Kannada News Technology Motorola launched its new phone Moto G62 5G but price is yet to be revealed by the company
Moto G62 5G: ಬೆಲೆ ಬಹಿರಂಗ ಪಡಿಸದೆ ಹೊಸ ಫೋನ್ ರಿಲೀಸ್ ಮಾಡಿದ ಮೋಟೋ: ಇದರ ಫೀಚರ್ಸ್ ನೋಡಿ
ಎರಡು ದಿನಗಳ ಹಿಂದೆಯಷ್ಟೆ ತನ್ನ G ಸರಣಿಯಲ್ಲಿ ಮೋಟೋ G82 ಫೋನನ್ನು ಅನಾವರಣ ಮಾಡಿದ್ದ ಕಂಪನಿ ಈಗ ಇದೇ ಸರಣಿ ಅಡಿಯಲ್ಲಿ ಮತ್ತೊಂದು ಫೋನನ್ನು ಪರಿಚಯಿಸಿದೆ. ಅದುವೇ ಮೋಟೋ ಜಿ62 5ಜಿ (Moto G62 5G).
Moto G62 5G
Follow us on
ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬ್ರ್ಯಾಂಡ್ಗಳು ಬಂದರೂ ಮೋಟೋರೊಲ (Motorola) ಸಂಸ್ಥೆ ಅಂದಿನಿಂದ ವಿಶೇಷ ಸ್ಥಾನ ಸಂಪಾದಿಸುತ್ತಾ ಬಂದಿದೆ. ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿರುವ ಮೋಟೋ ಈಗೀಗ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ತನ್ನ G ಸರಣಿಯಲ್ಲಿ ಮೋಟೋ G82 ಫೋನನ್ನು ಅನಾವರಣ ಮಾಡಿದ್ದ ಕಂಪನಿ ಈಗ ಇದೇ ಸರಣಿ ಅಡಿಯಲ್ಲಿ ಮತ್ತೊಂದು ಫೋನನ್ನು ಪರಿಚಯಿಸಿದೆ. ಅದುವೇ ಮೋಟೋ ಜಿ62 5ಜಿ (Moto G62 5G) ಸ್ಮಾರ್ಟ್‌ಫೋನ್. 50 ಮೆಗಾ ಪಿಕ್ಸಲ್ ಸೆನ್ಸಾರ್ನ ಆಕರ್ಷಕ ಕ್ಯಾಮೆರಾ ಹೊಂದಿರುವ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಕೂಡ ಒಳಗೊಂಡಿದೆ. ಆದರೆ, ಈ ಫೋನಿನ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ. ಹಾಗಾದ್ರೆ ಇದರ ವಿಶೇಷತೆ ಏನು ಎಂಬುದನ್ನು ನೋಡೋಣ.
ಮೊಟೊ G62 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ HD + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ ಆಗಿದೆ.
ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 ಪ್ಲಸ್ SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಓಎಸ್‌ನ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಈ ಫೊನ್ Adreno 619 GPU ಸಹ ಒಳಗೊಂಡಿದೆ.
ಇದನ್ನೂ ಓದಿ
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ f/1.8 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು ಡೆಪ್ತ್ ಶೂಟರ್ ಆಗಿದೆ.
ಹಾಗೆಯೆ ಈ ಫೋನಿನಲ್ಲಿರುವ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಮೊಟೊ G62 5G ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು 20W ಟರ್ಬೋ ಪವರ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್ v5.1, GPS/ A-GPS, NFC, FM ರೇಡಿಯೋ, ಯುಎಸ್‌ಬಿ ಟೈಪ್ C, ಮತ್ತು 3.5 mm ಹೆಡ್‌ಫೋನ್ ಆಡಿಯೊ ಜ್ಯಾಕ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.