AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಯಲ್ ಮಿಯಿಂದ ಕೇವಲ 7,999 ರೂ. ಗೆ ಹೊಸ ಫೋನ್ ರಿಲೀಸ್: ಬಜೆಟ್ ಪ್ರಿಯರು ಫುಲ್ ಫಿದಾ

ರಿಯಲ್‌ ಕಂಪನಿ ಭಾರತದಲ್ಲಿ ಹೊಸದಾಗಿ ಇದೀಗ ರಿಯಲ್‌ ಮಿ ನಾರ್ಜೊ 50ಐ ಪ್ರೈಮ್‌ (Realme Narzo 50i Prime) ಫೋನ್‌ ಅನ್ನು ಅನಾವರಣ ಮಾಡಿದೆ. ಇದು ರಿಯರ್ ಕ್ಯಾಮೆರಾ ಹೊಂದಿದ್ದು ಬಲಿಷ್ಠವಾದ ಬ್ಯಾಟರಿ ಬ್ಯಾಕಪ್​ನೊಂದಿಗೆ ಬಿಡುಗಡೆ ಆಗಿದೆ.

ರಿಯಲ್ ಮಿಯಿಂದ ಕೇವಲ 7,999 ರೂ. ಗೆ ಹೊಸ ಫೋನ್ ರಿಲೀಸ್: ಬಜೆಟ್ ಪ್ರಿಯರು ಫುಲ್ ಫಿದಾ
Realme Narzo 50i Prime
TV9 Web
| Updated By: Vinay Bhat|

Updated on:Sep 18, 2022 | 10:56 AM

Share

ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈರೇಂಜ್ ವರೆಗೆ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಪ್ರಸಿದ್ಧ ರಿಯಲ್‌ ಮಿ (Realme) ಕಂಪನಿ 2022ರಲ್ಲಂತು ಅತ್ಯುತ್ತಮ ಮೊಬೈಲ್​​ಗಳನ್ನು ಪರಿಚಯಿಸಿದೆ. ಈಗಾಗಲೇ ಸಾಲು ಸಾಲು ರಿಯಲ್ ಮಿ ಸ್ಮಾರ್ಟ್​ಫೋನ್​ಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಇದರ ನಡುವೆ ಕಂಪನಿ ಭಾರತದಲ್ಲಿ ಹೊಸದಾಗಿ ಇದೀಗ ರಿಯಲ್‌ ಮಿ ನಾರ್ಜೊ 50ಐ ಪ್ರೈಮ್‌ (Realme Narzo 50i Prime) ಫೋನ್‌ ಅನ್ನು ಅನಾವರಣ ಮಾಡಿದೆ. ಇದು ರಿಯರ್ ಕ್ಯಾಮೆರಾ ಹೊಂದಿದ್ದು ಬಲಿಷ್ಠವಾದ ಬ್ಯಾಟರಿ ಬ್ಯಾಕಪ್​ನೊಂದಿಗೆ ಬಿಡುಗಡೆ ಆಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು? ಏನೆಲ್ಲ ಫೀಚರ್ಸ್​ ಇವೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದು 3GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 4GB RAM ಮತ್ತು 64GB ರೂಪಾಂತರದದ ಬೆಲೆ 8,999 ರೂ. ಆಗಿದೆ. ಅಮೆಜಾನ್​ನಲ್ಲಿ ಸೆಪ್ಟೆಂಬ್ 23ಕ್ಕೆ ಆರಂಭವಾಗಲಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ನಲ್ಲಿ ಈ ಫೋನ್ ಖರೀದಿಗೆ ಸಿಗಲಿದೆ. ರಿಯಲ್ ಮಿ ಭಾರತದ ಅಧಿಕೃತ ವೆಬ್​ಸೈಟ್​ನಲ್ಲೂ ನಿಮ್ಮದಾಗಿಸಬಹುದು.

ಇದನ್ನೂ ಓದಿ
Image
YouTube: ಯೂಟ್ಯೂಬ್​ನಲ್ಲಿ ಹಣ ಗಳಿಸಲು ಇರುವ ಸುಲಭವಾದ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
Image
Motorola Edge 30 Ultra: ಭಾರತದಲ್ಲಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಮೊಟ್ಟ ಮೊದಲ ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಎಷ್ಟು?
Image
Airtel 5G: ಕೆಲವೇ ದಿನಗಳಲ್ಲಿ ಏರ್ಟೆಲ್ 5G ಲಭ್ಯ: 5G ಸೇವೆ ಬಳಸಲು ಹೊಸ ಸಿಮ್ ಅಗತ್ಯವಿದೆಯೇ?
Image
iOS 16 Update: ಬಹುನಿರೀಕ್ಷಿತ iOS 16 ಬಿಡುಗಡೆ: ಇದರಲ್ಲಿದೆ ಆಕರ್ಷಕ ಫೀಚರ್: ಡೌನ್​ಲೋಡ್ ಮಾಡುವುದು ಹೇಗೆ?

ಏನು ವಿಶೇಷತೆ?:

ರಿಯಲ್‌ ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ನೀಡಲಾಗಿದೆ. ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಯುನಿಸೆಕ್ T612 ಪ್ರೊಸೆಸರ್​ನಲ್ಲಿ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ ಮಿ R ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ರಿಯಲ್‌ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 10W ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11, ಬ್ಲೂಟೂತ್ 5.0, GPS/ A-GPS, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ.

Published On - 6:05 am, Wed, 14 September 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!