Moto E40: ಭಾರತದಲ್ಲಿ ಬಿಡುಗಡೆ ಆಯ್ತು ಮೋಟೋ E40 ಸ್ಮಾರ್ಟ್​ಫೋನ್: ಇದರ ಬೆಲೆ ಕೇವಲ 9,499 ರೂ.

| Updated By: Vinay Bhat

Updated on: Oct 12, 2021 | 3:04 PM

ಭಾರತದಲ್ಲಿ ಮೋಟೋರೊಲಾ ಕಂಪನಿಯ ಮೋಟೋ E40 ಸ್ಮಾರ್ಟ್‌ಫೋನ್‌ ಬೆಲೆ ಅತ್ಯಂತ ಕಡಿಮೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 9,499 ರೂ. ನಿಗದಿ ಮಾಡಲಾಗಿದೆ.

Moto E40: ಭಾರತದಲ್ಲಿ ಬಿಡುಗಡೆ ಆಯ್ತು ಮೋಟೋ E40 ಸ್ಮಾರ್ಟ್​ಫೋನ್: ಇದರ ಬೆಲೆ ಕೇವಲ 9,499 ರೂ.
Motorola Moto E40
Follow us on

ಈ ವರ್ಷ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಇದೀಗ ತನ್ನ ಬಹು ನಿರೀಕ್ಷಿತ ಮೋಟೋ ಇ40 (Moto E40) ಸ್ಮಾರ್ಟ್‌ಫೋನ್‌ ಅನ್ನು ಅಧಿಕೃತವಾಗಿ ಭಾರತದಲ್ಲಿ ಅನಾವರಣ ಮಾಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌, 10W ಚಾರ್ಜಿಂಗ್ ಬೆಂಬಲಿಸುವ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಸ್ಮಾರ್ಟ್​ಫೋನ್ (Smartphone) ಒಳಗೊಂಡಿದ್ದು ಬಜೆಟ್ ಬೆಲೆಗೆ ಮಾರಾಟ ಮಾಡುತ್ತಿದೆ.

ಹೌದು, ಭಾರತದಲ್ಲಿ ಮೋಟೋರೊಲಾ ಕಂಪನಿಯ ಮೋಟೋ E40 ಸ್ಮಾರ್ಟ್‌ಫೋನ್‌ ಬೆಲೆ ಅತ್ಯಂತ ಕಡಿಮೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 9,499 ರೂ. ನಿಗದಿ ಮಾಡಲಾಗಿದೆ. ಕಾರ್ಬನ್ ಗ್ರೇ ಮತ್ತು ಪಿಂಕ್ ಕ್ಲೇ ಬಣ್ಣಗಳಲ್ಲಿ ಈ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಾಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಅಕ್ಟೋಬರ್ 17 ರಂದು ಫಸ್ಟ್‌ ಸೇಲ್‌ ಆರಂಭಿಸಲಿದೆ.

ಮೋಟೋ E40 ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಮ್ಯಾಕ್ಸ್ ವಿಷನ್ ಹೆಚ್‌ಡಿ+ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಯೂನಿಸೋಕ್ T700 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಬಳಸಿ ಸಂಗ್ರಹ ಸಾಮರ್ಥ್ಯವನ್ನು 1TB ವರೆಗೆ ವಿಸ್ತರಿಸಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಜೊತೆಗೆ f/1.79 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ f/2.4 ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇನ್ನು ರಿಯರ್‌ ಕ್ಯಾಮೆರಾಗಳು ಪೋರ್ಟ್ರೇಟ್ ಮೋಡ್, ಪನೋರಮಾ, ಫೇಸ್ ಬ್ಯೂಟಿ, ಎಚ್‌ಡಿಆರ್ ನೈಟ್ ವಿಷನ್, ಮ್ಯಾಕ್ರೋ ವಿಷನ್ ಮತ್ತು ಪ್ರೊ ಮೋಡ್ ಫೀಚರ್ಸ್‌ಗಳನ್ನು ಬೆಂಬಲಿಸುತ್ತವೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11 a/b/g, ಬ್ಲೂಟೂತ್ v5.0, GPS/A-GPS, FM ರೇಡಿಯೋ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಮತ್ತು ಸಾಮೀಪ್ಯ ಸೆನ್ಸರ್ ಅನ್ನು ಒಳಗೊಂಡಂತೆ ಇತ್ತೀಚೆಗಿನ ಹೆಚ್ಚಿನ ಆಯ್ಕೆಯನ್ನು ಸೇರಿಸಲಾಗಿದೆ.

ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?: ಈ ವಿಚಾರ ನಿಮಗೆ ತಿಳಿದಿರಲಿ

Flipkart Big Billion Days sale 2021: ಐಪೋನ್ ಖರೀದಿಸಲು ಈಗ ಹೆಚ್ಚು ಹಣ ಬೇಡ: ಕೇವಲ 30,000 ರೂ. ಇದ್ದರೆ ಸಾಕು

(Motorola Moto E40 With Triple Rear Cameras launched in India Sale on Flipkart)