Moto G32: ಮೋಟೋ ಕಂಪನಿಯ ಈ ಹೊಸ ಬಜೆಟ್ ಫೋನ್​ನಲ್ಲಿದೆ ಅಚ್ಚರಿಗೊಳ್ಳುವ ಫೀಚರ್ಸ್​

| Updated By: Vinay Bhat

Updated on: Jul 31, 2022 | 12:34 PM

ಮೋಟೋರೊಲಾ ಕಂಪನಿ ಸದ್ದಿಲ್ಲದೆ ತನ್ನ ಹೊಸ ಮೋಟೋ ಜಿ32 (Moto G32) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದು ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಕ್ಯಾಮೆರಾ, ಬ್ಯಾಟರಿ ಕೂಡ ನೀಡಲಾಗಿದೆ.

Moto G32: ಮೋಟೋ ಕಂಪನಿಯ ಈ ಹೊಸ ಬಜೆಟ್ ಫೋನ್​ನಲ್ಲಿದೆ ಅಚ್ಚರಿಗೊಳ್ಳುವ ಫೀಚರ್ಸ್​
Moto G32
Follow us on

ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಗೆ ಬಜೆಟ್ ಬೆಲೆಯ ಜೊತೆಗೆ ಹೈರೇಂಜ್ ಮಾದರಿಯಲ್ಲಿ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು (Smartphone) ಪರಿಚಯಿಸುತ್ತಿರುವ ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಈ ವರ್ಷ ಕೂಡ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವತ್ತಿದೆ. ಈಗಾಗಲೇ 200 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್​ಫೋನ್ ಅನ್ನು ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಮೋಟೋರೊಲಾ ಕಂಪನಿ ಸದ್ದಿಲ್ಲದೆ ತನ್ನ ಹೊಸ ಮೋಟೋ ಜಿ32 (Moto G32) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇದು ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಕ್ಯಾಮೆರಾ, ಬ್ಯಾಟರಿ ಕೂಡ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು? ಏನೆಲ್ಲ ಫೀಚರ್ಸ್​ ಇದೆ ಎಂಬುದನ್ನು ನೋಡೋಣ.

  1. ಮೋಟೋ G32 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಯುರೋಪಿಯನ್‌ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಕೆಲವೇ ತಿಂಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ. ಇದರ 4GB RAM ಮತ್ತು 128GB ಸ್ಟೋರೇಜ್‌ ಆಯ್ಕೆಗೆ EUR 209.99. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 17,000 ರೂ.
  2. ಈ ಫೋನ್ 6.5 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ದ ಜೊತೆಗೆ 90Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.
  3. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  4. ಮೋಟೋ G32 ಸ್ಮಾರ್ಟ್‌ಫೋನ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ F1.8 ಲೆನ್ಸ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ F2.2 ಲೆನ್ಸ್‌ ಹೊಂದಿರುವ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್‌ ಹೊಂದಿದೆ.
  5. ಇದನ್ನೂ ಓದಿ
    Best Smart Tv: ಬಜೆಟ್ ಬೆಲೆಗೆ ಹೊಸ ಟಿವಿ ಖರೀದಿಸಬೇಕೇ?: ಇಲ್ಲಿದೆ ನೋಡಿ 5 ಬೆಸ್ಟ್​​ ಸ್ಮಾರ್ಟ್​​ ಟಿವಿ
    Redmi K50S Pro: 108MP ಕ್ಯಾಮೆರಾ ಮರೆತು ಬಿಡಿ: ಶವೋಮಿ ತರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್​​ಫೋನ್
    BGMI: ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಭಾರತದಲ್ಲಿ ಬ್ಯಾನ್ ಆಗಿದೆಯೇ?: ಅನೇಕರ ಪ್ರಶ್ನೆಗೆ ಇಲ್ಲಿದೆ ಉತ್ತರ
    Fake App: ಪ್ಲೇಸ್ಟೋರ್​​ನಲ್ಲಿ ಹಣ ಕದಿಯುವ ಫೇಕ್ ಆ್ಯಪ್ ಪತ್ತೆ: ಇನ್​ಸ್ಟಾಲ್ ಆಗಿದ್ರೆ ತಕ್ಷಣವೇ ಡಿಲೀಟ್ ಮಾಡಿ
  6. ಈ ಫೋನ್​ನಲ್ಲಿರುವ ಮೂರನೇ ಕ್ಯಾಮೆರಾ F2 ಜೊತೆಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
  7. ಬಲಿಷ್ಠವಾದ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಯುಎಸ್​ಬಿ-C ಪೋರ್ಟ್ ಅನ್ನು ಅಳವಡಿಸಲಾಗಿದೆ.

Published On - 12:34 pm, Sun, 31 July 22