್ವದ ಮೊಟ್ಟ ಮೊದಲ 200 ಮೆಗಾಫಿಕ್ಸೆಲ್ ಕ್ಯಾಮೆರಾ (200MP Camera Phone) ಹೊಂದಿರುವ ಫೋನಾಗಿದೆ. ಜೊತೆಗೆ ಅತ್ಯಂತ ವೇಗದ 125W ಫಾಸ್ಟ್ ಚಾರ್ಜರ್ ಅಳವಡಿಸಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು, ಫೀಚರ್ಸ್ ಏನೇನಿದೆ ಎಂಬುದನ್ನ ನೋಡೋಣ.
ಮೋಟೋ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ ಭಾರತದಲ್ಲಿ 59,999 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ ಬಿಗ್ ಬಿಲಿಯನ್ ಡೇಸ್ನಲ್ಲಿ ಈ ಫೋನ್ ಸೇಲ್ ಕಾಣಲಿದೆ. ಮೊದಲ ಸೇಲ್ ಪ್ರಯುಕ್ತ ಎಡ್ಜ್ 30 ಅಲ್ಟ್ರಾ ಫೋನನ್ನು ನೀವು 54,999 ರೂ. ಗೆ ಖರೀದಿಸಬಹುದಂತೆ.
ಮೋಟೋ ಎಡ್ಜ್ 30 ಅಲ್ಟ್ರಾ ಫೀಚರ್ಗಳ ಬಗ್ಗೆ ನೋಡುವುದಾದರೆ, ಇದು 6.67 ಇಂಚಿನ ಫುಲ್ ಹೆಚ್ಡಿ+ pOLED ಡಿಸ್‌ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ರೇಟ್ನಿಂದ ಕೂಡಿದ್ದು ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ನೀಡಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಸ್ನಾಪ್‌ಡ್ರಾಗನ್ ಎಲೈಟ್ ಗೇಮಿಂಗ್ ಫೀಚರ್ ಕೂಡ ಅಳವಡಿಸಲಾಗಿದೆ.
ವಿಶೇಷವಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದು f/1.9 ಅಪಾರ್ಚರ್ ಲೆನ್ಸ್ನಿಂದ ಕೂಡಿದೆ. ಎರಡನೇ ಕ್ಯಾಮೆರಾ 50 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಬೃಹತ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.ಇದರಲ್ಲಿ ಪ್ರಾಥಮಿಕ ಕ್ಯಾಮರಾ OIS ಬೆಂಬಲವನ್ನು ಪಡೆದುಕೊಂಡಿದೆ. ಸೆಲ್ಪೀ ಕ್ಯಾಮೆರಾವು 4K ವಿಡಿಯೋ ರೆಕಾರ್ಡ್ ಮಾಡುತ್ತದೆ.
#FindYourEdge with all-new #MotorolaEdge30Ultra, featuring the World’s First* 200MP Camera, flagship Snapdragon® 8+ Gen1 Processor & much more at an exclusive launch price of ₹54,999*! Sale starts 22 Sept on @Flipkart & at leading retail stores.
*T&C – Motorola Smartphone Range— Motorola India (@motorolaindia) September 13, 2022
ದೀರ್ಘ ಸಮಯ ಬಾಳಿಕೆ ಬರುವ ಬಲಿಷ್ಠ 4610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 125W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ. ಈ ಮೂಲಕ ಕೆಲವೇ ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಕಂಪನಿ ಹೇಳಿರುವ ಪ್ರಕಾರ 7 ನಿಮಿಷ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ಉಪಯೋಗಿಸಬಹುದಂತೆ. ಇದರ ಜೊತೆಗೆ 50W ವೈಯರ್ಲೆಸ್ ಚಾರ್ಜಿಂಗ್ ಸಪೋರ್ಟ್ ಕೂಡ ಪಡೆದುಕೊಂಡಿದೆ.